ಬಡವರ ಮನೆ ಹೆಣ್ಣು ಮಗಳು ಅಂತ
ಅಪ್ಪ ಅಮ್ಮನಿಗೆ ಅವಳ ಶವ ಕೊಡದೇನೆ ಸುಟ್ಟು ಹಾಕಿದರೂ ಅದೇ ಒಬ್ಬ ಮಂತ್ರಿ ಮಗಳಿಗೆ
ಹೀಗಾಗಿದ್ರೆ ಇಡೀ ಊರಿಗ ಊರನ್ನೇ ಸುಟ್ಟುಹಾಕಬಿಡ್ತಿದ್ರೇನೋ-
ಸುಳ್ಳನ್ನ ಶೃಂಗರಿಸಬಹುದಾದ ಜಾಣ್ಮೆ ನಿನ್ನಲ್ಲಿರಬಹುದು,
ಸತ್ಯವನ್ನು ಬೆತ್ತಲಾಗಿಸುವಂತಹ ಶಕ್ತಿ ಮಾತ್ರ ನಿನ್ನಲ್ಲಿಲ್ಲ....-
ಸತ್ಯದ ದಾರಿಯಲ್ಲಿ ನಾವಿದ್ದರೆ ಖಂಡಿತಾ ನ್ಯಾಯ ಸಿಕ್ಕೇ ಸಿಗುತ್ತದೆ ಸ್ವಲ್ಪ ಸಮಯ ಕಾಯಲೇ ಬೇಕು.
-
ಇಲ್ಲಿ ನ್ಯಾಯ ಅನ್ನೋದು ಇಲ್ಲದ ನಿಧಿಯ ಹುಡುಕಾಟದಲ್ಲಿ ಇರುವ ಬದುಕನ್ನು ಬಲಿ ಕೊಟ್ಟಂತೆ ನ್ಯಾಯ ಅಂತೂ ಸಿಗೋದಿಲ್ಲ ನ್ಯಾಯಕ್ಕಾಗಿ ಹೋರಾಡುತ್ತಾ ಇಡೀ ಬದುಕೇ ವ್ಯರ್ಥವಾಗಿ ಕಳೆದು ಹೋಗುವುದು, ಇಲ್ಲಿ ನ್ಯಾಯವೂ ಮಾರಾಟಕ್ಕಿರುವ ವಸ್ತುವಾಗಿದೆ
-
ನಾ'ನು...
•••••••••
(ತಲೆ ಬರಹದ ಸಾರಾಂಶ ಅಡಿಬರಹದಲ್ಲಡಗಿದೆ ,
ಕ್ಯಾಪ್ಷನ್ ಕಡೆ ಸಮಯವಿದ್ದರೆ ಕಣ್ಣು ಹಾಯಿಸಿ 👇👇)-
ಗಜಲ್
ಪೊರಕೆ ಆಗಬೇಕಿದೆ ಅಸತ್ಯ-ಅನ್ಯಾಯಗಳಿಗೆ
ಸೂಜಿ-ದಾರ ಬೇಕಿದೆ ಮನದ ಸಂಬಂಧಗಳಿಗೆ
ಕತ್ತಲು ಮನೆ ಮಾಡಿದೆ ಮನೋಮಂದಿರದಲ್ಲಿ
ದೀಪ ಹಚ್ಚಬೇಕಿದೆ ಹೃದಯದ ಅಂಧಕಾರಗಳಿಗೆ
ವ್ಯವಸ್ಥೆಯು ಉಸಿರುಗಟ್ಟಿ ನಲುಗುತಿದೆ ಇಲ್ಲಿ
ಗಾಳಿ ಬೀಸಬೇಕಿದೆ ಸಮಾಜದ ಕಲ್ಮಶಗಳಿಗೆ
ಮುಖವಾಡಗಳು ಮಿನುಗುತಿವೆ ದರ್ಪಣವಿರದೆ
ಎಳ್ಳುನೀರು ಬಿಡಬೇಕಿದೆ ನಮ್ಮ ವಂಚನೆಗಳಿಗೆ
ಕಾಲದ ಕೆನ್ನೆಗೆ ಕಾಡಿಗೆ ಬಳಿಯಬೇಕಿದೆ ಮಲ್ಲಿ
ಬಿಳಿಯ ಬಣ್ಣ ಲೇಪಿಸಬೇಕಿದೆ ನಿಯತ್ತುಗಳಿಗೆ-
ಕೊನೆಗು ನ್ಯಾಯ ಸಿಗ್ತು ಅಂತ ಖುಷಿಪಡಬೇಕ ಅಥವಾ ನಮ್ಮ ದೇಶದಲ್ಲಿ ನ್ಯಾಯ ಸಿಗೋಕೆ ಇಷ್ಟು ದಿನ ಬೇಕಾಯ್ತು ಅಂತ ದುಃಖಪಡಬೇಕ ಗೊತ್ತಿಲ್ಲ...
ಕ್ಷಮಿಸು ಸಹೋದರಿ ನಿನಗೆ ನ್ಯಾಯ ಒದಗಲು ಇಷ್ಟು ಸಮಯ ಬೇಕಾಯಿತು.
ಆದರೆ ನಿನ್ನಂತ ನರಕವನ್ನು ಮತ್ತಾವುದೇ ಹೆಣ್ಣು ಈ ಭುವಿಯಲ್ಲಿ ಕಾಣದಿರಲಿ...-
⚖ ತಕ್ಕಡಿಯೇ ತೂಕಡಿಸಿದಾಗ ⚖
ಕಿವಿಗೊಡದ ಮಾತಾಯ್ತು ನನ್ನ ನ್ಯಾಯದ ಭಿಕ್ಷಾಟನೆ
ನ್ಯಾಯಾಲಯ ಹೊರಡಿಸಿತು ಅಧೀಕೃತ ಘೋಷಣೆ
ತೀರ್ಪಿನ ತೋರುಬೆರಳಿಗಿದೆ ನನ್ನ ಆಕ್ಷೇಪಣೆ
ಮುಗಿದೇ ಹೊಯ್ತು ನನ್ನ ಜೀವನ ಪರ್ಯಟನೆ-
ನಿರಪರಾಧಿಗೆ ಶಿಕ್ಷೆಯಾದ್ರೆ ಅದು
ದಂಡನೆ,
ಅಪರಾಧಿಗೆ ಶಿಕ್ಷೆಯಾದ್ರೆ ಅದು
ಧರ್ಮ..!!-
ಅಲ್ಲಿ ಇಲ್ಲಿ ಸುತ್ತಿ ಬಳಸಿ ಸಾಕ್ಷಿಯ ಹಣೆ ಪಟ್ಟಿ ಹಿಡಿದು ಬಂದ ಸತ್ಯ.. ಕೋರ್ಟ್ ಮೆಟ್ಟಿಲೇರುವಷ್ಟರಲ್ಲಿ ಆಸೆಗೆ ಕೈ ಚಾಚಿ ನಿಂತ ಸಾಕ್ಷಿದಾರನ ಬಾಯಿಂದ.. ಅದೆಷ್ಟೋ ದಿನಗಳಿಂದ ದೂರ ತಳ್ಳಿದ ನಿದಿರೆಯಿಂದ ವಂಚಿತವಾದ ಕಿವಿಗಳು ಕಾತರಿಸಿ ನ್ಯಾಯಕ್ಕಾಗಿ ಹಪಹಪಿಸಿ ಕೊನೆಯಲ್ಲಿ ಕೇಳುವುದು ಮಾತ್ರ ಅಸತ್ಯದ
ಯಾವತ್ತೂ ಅನ್ಯಾಯದ ನ್ಯಾಯವನ್ನೇ...!-