ಆಶ್ಲೇಷಾ   (ಆಶ್ಲೇಷಾ)
1.1k Followers · 26 Following

ಒಬ್ಬಂಟಿ
ಸೋಮಾರಿ
ಮರುಳೆ
Joined 28 November 2018


ಒಬ್ಬಂಟಿ
ಸೋಮಾರಿ
ಮರುಳೆ
Joined 28 November 2018

ಅವಳ ಬಿಚ್ಚುಗೂದಲ
ಸ್ವಾತಂತ್ರ್ಯ ಸಂಭ್ರಮದಲ್ಲಿ,
ಅಸ್ಥಿತ್ವ ಕಳೆದುಕೊಂಡ
ಮಲ್ಲಿಗೆ ದಂಡೆ ಅಳುತ್ತಿತ್ತು!!
ಸ್ವಾತಂತ್ರ್ಯವೆಂದರೆ ಇಷ್ಟೆಯೇ?

-


14 JUL 2024 AT 23:20

ನಿಕಟರಂತೆ ಕಾಣುವವರೆಲ್ಲಾ
ನಿಜಕ್ಕೂ ನಮ್ಮವರೇ?
ಅಥವಾ ಬರಿಗಣ್ಣಿಗೆ
ಭೂಮ್ಯಾಕಾಶವನೊಂದಾಗಿ
ತೋರಿಸೋ ಕ್ಷಿತಿಜದಂಥಹ
ಭ್ರಮೆಯೇ?

-


20 APR 2024 AT 2:59

ಅದಿನ್ನೆಷ್ಟು ಸಾಲವಿದೆ ಹುಡುಗಾ?
ನಿನ್ನಾ ನೆನಪುಗಳೆಲ್ಲ ಇಂದಿಗೂ ಅರ್ಧ ರಾತ್ರಿಯ ಜೀತದಾಳುಗಳೇ !!

-


12 SEP 2022 AT 23:37

ಒಂಟಿತನದ ಕುಳಿರ್ಗಾಳಿ
ಎದೆಯ ಹೊಕ್ಕಾಗಲೇ
ತಿಳಿದಿದ್ದು,
ಅರ್ಧರಾತ್ರಿಗಳಲ್ಲಾ
ಅವನೆದೆಯಷ್ಟು
ಬೆಚ್ಚಗಿರುವುದಿಲ್ಲವೆಂದು!

-


10 SEP 2022 AT 21:14

ಅಬ್ಬರದ ಮಳೆಗಳಿಗೇ
ಒಗ್ಗಿಕೊಂಡವಳಿಗೆ
ನೀನೆಂಬ ನೀಲಾಕಾಶದ
ಜರೂರತ್ತೇನಿರಲಿಲ್ಲ.
ಆದರೂ ಒಲವಾಯ್ತು!!

-


13 AUG 2021 AT 21:10

ಕಳೆದಿದ್ದು, ಉಳಿದಿದ್ದು..!
(ಕ್ಯಾಪ್ಷನ್ ನಲ್ಲಿ)

-


29 JUL 2021 AT 0:53

ಸಂಚಾರಿ ನೀಲಮೇಘಗಳ
ಕೈಬೀಸಿ ಕರೆಯಬೇಡ,
ಎದೆಯಂಗಳವ ತಂಪಾಗಿಸುವ
ಭರದಲ್ಲಿ ಒಡಲ ಗುಡಿಲಿಗೇ
ಕೊಳ್ಳಿಯಿಟ್ಟಾವು!!

-


29 MAR 2021 AT 1:05

ಬೊಗಸೆತುಂಬಾ ಬೆಳದಿಂಗಳ
ಹೊತ್ತು ತರಲೇಬೇಕೆಂದಿಲ್ಲ ಹುಡುಗಾ,
ಕಾಡದಿರುವ ನಡುರಾತ್ರಿಯೊಂದ
ಹುಡುಕಿಕೊಡು ಸಾಕು!

-


21 JAN 2021 AT 1:51

ಎಲ್ಲರಿಗೂ ಧೂಳು ಹಿಡಿದು,
ಬಣ್ಣ ಮಾಸಿದ ಗೋಡೆಗಳಷ್ಟೇ ಕಂಡಿದ್ದು....
ಅದೇ ಸೂರಿನಡಿ ಪ್ರತಿ ರಾತ್ರಿ
ನೆಮ್ಮದಿಯಾಗಿ ನಿದ್ರಿಸುವ ಹಲವು
ಜೀವಗಳನ್ಯಾರೂ ನೋಡಲೇ ಇಲ್ಲ!!

-


14 JAN 2021 AT 16:40

ಒಲವ ಶಹರಿನ ಸರಹದ್ದಲ್ಯಾವುದೋ
ಕಣ್ಣೀರ ನದಿ ಹರಿಯುತ್ತದಂತೆ,
ಅಲ್ಲಿಗೆ ಹೋಗಿದ್ದ ಕನಸೊಂದು
ಇನ್ನೂ ಹಿಂದಿರುಗಿಲ್ಲ!

-


Fetching ಆಶ್ಲೇಷಾ Quotes