ಒಮ್ಮೊಮ್ಮೆ ನೀನು ಹಾಡಾಗಬೇಕು
ಬೇಸರಿಕೆ ಬಂದಾಗಲೆಲ್ಲ ನನ್ನ ಬಿಗಿದಪ್ಪಿಕೊಳ್ಳಬೇಕು.
ದಿನದ ಬೆಳಗು ಹೊಸದಾಗಿ ಇಬ್ಬರು ಪರಿಚಯವಾಗಬೇಕು.
ಕ್ಷಣ ಮಾತ್ರದಲ್ಲೆ ಒಬ್ಬರಿಗೊಬ್ಬರು ಕಳೆದು ಹೋಗಬೇಕು.!
ಹಗಲೆಲ್ಲ ನಿನ್ನ ನಾ ನನ್ನ ನೀ ಹುಡುಕುತ ಸೂರ್ಯಸ್ತಕ್ಕೆ ಸರಿಯಾಗಿ ಪರಿಚಿತರಾಗಬೇಕು.!
ಹುಡುಕಿ ಕೊನೆಗೂ ಸಿಕ್ಕ ಗಳಿಗೆಯಲಿ ನನ್ನ ನಿನ್ನ ನಡುವೆ
ಬರಿ ನಗುವಿನ ಸಂಭಾಷಣೆಯಾಗಬೇಕು.!-
ಮನದಲ್ಲಿ ಎಷ್ಟೇ ನೋವು ಇದ್ದರು..,,
ನಗುವಿನ ಕ್ಷಣಗಳನ್ನ ನೆನೆದರೆ ಮುಖದಲ್ಲಿ ನಗು ಮೂಡದೆ ಇರದು...!!-
ಇವತ್ತು ವಿಶ್ವ ನಗುವಿನ ದಿನ
ಯಾವಾಗಲು ಮುಖ ಗಂಟು
ಹಾಕಿಕೊಳ್ಳುವ ಮಡದಿಗೆ
ಹರಸಾಹಸ ಪಟ್ಟೆ ಅವಳ
ಮುಖದಲ್ಲಿ ನಗು ತರಿಸಲು
ಇನ್ನಷ್ಟು ಕೋಪಗೊಂಡು
ಅಟ್ಟಾಡಿಸಿಕೊಂಡು ಬಂದಳು
ಕಸಬರಿಕೆಯಲ್ಲಿ ಬಾರಿಸಲು..!!-
ಹೆತ್ತೋರು ಮಕ್ಕಳನ್ನ ಸ್ನೇಹಿತರ ತರಾ ಆರೈಕೆ ಮಾಡಿದ್ರೆ, ಮಕ್ಕಳು ಹೆತ್ತೋರ ಇಚ್ಛೆಯಂತೆ, ಹೆತ್ತೋರ ಕಂಡ ಕನಸ್ಸುಗಳಿಗೆ ತಮ್ಮ ಆತ್ಮದಿಂದ ಶ್ರಮವನ್ನ ಅರ್ಪಣೆ ಮಾಡುತ್ತಾರೆ, ಪ್ರಕೃತಿಯಲ್ಲಿ ಎಲ್ಲರ ಮದ್ಯೆ ಇರೋದ ಒಂದೇ ಪವಿತ್ರ ಬಾಂದವ್ಯ ಅದೆ ಪ್ರೀತಿ, ವಿಶ್ವಾಸ, ಈ ಪ್ರೀತಿಯ ಆಪ್ತರಾಗಿ ಪ್ರಕೃತಿಯಲ್ಲಿ ಇರೋರೆಲ್ಲರ ವಿಶ್ವಾಸವಾಗಿರೋಣ, ವಿಶ್ವ ತಾಯಿಯ ಪುಟಾಣಿಗಳ ಹಬ್ಬ ಆನಂದದಿಂದ ಸಾಗುತ್ತಿರಲಿ.
-
ಡಿಸೆಂಬರ್ ತಿಂಗ್ಳಲ್ಲಿ ಮದ್ವೆ ಆಗಿತ್ತು
ನವ ಜೋಡಿಗೆ ಮುಂದೆ,ಮೊದಲನೇ ಹಬ್ಬವೇ
ಮಕರ ಸಂಕ್ರಾಂತಿ, ಒಂದು ವಾರದ ಮುಂಚೆ ನಮ್ಮಾವ ಬಂದ ಮನೆಗೆ
ಸರಿ ಅಳಿಯನಿಗೆ ಹಾಗೂ ಅಪ್ಪ ಅಮ್ಮನಿಗೆ ಹೇಳಿ
ನಮ್ಮಾವ ಮಗಳನ್ನು ತವರಿಗೆ ಕರೆದುಕೊಂಡು ಹೋಗುವಾಗ ನನಗೂ ಹಬ್ಬಕ್ಕೆ ಬರಲು ಹೇಳಿ ಹೋದ, ಬಲು ಖುಷಿಯಿಂದ ಹೋದೆ ಹಬ್ಬ ಮಾಡಲು, ಹಬ್ಬ ಜೋರಾಗಿಯೇ ಆಯ್ತು
ಹೊಲದಲ್ಲಿ ಊಟವೂ ಆಯ್ತು ಹಾಗೂ ಹೀಗೋ ರಾತ್ರಿ ಆಯ್ತು, ಹೊಟ್ಟೆ ತುಂಬಾ ಭಾರವಾಗಿದ್ದರ ಕಾರಣ ಮಾವನ ರೂಮಿನಲ್ಲಿಯೇ ನಿದ್ದೆಗೆ ಜಾರಿದೆ, ತಡರಾತ್ರಿ ಒಮ್ಮೆಲೇ ಎಚ್ಚರವಾಯ್ತು ಪಕ್ಕದಲ್ಲಿ ನೋಡ್ದೆ ಮಾವ ಜೋರಾಗಿ ಗೊರಕೆ ಹೊಡೆಯುತ್ತಿದ್ದ
ಮಲಗಿದರೆ ನಿದ್ರೆ ಸುಳಿಯಲಿಲ್ಲ ಅವಳನ್ನು ಹುಡುಕಿದೆ ಅಟ್ಟದ ಮೇಲೆ ತಾಯಿ ತಂಗಿಯ ಜೊತೆಗೆ ಮಲಗಿದ್ದಳು, ಒಂದು ಹಾಳೆ ಸುತ್ತಿ ಒಗೆದೆ ಅತ್ತೆಗೆ ಬಡೆಯಿತು ತಟ್ಟನೆ ಮಲಗಿರುವ ತರ ಮಲಗಿದೆ
ಮೇಲೆ ಹತ್ತುವ ಏಣಿ ಸರಿಸಿ ಇಟ್ಟಿದ್ದರು,
ಮೆಲ್ಲನೆ ಎದ್ದುನಿಂತು ಏಣಿ ಹತ್ತಿರ ಹೋಗಿ ಸರಿಸಿ ಇಟ್ಟು ಇನ್ನೇನು ಹತ್ತಬೇಕೇನ್ನುವಷ್ಟರಲ್ಲಿ
ಏಣಿ ಬ್ಯಾಲೆನ್ಸ್ ತಪ್ಪಿ ಮಾವನ ಮೇಲೇನೇ ಬಿತ್ತು,
ಮಾವ ಚಟ್ಟನೆ ಚೀರಿದ ಅಷ್ಟರಲ್ಲೇ ನಾನು ಮತ್ತೆ ಮಲಗಿದವರ ತರಾ ಮಲಗಿಬಿಟ್ಟಿದ್ದೆ
ಅತ್ತೆ ಎದ್ದವರೆ ಏನಾಯ್ತು ಅಂದ್ಲು ಮಾವ ಯಾವ್ದೋ ಬೆಕ್ಕು ಕಣೆ ನಿಚ್ಚಣಿಕೆ ನನ್ನ ಮೈಮೇಲೆ ಬೀಳಿಸ್ತು ಅಂದ..! 😃
-
ಕರೋನ ಬಂದದ್ದರಿಂದ
ಎಲ್ಲ ಬಾರ್ ಬಾಗಿಲುಗಳನ್ನು
ಮುಚ್ಚಿರುವರು ಯಾರು ಎಣ್ಣೆ
ಕುಡಿಯಾಗಿಲ್ಲ ಅಂತ ಸಂತೋಷದಿಂದ
ನಾವು ಇದರೆ ವಿಶ್ವ ನಗುವಿನ
ದಿನದ ಹಿಂದಿನ ದಿನವೇ ಬಾರ್
ಬಾಗಿಲು ತೆರೆಯುವರು ಎಂದು ಕೇಕೆ
ಹೊಡೆಯುತ್ತಾರೆ ನಮ್ಮ ಪತಿ ದೇವರು
ಸಂತೋಷವೆಲ್ಲ ಹಾಳಾಯ್ತು
ಅದ್ಕೆ ತಕೊಂಡೇ ನೋಡಿ ಪರಕೆನ
ಬಾರ್ ನ ಕನಸೆಲ್ಲ ಮರೆತರು
ನೋಡಿ ನನ್ನ ದಾಳಿಯಿಂದ..!!-