ಇತ್ತಿಚೆಗೆ ಭಾವನೆಗಳ
ಹತ್ಯೆ ಮಾಡಲಾಗುತ್ತಿದೆ
ನಂಬಿಕೆಯೆಂಬ ಕಠೋರವಾದ ಅಸ್ತ್ರದ
ಪ್ರಯೋಗದಿಂದ!!
"ನಂಬಿಕೆ ನಯವಂಚಕರ ಬಂಡವಾಳವಾಗಿದೆ"-
ರಾವಣನಂತಿರುವವರನ್ನಾದರೂ ನಂಬಬಹುದು ಸ್ವಾಮಿ ಆದರೆ ರಾಮನ
ಮುಖವಾಡ ಧರಿಸಿ ನಾಟಕವಾಡಿ ನಂಬಿಕೆ ದ್ರೋಹ ಮಾಡೋ ರಕ್ಕಸರ
ನಂಬುವುದು ನಮ್ಮ ಸರ್ವನಾಶಕ್ಕೆ ನಾವೇ ಮುನ್ನುಡಿ ಬರೆದಂತೆ,
ನಂಬಿದ ಮೇಲೆ ಯೋಚಿಸುವುದಕ್ಕಿಂತ, ನಂಬುವುದಕ್ಕಿಂತ
ಮುಂಚೆ ಯೋಚಿಸಿ ಯಾಕೆಂದರೆ ನಂಬಿಕೆ ಅನ್ನೋದು
ತುಂಬಾ ಅಮೂಲ್ಯವಾದದ್ದು ಅದನ್ನು ಸಿಕ್ಕ ಸಿಕ್ಕ
ಚಿಲ್ಲರೆಗಳಿಗೆ ಮಾರಿಕೊಳ್ಳಬೇಡಿ, ನಂಬಿಕೆಯನ್ನು
ಗಳಿಸುವುದಕ್ಕೂ ಯೋಗ್ಯತೆ ಇರಬೇಕು,ಅದು ಒಮ್ಮೆ
ಕಳೆದುಹೋದರೆ ಮತ್ತೆಂದೂ ಕೈಗೆ ಸಿಗದು ಜೋಪಾನ-
ನಂಬುಗೆಯನ್ನು ಕಳೆದುಕೊಂಡ ಮನಸ್ಸೊಂದು
ದೀನವಾಗಿ ಮೌನದ ಸಂಗ ಮಾಡಿತ್ತು,,
ಕಾಡುವ ನೆನ್ನೆಗಳ ನೆನಪನು ನೆನೆದು
ತುಸು ಹೆಚ್ಚೇ ಕಂಬನಿ ಮಿಡಿದಿತ್ತು,,
ಕೊಡವಿದ ಕಣ್ಣೀರ ಪ್ರತಿ ಬಿಂದುವಲ್ಲು
ಬಣ್ಣಹಚ್ಚಿದ ಮುಖಗಳನ್ನು ಆವುಡುಗಚ್ಚಿ ತೊಳೆದಿತ್ತು,,
ಒಡಲಲಿ ಕಟ್ಟಿಕೊಂಡದ್ದು ಕೆಂಡವೆಂದು ಅರಿತಾದಮೇಲೆ
ಕೊಂಚ ತಾತ್ಸಾರದ ನಿಟ್ಟುಸಿರೊಂದಿಗೆ ಮಸಣದ ದಾರಿ ಹಿಡಿದಿತ್ತು!!
✍️ಶಿಲ್ಪಾ ಪಾಲ್ಕಿ💞
-
ನೋವಾಗುವುದುಕ್ಕಿಂತ
ಮುಂಚೆ ಕಠಿಣವಾದ
ನಿರ್ಧಾರಗಳನ್ನು
ತೆಗೆದುಕೊಳ್ಳುವುದು ಉತ್ತಮದೊಳ್
ಸರ್ವೋತ್ತಮ
ನೋವಾದಮೇಲೆ ಕಠಿಣ ನಿರ್ಧಾರ
ತೆಗೆದುಕೊಂಡ್ರು ವ್ಯರ್ಥ
ಕಣ್ರೋಲೋ!!-
ಈ ತಪ್ಪು ಮಾಡಿದವರಿಗಿಂತ
''ಅದನ್ನ ಕೇಳ್ತಾ ಕೇಳ್ತಾ,
ಹೌದಾ ಆಮೇಲೆ
ಅಯ್ಯೋ ನೋಡಿದ್ಯ ಎಂಥ ಜನ ಹ್ಮ....
ನಾವಾಂಗಿಲ್ಲ ಬಿಡಿ,
ಆದ್ರೂ ಮೊದಲೇ ಏಕೆ
ನಿಮಗ್ ಗೊತ್ತಗಿಲ್ವಾ....ಹ್ಮ...''
ಅಂತಾರಲ್ವ ಅವರಿಗಿಂತ ಹಲ್ಕಾ ಜನ ಯಾರಿಲ್ಲ!-
ಯಶಸ್ಸು ಏಕಾಏಕಿ ಘಟಿಸುವ ಪವಾಡವಲ್ಲ ಶ್ರದ್ಧೆ, ಶ್ರಮಗಳಿದ್ದಲ್ಲಿ ಸ್ವಾಭಾವಿಕವಾಗಿ ಬಂದು ನಿಲ್ಲುವ ಸಂಗತಿ.ನಂಬಿಕೆಯಿಂದ ಶ್ರಮಿಸೋಣ..!!
( ಸಂಗ್ರಹ )-
ನನ್ನ ಜೊತೆ
ಮಾತಾಡಲ್ಲಾ
ಅಂದ್ರೆ ನನ್ನ ಬಗ್ಗೆ
ಮಾತಾಡುದನ್ನು
ಬಿಟ್ಟಬಿಡಿ .🙁-
ನಂಬಿಕೆಗಳಿಗೆ ಪೆಟ್ಟು ಬಿದ್ದಾಗ...ನಂಬಿದವರು ಶತ್ರುಗಳಾಗಿ ಕಾಣುತ್ತಾರೆ....
-
ಕಗ್ಗೊಲೆಗೈದ ಕಡುಪಾಪಿಯನ್ನಾದರೂ ನಂಬಿ.. 🤐
ಆದ್ರೆ ನಂಬಿಕೆ ದ್ರೋಹವನ್ನೆಸಗಿದ ನೀಚನನ್ನಲ್ಲ..!!-