Dear Sun,
Our skin pigment is Melanin, Not Teflon.
Thanking you,
Yours faithfully-
Just finding out the cheat codes for the game called life. 😉
read more
⚖ ತಕ್ಕಡಿಯೇ ತೂಕಡಿಸಿದಾಗ ⚖
ಕಿವಿಗೊಡದ ಮಾತಾಯ್ತು ನನ್ನ ನ್ಯಾಯದ ಭಿಕ್ಷಾಟನೆ
ನ್ಯಾಯಾಲಯ ಹೊರಡಿಸಿತು ಅಧೀಕೃತ ಘೋಷಣೆ
ತೀರ್ಪಿನ ತೋರುಬೆರಳಿಗಿದೆ ನನ್ನ ಆಕ್ಷೇಪಣೆ
ಮುಗಿದೇ ಹೊಯ್ತು ನನ್ನ ಜೀವನ ಪರ್ಯಟನೆ-
"ಮೊದಲ ಕವನ ಬರೆಯುವಾಗ ಮಾಡಿದ್ದೆ ನೂರಾರು ಪದಗಳ ಕೊಲೆ, 🔪
ಕವನ ಮುಗಿಯೋದರೊಳಗೆ ನೋಟ್ ಬುಕ್ ನಲ್ಲಿ ಉಳಿದಿತ್ತು ಒಂದೇ ಬಿಳಿ ಹಾಳೆ. 📋
ಕವನ ಬರೆಯುವಾಗ ಸಿಕ್ಕ ಫ್ರೆಂಡ್ಸು ಪೇಪರ್ರು, ಪೆನ್ನು, 📝
ಕವನ ಮುಗಿಯೋದರೊಳಗೆ ಸಿಕ್ಕ ನೋಡಿ ಇನ್ನೊಬ್ಬ ಫ್ರೆಂಡು, ಅವನೇ ಡಸ್ಟ್ ಬಿನ್ನು". 🗑....-
ಕಳೆದುಕೊಂಡ ಕನಸಿಗೆ ಬೇಕಿಲ್ಲ ನಿನ್ನ ಕಣ್ಣೀರಿನ ತೊರೆ,
ಒಮ್ಮೆ ಕತ್ತೆತ್ತಿ ನೋಡು, ಕತ್ತಲಲ್ಲೇ ಕಂಗೊಳಿಸುವುದು ದೃವತಾರೆ.-
-:ನಂದೊಂದ್ ಉದ್ರಿ ಮಾತ್:-
"ಉಸಿರಾಡದೆ ಒಂದು ನಿಮಿಷ ಇರಬಹುದು ನಾನು,
ನಿನ್ನ ನೆನೆಯದೆ ಒಂದು ಕ್ಷಣವೂ ಇರೆನು ನಾನು".-
"ಕಡಿಮೆ ಆಯ್ತು ಕನಸಿನ ಕಾಲ್ನೋವು,
ಬಲಗೊಂಡಿತು ಭಾವನೆಯ ಬೆನ್ನೆಲುಬು".-
"ಬೆಚ್ಚಗೆ ಮಲಗಿರುವ ಭಾವನೆಗಳಿಗೆ ಬೆಳಗಾಯಿತು,
ಮರೆತು ಹೋದ ಮುಗುಳ್ನಗು ಮತ್ತೇ ಎದುರಿಗೆ ಬಂತು".-
"ಒಮ್ಮೆ ಕಣ್ತೆರೆದು ನೋಡು ನೀ ಕನ್ನಡಿ,
ಬದಲಾಯಿಸಿಕೊ ನಿನ್ನ ಬದುಕಿನ ಮುನ್ನುಡಿ".
-
ಅಸುನೀಗಿದೆ ಕನಸು, ಮರುಕಳಿಸದ ಮಾತಿಗೆ.
ಕೊರಗುತಿದೆ ಹೃದಯ, ಮನ ಒಪ್ಪದ ನೀತಿಗೆ.-
-: ಸತ್ತ ಪ್ರೀತಿಯ ಮರಣೋತ್ತರ ಪರೀಕ್ಷೆ :-
ಯಾರೋ ಹೇಳಿದ ಮಾತನೆ
ಕೇಳಿ ಬದಲಾಯ್ತು ಅವಳ ಭಾವನೆ,
ಬದಲಾಯಿಸಿಬಿಟ್ಟಳು ಬದುಕಿನ ಅಸ್ತಿತ್ವವನ್ನೆ,
ಆತ್ಮಶಾಂತಿಗೂ ಸಿಗದೆ ಮನಸ್ಸು ಸೇರಿದೆ ಒಲವಿನ ಸೆರೆಮನೆ,
ಹೇಗೆ ತಿಳಿಸಲಿ ನನ್ನ ಮನದ ನಿವೇದನೆ?-