ಮನದ ನೋವಿಗೆ ನಿನ್ನ ನಗುವೆಂಬ ಮದ್ದು ಬೇಕಿದೆ ಗೆಳತೀ ಸದ್ದು ಮಾಡದೆ ಮಾಡಿ ಬಿಡು ಎದೆಯ ತುಂಬಾ ಕ್ರಾಂತಿ.!!
-
ಹೊಸತನವನ್ನ ಕಲಿತು ಅದನ್ನ ಜೀವನದಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನ ಮಾಡೋಣ ಅದು ನಮ್ಮ ಸರ್ವಾಂಗಿನ ಬೆಳವಣಿಗೆಗೆ ಪೂರಕವಾಗಬಹುದು.!!
-
ಅಂದು ಬರಿಗಾಲಲ್ಲಿ ನಡೆಯುತ್ತಿದ್ದರು ಕೂಡಾ
ಸಂತಸದ ಕ್ಷಣಗಳು ತುಂಬಿದ್ದವು
ಇಂದು ಬೆಲೆ ಬಾಳುವ ಪಾದರಕ್ಷೆಗಳನ್ನ ಹಾಕಿದರು
ಸಂಭ್ರಮದ ಸುಳಿವಿಲ್ಲ,
ನನಗನಿಸುತ್ತೆ ಬಹುಷಃ ತಪ್ಪು ಕಾಲಿನದ್ದು ಅಥವಾ ಪಾದರಕ್ಷೆಯದ್ದು ಅಲ್ಲ.. ನಮ್ಮ ಮನದಲ್ಲಿ ಆಳವಾಗಿ ಬೇರುರಿ ನಿಂತಿರುವ ಆಡಂಬರದ ಅಮಲು
ತಾನು ಶ್ರೇಷ್ಠ ಅವನು ಕನಿಷ್ಠ ಅನ್ನುವ ಭಾವನೆಯೇ ಇಂದು ಮನುಕುಲದ ಮನುಜ ನೆಮ್ಮದಿಯ ದಿನಗಳನ್ನ ಹುಡುಕುವ ಪರಿಸ್ಥಿತಿ ಎದುರಾಗಿದೆ.!!
-
ಮೆಲ್ಲ ಮಾತನಾಡು ಗೆಳೆಯ
ಇಲ್ಲಿ ಒಂಟಿಗಾಲಲ್ಲಿ ನಿಟ್ಟುಸಿರು ಬಿಡುತ್ತ ನಿಂತಿರುವ ಗೋಡೆಗೂ ಕಿವಿಯುಂಟು||
ಸಾಧನೆಯ ದಾರಿ ಸುಲಭವಲ್ಲ
ನೀನು ಏನೇ ಕಿಸಿದು ಗುಡ್ಡೆ ಹಾಕಿದರು ಜಗದಲ್ಲಿ ಕುಹಕ
ಮಾತನಾಡುವ ಜನರುಂಟು||-
ಸಂಬಂಧವಿಲ್ಲದ ವಿಷಯಗಳ ಬಗ್ಗೆ ವಿನಾಕಾರಣ ತಲೆಕೆಡಿಸಿಕೊಂಡರೆ ಮನಸಿನ ಸಂತೋಷ ಹಾಳಾಗುತ್ತದೆ.!!
-
ಎದೆಯ ತೋಟದಲ್ಲಿ ಅರಳಿದ ಮಲ್ಲಿಗೆ ಅವಳು ಮನವೆಂಬ ಬರಡು ಭೂಮಿಯಲ್ಲಿ ಒಲವೆಂಬ ಬಂಗಾರವನ್ನ ಹೆಕ್ಕಿ ತೆಗೆದವಳು.!!
-
ನಲ್ಲೆಯ ಮಧುರ
ಮಾತಿಗೆ
ನಲ್ಲನ ಮನಸು ಕರಗಿ
ಕಣ್ಸನ್ನೇ ಪ್ರಭಾವ
ಬೀರಿತು
ನಾನಾಗಲು ಅನುರಾಗಿ.!!-
ನೋಡಲ್ಲಿ ನಮ್ಮಯ ಹೆಮ್ಮೆಯ ಭಾರತ
ಬಾವುಟ ಹಾರುತ್ತಿದೆ ಬಾನೆತ್ತರ ನಗುತ
ಇತಿಹಾಸ ಪುಟಗಳಲ್ಲಿ ಇನ್ನೂ ಜೀವಂತ
ನಾಡಿನ ಕೀರ್ತಿ ಇತಿಹಾಸದ ಪುಟಗಲ್ಲಿ ಶಾಶ್ವತ.!!-
ಬಂದರೆ ಬರಲಿ ನೂರು ಸವಾಲು
ಎಂದಿಗೂ ಒಪ್ಪಿಕೊಳ್ಳಬೇಡಿ ಸೋಲು
ನಿನ್ನ ಆತ್ಮಸ್ಥೈರ್ಯ ಕಂಡು ಆಗಬೇಕು ಕಂಗಾಲು
ಚರಿತ್ರೆಯ ಪುಟಗಳಲ್ಲಿ ನಿನ್ನದಿರಲಿ ದಾಪುಗಾಲು.!!-