I will never forget
:How a person praised me initially
:How a person devalued me later-
ಮಾತೇ ಮೌನವಾದಾಗ ಲೇಖನಿ ಹಿಡಿಯುವ ಕಾಯಕ.
Department of Treasur... read more
My most liked african proverb
hard life creats good people ,
good people creats good life
good life creats weak people
-
ಹೆಣ್ಣು ಅಬಲೆಯಲ್ಲ
ಕೂಡಿಟ್ಟ ಮರೆಯಂಚಿನ ರಾಶಿ ಕನಸು ಪರದೆಯ ಸರಿಸಿರಲು
ತೊಟ್ಟು ಕಳಚಲು ಅಣಿಯಾದ ಹಾತೊರಗಳಿಗೆ ಹೊಸ ಹುರುಪು ಹುಟ್ಟಿರಲು
ಪಸೆಯಾರಿದ್ದ ನಾಲಗೆಯಿಂದು ಪ್ರಶ್ನಿಸತೊಡಗಿದೆ
ಬಿಟ್ಟುಕೊಡಲೊಲ್ಲದ್ದಕ್ಕೆ ಮನಸ್ಸು ಹಗುರೆಂದಿದೆ
ಬಾಹ್ಯಾಕಾಶದಲ್ಲೂ ಅವಳ ನೆರಳು ನಕ್ಕಾಗಿದೆ
ಮರೆತಿಲ್ಲ ಜವಬ್ದಾರಿಯ....ತೊರೆದಿಲ್ಲ ಕರ್ತವ್ಯವ....
ತಾಯಿ,ಮಡದಿ,ಮಗಳು,ಸಹೋದರಿಯಾಗಿ ಪರಿಪೂರ್ಣಳವಳು
ಜಗದ ಅನುವರದೊಳು ಹೋರಾಡುವುದ ಬಿಟ್ಟಿಲ್ಲ
ಸರ್ವ ವಿಧದಿ ಗೆಲುವಾದಳು ತಿಂದುಂಡು ನೋವಿನ ಬಳುವಳಿಯ
ಗಂಡು ಸಮಾಜದಲ್ಲಿ ಬಲವಾಗಿ ಬೇರೂರಲು ಆದಳಾಕೆ ಬಲಶಾಲಿ
ಶೋಕದ ರೂಪಗಳೆಲ್ಲಾ ಸೇರಲಣಿಯಾಗಿದೆ ಇತಿಹಾಸ ಪುಟವ
ಅರ್ಥಾತ್, ಹೆಣ್ಣು ಪ್ರಬಲೆ... ಅವಳು ಸರ್ವ ಸಬಲೆ
-
ನಾಳೆಯ ಖುಷಿಗೆ
ಇಂದು ಮಾಡುವ
ಒಳಿತೇ ತಳಹದಿ...
ಅಲೆದಾಡಿಸೋ ನೆಮ್ಮದಿಯು
ಕ್ಷಣ ಯೋಚಿಸದ
ನಿರ್ಧಾರದ ಪರಮಾವಧಿ..!
ಯೋಚಿಸಿ ... ಯೋಜಿಸಿ.-
ಬದುಕು ನೀಡೋ ಅತ್ಯುತ್ತಮ
ಉಡುಗೊರೆ ಅನುಭವ ಒಂದೇ ...
ಸಿಹಿಯೋ...ಕಹಿಯೋ....
ನೋಡಿಯೋ... ಮಾಡಿಯೋ..
ತುಳಿದೋ... ಬೆಳೆದೋ...
ಟೀಕೆಗೊಳಗಾಗಿಯೋ.. ಸವಾಲಾಗಿಸಿಯೋ..
ಎಲ್ಲವೂ ಎಲ್ಲಾ ವಿಧದಲ್ಲಿ ಪಾಠಗಳು.-
ಮಾತು ಬರೋ ಮೂಕಿ ನಾನಾಗಲು
ಸಂಬಂಧ ಉಳಿಯಿತು..
ದೃಷ್ಟಿಯಿರೋ ಕುರುಡಿ ಎಂದಾಗಲು
ಸೃಷ್ಟಿಯೆಲ್ಲಾ ನನ್ನ ಪ್ರೀತಿಸಿತು..
ತೆಪ್ಪಗಿದ್ದರೆ ನನಗಿಲ್ಲ ಶತ್ರುಗಳು
ತಪ್ಪು ಹುಡುಕಿದರೆ ನನ್ನವರೂ ಶತ್ರುಗಳೇ..!
ತಿಳಿಯದಾದೆ ನಾನು ನನ್ನ ಅಸ್ತಿತ್ವವ ..
ಇದ್ದೂ ಇಲ್ಲ ನಾನಿಲ್ಲಿ !
-