ಇವತ್ತು ನಮ್ಮ ದೇಶದಲ್ಲಿ ಒಂದು ಜಾತ್ಯಾತೀತ ಸಂವಿಧಾನವಿದೆ .ಆ ಸಂವಿಧಾನ ನಮ್ಮ ಹೊಸ ಧರ್ಮವಾಗಬೇಕು.ಅದರಲ್ಲಿನ ಜಾತ್ಯತೀತ ತತ್ವಗಳನ್ನು ನಾವು ಅವಲಂಬಿಸಿದರೆ ಅದು ಜಾತಿ ವಿನಾಶಕ್ಕೂ ಮತ್ತು ಕೋಮುದಳ್ಳುರಿಗೂ ಪರಿಹಾರವಾಗುತ್ತದೆ.
-ಪೂರ್ಣಚಂದ್ರ ತೇಜಸ್ವಿ-
ಪ್ರಕೃತಿ ಮಾನವನ ಕೈಗೆ ಎಂದೂ ಎಟುಕದ ಅನಂತ ದಿವ್ಯ ನಿಗೂಢತೆಗಳ ಆಗರ ಎಂದು ಸೂಚ್ಯಗೋಳಿಸಿದವರಿವರು.
ವಿಜ್ಞಾನ ಜಗತ್ತಿನ ಜ್ಞಾನವನ್ನು ಕನ್ನಡದ ಓದುಗರಿಗೆ ,ಯುವ ಪೀಳಿಗೆಗೆ ದಕ್ಕಿಸಿದ ಒಂದರೀತಿಯ ವಿಜ್ಞಾನಿ, ಸಂಶೋಧಕರು.
ಮೌನವಾಗಿಯೆ ಹಕ್ಕಿಗಳ ಗುಣ , ವರ್ತನೆ , ಚಲನವಲನಗಳ
ಸೆರೆಯಿಡಿದ ಅದ್ಬುತ ಛಾಯಗ್ರಾಹಕರು.
ತಮ್ಮ ವಿಶಿಷ್ಟ ಬರವಣಿಗೆಯ ಮೂಲಕ ಯುವಪೀಳಿಗೆಯ ಮನಸೆಳೆಯುವ ಮೂಡುಗೆರೆಯ ಮಾಯವಿಯಿವರು.
ಸಾಮಾನ್ಯಳಂತಿದ್ದ ನನ್ನ ತಮ್ಮ ಪುಸ್ತಕಗಳ ಮೂಲಕ ಪುಸ್ತಕ ಪ್ರೇಮದ ಭವ್ಯ ಜಗತ್ತಿಗೆ ನನ್ನ ಸೆಳೆದವರು.
ಅವರ ಪುಸ್ತಕ ಓದುವುದರಿಂದ ಆರಂಭಿಸಿದ ನಾನು ಇಂದು ಅವರ ವ್ಯಕ್ತಿತ್ವ , ಜೀವನ ಶೈಲಿ ಎಲ್ಲವ ತಿಳಿಯುವ ಅಮೋಘ ಆಸಕ್ತಿಯಿಂದ ಮುಂದುವರೆಯುತ್ತಿರುವೆ.
-
ಪದಪುಂಜಗಳಲೇ
ಕಾಡುಮೇಡುಗಳ ಸುತ್ತಿಸಿ,
ಕಲ್ಪನೆಗೂ ಮೀರಿದ
ಹೊಸಲೋಕವ
ಪರಿಚಯಿಸುತ
ನನ್ನೊಳಗಿನ
ಪುಟ್ಟ ಓದುಗಳಿಗೆ
ಅನಿರ್ವಚನೀಯ
ಅನುಭೂತಿಯ
ದರ್ಶನ ಮಾಡಿಸಿದ
ಮಹಾನ್ ಚೇತನಕ್ಕೆ,
Happy birthday-
ಬಯಕೆಗಳ ಬೆನ್ನತ್ತಿ ಕಾಲು
ಮುರಿದುಕೊಂಡ ಮನಸ್ಸು,
ಮುರಿದ ಮನವಿಡಿದ ಹಾದಿಯಿಂದ
ಛಿದ್ರವಾದ ಬದುಕು !-
ಕನ್ನಡದ ಪ್ರಮುಖ ಸಾಹಿತಿಗಳವರು
ವೃತ್ತಿಯಲ್ಲಿ ನುರಿತ ಅನುಭವದ ಕೃಷಿಕರು
ಬಂಡಾಯ ಸಾಹಿತ್ಯದ ಪ್ರಾರಂಭಿಕರು
ಕಣ್ಣಲ್ಲೇ ಸೆರೆಹಿಡಿಯುವ ಛಾಯಚಿತ್ರಗಾರರು
ಹಲವಾರು ಕತೆ,ಕವಿತೆ,ನಾಟಕ ಬರಹಗಾರರು
ವಿಧ ವಿಧ ಶೈಲಿಯ ಕಾದಂಬರಿಕಾರರು
ಪಂಪಾ ಪ್ರಶಸ್ತಿಗೆ ಭಾಜನರಾಗಿದ್ಧವರು
ಹಲವಾರು ಕಿರೀಟಗಳ ಮೂಡಿಗೆರಿಸಿಕೊಂಡವರು
"ಪೂಚಂತೇ" ಕಾವ್ಯನಾಮವ ಹೊಂದಿದವರು
ಶಿವಮೊಗ್ಗದ ಕುಪ್ಪಳಿಯಲ್ಲಿ ಜನಿಸಿದವರು
ರಾಷ್ಟ್ರಕವಿ ಕುವೆಂಪುರವರ ಪುತ್ರರವರು
ಚಂದ್ರನಂತೆ ಹೊಳೆಯುವ "ತೇಜಸ್ವಿ"ಯವರು-
"ನಾವು ಬಯಸಿದಂತೆ
ಬದುಕುವ ಸ್ವಾತಂತ್ರ್ಯ
ಯಾವತ್ತೂ ಭಯಾನಕ
ಹೋರಾಟದ ಫಲವೇ
ಹೊರತು ಸುಲಭಕ್ಕೆ
ಸಿಗುವುದಿಲ್ಲ"
-ಪೂರ್ಣ ಚಂದ್ರ ತೇಜಸ್ವಿ.
ಹಸಿರಿನಲ್ಲಿ ಉಸಿರು
ಬೆರೆಸಿದ್ದ ನೇರನುಡಿಯ
ಹರಿಕಾರ..
ಮೌನದಲ್ಲೇ ಮಾತನಾಡಿದ
ಜಾದುಗಾರನಿಗೆ
ಹುಟ್ಟು ಹಬ್ಬದ ಹಾರ್ಧಿಕ
ಶುಭಾಶಯಗಳು..
(Read in caption...👇👇
-
ಚಿದಂಬರ ರಹಸ್ಯದಿಂದ
ಜುಗಾರಿ ಕ್ರಾಸ್ ವರೆಗೂ
ಗಯ್ಯಾಳಿಗಳಿಂದ
ಮಾಯಾಲೋಕದ ವರೆಗೂ
ನಿಗೂಢ ಮನುಷ್ಯರ ಸಹವಾಸದೊಡನೆ
ಹಲಿಯೂರಿನ ಸರಹದ್ದನ್ನು ದಾಟಿ
ಅಂಡಮಾನಿನಲ್ಲಿ
ಪರಿಸರದ ಕತೆ ಹಣೆದು
ಹೆಜ್ಜೆ ಮೂಡದ ಹಾದಿಯಲ್ಲಿ ಸಾಗಿದವರು
ನಮ್ಮ
ಕನ್ನಡದ ಒಂಟಿ ಸಲಗ
ಕೆ.ಪಿ.ಪೂರ್ಣಚಂದ್ರ ತೇಜಸ್ವಿಯ
ನೆನೆಯೋಣವೇ ಈ ದಿನ..-
ಅಲೆಮಾರಿ ಆತ್ಮವಿದು,
ಕಾಡುವುದೆಷ್ಟೋ, ಕಲಿಸುವುದೆಷ್ಟೋ..
ವನ್ಯ ಒಡಲಿನ ಜೀವವಿದು,
ಬರೆದದೆಷ್ಟೋ, ನಮ್ಮೋಳು ಬೆರೆತದೆಷ್ಟೋ..
ಸರಳತೆ ಸೌಜನ್ಯತೆಯಲ್ಲೇ ಮನವ
ಆವರಿಸಿದ ಕಲೆಗಾರ..
ಕವಿ ಕರದಲಿ ಬೆಳೆದು ಬಂದ
"ಪೂರ್ಣ ಚಂದ್ರ" ಕಥೆಗಾರ...-