ನಮ್ಮವರ್ಯಾರು
ಪರರು ಯಾರು
ಎಂಬ ವ್ಯತ್ಯಾಸ ತಿಳಿಯಲು ಅಸಾಧ್ಯ.
ಎಲ್ಲ ನಮ್ಮವರಂತೆ ಇದ್ದು ಮೋಸ
ಮಾಡುವರು ಎಂಬ ಭಯ...-
ನಂಬಿಕೆಯೆಂಬ ಪ್ರತಿಯುಸಿರಿನ
ಸಿರಿಸಿಂಚನದ ನವಮಂಟಪದೊಳು
ನಳನಳಿಸುತಿರುವ ನಿನ್ನಂತರಂಗದ
ನನ್ನೊಲವಿನ ಸಿರಿಸಂಪದದ
ಮಹಿಮೆಯೇ ನೀನಿಟ್ಟ
ನನ್ಮೇಲಿನ ಆ ನಂಬಿಕೆಯೂ
ಭರವಸೆಯೆಂಬ ಗೆಲುವಿನ ವೇದಿಕೆಯೂ.!-
ಗಾಳಿ ಸುದ್ದಿಯ ಮರೆಯಲ್ಲಿ ಅಡಗಿತ್ತು ನಿಘಂಟು ಶಬ್ದಗಳ ಸಾಲು ವರದಿಯ ಸುಳಿಗೆ ಒಡೆಯಿತು ಬಳಿದ ಬಣ್ಣದ ಉಳಿದ ಪಾಲು...
-
ನಂಬಿಕೆ ಕಳಚಿ ಬಿದ್ದಾಗ ಕಣ್ಣಿಗೆ ಎಲ್ಲೆಲ್ಲು
ಸ್ವಾರ್ಥವೇ ಎದ್ದು ಕಾಣುವುದು...-
ಮನಸ್ಸು ಕಠಿಣ ನಿರ್ಧಾರ ಮಾಡುತ್ತದೆ..
ಅದು ಧನಾತ್ಮಕ ಅಥವಾ ಋಣಾತ್ಮಕವಾಗಿರುತ್ತದೆ..-
ದಿನಕ್ಕೊಂದು, ಕ್ಷಣಕ್ಕೊಂದು, ಬಣ್ಣ
ಹಚ್ಚಿಕೊಂಡು ಅಭಿನಯ ಮಾಡುವ
ಕಲಾವಿದರನ್ನು ನಂಬಬಹುದು ...
ಆದರೆ
ನಂಬಿಕೆ ಅನ್ನೋ ಬಣ್ಣ ಬಡ್ಕೊಂಡು ನಾಟಕ
ಮಾಡೋರ್ನ ನಂಬೇಡ .....-
ಏಕಾಂಗಿ ದಾರಿಯಲ್ಲಿ
ಯಾರಿಲ್ಲ ಜೊತೆಯಲ್ಲಿ
ಇದ್ದವರೂ ತೊರೆದರೂ
ತಮ್ಮಕಾರ್ಯ ಮುಗಿದಮೇಲೆ
ಒಂಟಿಜೀವಕ್ಕೆ ಜಂಟಿಯಾಗುವೇನೆಂದು
ಹುಸಿಪ್ರೀತಿಯ ಮಾಯೇ ತೋರಿ
ಮಸಣ ಸೇರುವ ಮೋಸ ಮಾಡಿ
ನಡುದಾರಿಯಲ್ಲಿ ಮರೆತರೂ ನನ್ನ
ನಿಷಲ್ಮಶ ಪ್ರೀತಿ ನನ್ನದು
ನಂಬಿ ದಾರೆಯೇರೆದೆ ನಿಂಗೆ
ನುಡಿ ತಪ್ಪದ ನಡೆ ನಿಂದೆಂದು
ಮಧುರ ಪ್ರೀತಿಯ ಮನಗೆದ್ದೆ
ನಂಬಿಕೆಯ ದೊಣಿಮೇಲೆ ನಿರೇರೇಚಿ ನೀ
ಕಡೆಗಣಿಸಿದೆ ಒಲವಿನ ಬೆಸುಗೆಯ
ತೋರಿದೆ ನಿನ್ನ ಕಪಟ ಪ್ರೀತಿಯ
ನಂಬಿದೆ ನಾ ಮೊಸಗಾತಿಯ.....!
-✍🏻 ಪ್ರಿಯಾಂಕಾ ಬಿಳ್ಳೂರ.
-
ಯಾರಲ್ಲಿಯೂ ಅತಿಯಾದ
ನಂಬಿಕೆಯನ್ನು ಇಡಬೇಡಿ
ಏಕೆಂದರೆ ಈಗಿನ ಕಾಲದಲ್ಲಿ
ನಂಬಿಕೆಯನ್ನು ಉಳಿಸಿಕೊಳ್ಳುವವರಿಗಿಂತ
ಅದನ್ನು ಕಳೆದುಕೊಳ್ಳುವವರೇ ಜಾಸ್ತಿ..!!-
ಪ್ರತಿಸಲ ನನ್ನದೆ ಗೆಲುವು ಎಂಬ ಅಹಂಕಾರ ಬೇಡ..
ನನ್ನ ನಿಷ್ಕಲ್ಮಶ ಪ್ರಯತ್ನದಿಂದ ನಾ ಗೆಲ್ಲುವೆ ಎಂಬ ನಂಬಿಕೆ ಸಾಕು..
ಆ ನಂಬಿಕೆಯೆ ನಿನ್ನನ್ನು ಗೆಲ್ಲಿಸುವುದು ಮುಂದೊಂದು ದಿನ...-