ಸತ್ಯದೊಡೆಯ   (ವಿಶ್ವದ ವಿಶ್ವಾಸಿ ರೈತ)
573 Followers · 568 Following

read more
Joined 4 June 2019


read more
Joined 4 June 2019

" ವಿದ್ಯೆ ಎಂಬ ಬೀಜ ಬಿತ್ತಿ
ಬದುಕಲ್ಲಿ ಬೆಳಕು ಮೂಡಿಸಿದ
ಗುರು -ಮಾತೇಯರಿಗೆ ನಮನ

ತಂದೆ - ತಾಯಿಯಾಗಿ ಪ್ರಪಂಚ
ಜ್ಞಾನ, ತ್ಯಾಗ, ಯೋಗ ರೂಪಿಸಿದ
ಸ್ನೇಹ ಪ್ರೀತಿ ಗುರುಕುಲಕ್ಕೆ ನಮನ

ಜಗತ್ತನ್ನೆ ಪ್ರೀತಿಸುವಷ್ಟು ಸಂಸ್ಕೃತಿ
ಪಾಠ ಭಕ್ತಿ ಹಂಚಿದ ನಮ್ಮೂರ
ಶಾಲೆಗೆ ನನ್ನಾತ್ಮ ಕೋಟಿ ನಮನ "

-



ವ್ಯಕ್ತಿ ಯಾರು ಅನ್ನೋದು ಮುಖ್ಯವಾಗಲ್ಲ, ವ್ಯಕ್ತಿಯೊಳಗೆ ಇರುವ ಆಲೋಚನೆಗಳು ಪ್ರೇರಣೆಯಾಗುತ್ತವೆ

-



ಈ ಭೂಮಿ ಮೇಲೆ ನಿಯತ್ತಾಗಿ ದುಡಿಯುವರೆಲ್ಲರೂ ನೆಮ್ಮದಿಯಾಗೆ ಇರುತ್ತಾರೆ.

-



ನೆಮ್ಮದಿ ಅನ್ನೋದು ನಮ್ಮಗ ನಾವೆ ಕಂಡುಕೊಳ್ಳುವ ಅದ್ಭುತ ಪರಿಶ್ರಮದ ಭಕ್ತಿ.

-



ರಕ್ಷಾ ಬಂಧನ
ಅಣ್ಣ -ತಂಗಿಯರ ಆತ್ಮಬಂಧನ

ರಕ್ಷಾ ಬಂಧನ
ಅಣ್ಣನೊಡಲ ಪ್ರೇಮ ಸ್ಪಂದನ

ರಕ್ಷಾ ಬಂಧನ
ಅಪ್ಪುನೊಲವ ಕಾಳಜಿ ಕಾವ್ಯ ಕಥನ

-



ಇಂದೊ ನಾಳೆ ಅನ್ನೋ ಈ ವಸ್ತುಗಳ ಸಂಪತ್ತಿಗೆ ನಿನ್ನೆಷ್ಟು ಬಡದಾಡತಿ ತಮ್ಮ
ನಿನ್ನಾತ್ಮ ಸದ್ಗುಣಗಳೇ ನೆಮ್ಮದಿಯ ಸಂಪತ್ತಾಗಿರುವಾಗ ನಿನ್ನೆಲ್ಲಾ ದುರಾಸೆಯ ಬಹಿರಂಗದೊಲವು ನಿನ್ನ ಅಂತರಾತ್ಮವನ್ನ ಸುಟ್ಟು ಭಸ್ಮ ಮಾಡುತ್ತದೆ

-



....

-



ರೈತ ಬೆಳದಿರೊ ಬೆಳೆಗಳಿಗೆ ರೈತಾನೆ ಬೆಂಬಲ ಬೆಲೆ ಕಟ್ಟೋಕೆ ಯಾರಪ್ಪನ ಅಪ್ಪಣೆನು ಬೇಕಾಗಿಲ್ಲ.

-



ನಾವು ತಪ್ಪು ಮಾಡದೆ ಇದ್ದಾಗ, ನಾವು ನ್ಯಾಯವಾಗಿ ಬದುಕುತ್ತಿದಾಗ,ಎದೆಯಲ್ಲಿ ನಿಯತ್ತೆ ಇಲ್ದೆ ಇರೋರು
ಎಷ್ಟೇ ದೌಲತ್ತಲ್ಲಿ ಘರ್ಜಿಸಿದ್ರು , ಸೋಲೋ ಮಾತೇ ಇಲ್ಲ, ಏಕೆಂದರೆ ಕಷ್ಟ ಪಟ್ಟು ಬೇವರು ಸುರ್ಸಿ ಬೆಳೆಸಿರೋ ಬೆಳೆಗೆ ತಕ್ಕ ಬೆಲೆ ಸಿಗಲೇಬೇಕು, ಅದನ್ನ ಬಿಟ್ಟು ಎಷ್ಟೋ ಶ್ರಮದಾತರನ್ನ ಮರಗಿಸಿ ವ್ಯಾಪಾರಸ್ಥ ಬೆಳೆಯೋದರಲ್ಲಿ ಯಾವ ಅರ್ಥವಿರಲ್ಲ.

-



ನಿನ್ನದೆ ಲೋಕದೊಳಗೆ ನೀನು ಕಳೆದುಹೋಗಿರುವಾಗ
ನಿನ್ನಗೆಲ್ಲಿ ಬಿಡುವು ಸಿಗುವುದು, ನಿನ್ನ ಶ್ರಮದ ಆಧ್ಯಾತ್ಮ
ನಿನಗೆ ಸಂಪೂರ್ಣ ಆತ್ಮ ನೆಮ್ಮದಿ ನೀಡುವುದು, ನಿನ್ನಾತ್ಮ ವಿಚಾರ ಗಳಂತೆ ನಿನ್ನ ವಾಸ್ತವ ಬದುಕು ನಿನಗೆ ಪ್ರೇರಣೆ ನೀಡುತ್ತದೆ.

-


Fetching ಸತ್ಯದೊಡೆಯ Quotes