ಬಣ್ಣದ ಜನರೆದುರು ಎಲ್ಲಿಹುದು ನಿನ್ನೀ ಪಾಲು
ಬದುಕು ಬಹು ಚಂದ ಅಮ್ಮನ ಮಡಿಲಲ್ಲಿ
ಹಿಂಸೆ ನೀನು ಹೌದು ಹಿಂಸೆ ನೀನು
ಹೇಳುವರು ಮನುಜರು ಮನಸ್ಸಿಗೆ ಬಂದಂತೆ
ಅರಿಯದವಳು ನೀನು ,ಯೋಗ್ಯತೆ ಇಲ್ಲದವಳು ನೀನು
ದುಷ್ಟ ಜನರ ಸ್ನೇಹದಲಿ ಬೆಂಕಿಯಲಿ ಬೆಂದ ಹೂವು ನೀನು
ಯೋಗ್ಯತೆ ಇಲ್ಲದ ಜನರೆದುರಿಗೆ ದೇವರ ನಗು ನೀನು
ನೋವ ಉಣ್ಣದಿರು ಮನವೇ
ಸುಂದರ ಅದೆಷ್ಟೋ ಪುಟಗಳು ಕಾದಿರುವುದು
ತಾಳ್ಮೆ ಒಂದಿರಲಿ ಅತ್ತು ಕಣ್ಣೀರು ಹಾಕದಿರು
ದೈವನ ನಂಬಿ ಮುಂದೆ ಹೋಗು ನೀ ಮನವೇ ..
-
ಬದುಕು ಜಂಜಾಟವಯ್ಯ
ಏನಯ್ಯ ಬದುಕು ಜಂಜಾಟವಯ್ಯ
ನಾ ಹೇಳ ಹೊರಟಾಗ ನೀ ಕೇಳ ಬಯಸಿದರೆ ಸಾಕಯ್ಯ
ಬದುಕು ಬಹು ಅಂದ ಚಂದ ನಂಬಿ ನೆನೆಯುವಾಗ ನಿನ್ನನ್ನ ಅಯ್ಯ
ಯಾರಯ್ಯ ನನ್ನ ಹಣೆಬರಹಕ್ಕೆ ಹೊಣೆ ಯಾರಯ್ಯ ?
ಗೀಚಿದವಳು ವಿಧಿ ಎಂದರೆ ಏನಯ್ಯ
ಗೀಚಿಸಿದವನು ನೀನಲ್ಲವೆ ಅಯ್ಯ ?
ಕೂಸು ಹೆತ್ತು ಹೊತ್ತಾಗ ಆಕೆ ನಕ್ಕಿ ನಲಿಯುವಾಗ ಹೆತ್ತ ನೋವು ಎಲ್ಲಿ ಎಂದರೆ ಉತ್ತರ ನೀನೇ ನೀನೊಬ್ಬನೇ ಎನ್ನ ಗುರು ಎಂದರೆ ತಪ್ಪಲ್ಲ ಅಯ್ಯ .
ಅವನ್ಯಾರಯ್ಯ ಎಂದು ಮನುಜರು ಪ್ರಶ್ನಿಸಿದರೆ ಅಲ್ಪ ಜ್ಞಾನಿ ಎಂದು ಹೇಳುವೆ ಅಯ್ಯ
ಅವನೆಂದರೆ ದಾರಿ ತೋರುವ ಗುರು ಹನುಮನಯ್ಯ ☺️
- ಅನೋಕ್ಷ ದೇವಾಡಿಗ
-
ನೋವಿನಲ್ಲಿಯು ನಿನ್ನ ಖುಷಿಯ
ಬಯಸುವೇನು ನಾನು
ನನ್ನೆಲ್ಲಾ ಖುಷಿಯ
ಪಾಲುದಾರನು ನೀನು..
ಪದೇ ಪದೇ ಕಾಡುವ ನಿನ್ನ ಹೆಸರ
ನೆನೆದು ಮುಗುಳು ನಗುವುದು ನನ್ನಯ ಮನ
ನೀನಿರದ ಒಂದು ಗಳಿಗೆಯೂ
ನನಗೆ ಒಂದು ಜನುಮಕ್ಕೆ ಸಮಾನ..
ಮುಂಜಾನೆಯ ಮುದ್ದಾದ ಇಬ್ಬನಿಗಳು ಹೇಳುತಿದೆ
ನಿನ್ನಯ ಸ್ಪರ್ಶ ಭುವಿಗೆ ಆಗಿದೆಯೆಂದು
ಹನಿಹನಿಯಾಗಿ ಉದುರುವ ಇಬ್ಬನಿಗಳ ಬಳಿ ಕೇಳಿದೆ
ಮತ್ತೊಮ್ಮೆ ಅವನಿಗೆ ಕರೆಯೋಲೆ ನೀಡುವೆಯಾ ಎಂದು
ಕವಲು ದಾರಿಯಲ್ಲಿ ಸಿಕ್ಕ ಒಲವ ನೆನಪುಗಳ
ಪರಿ ಪರಿಯಾಗಿ ಆರಿಸಿಟ್ಟಿಹೆನು
ಒಬ್ಬಂಟಿಯಾಗಿ ಇರುವಾಗ ತಿಳಿಸು ನೀ
ಎಳೆ ಎಳೆಯಾಗಿ ಒಲವ ಬುತ್ತಿಯನ್ನು ಬಿಚ್ಚುವೇನು..
-
ಪರಿ ಪರಿಯಾಗಿ
ವರ್ಣಿಸಲು ಮನವೇಕೊ
ಹಪ ಹಪಿಸುತಿದೆ
ಈ ಹೊತ್ತು ಅಮ್ಮ. 🙈
ನನ್ನುಸಿರ ಸ್ವರದಲ್ಲಿ
ನಿನ್ನುಸಿರ ಹೆಸರೇಕೊ
ಅಚ್ಚಳಿಯದೇ
ಅಚ್ಚಾಗಿದೆ ಅಮ್ಮ. 😘
ಪ್ರತಿ ಕ್ಷಣ
ನೀ ಬೇಕು ನನಗೆ
ನನ್ನ ಪ್ರೀತಿಯಾಗಿ
ನನ್ನ ನಂಬಿಕೆಯಾಗಿ ಅಮ್ಮ. 🙈
-
ನೀ ಎಂದರೆ ಅದೇನೋ ಒಲವು
ಹೇಳಲಾಗದ ಭಾವನೆ
ಉತ್ತರ ಸಿಗದ ಪ್ರಶ್ನೆ
ತುಸು ನಾಚುವೆ ನಿಮ್ಮನ್ನ ಎಲ್ಲೆ ಕಂಡರು
ನೀವು ನನ್ನವರು
ನನಗಾಗಿ ಜನಿಸಿದವರು
ಮಾನವ ಜನ್ಮ ನನ್ನದು
ಕಪಿ ಜನ್ಮ ನಿಮ್ಮದು
ಆದರೂ ಮುಗಿಯದ ಬಂಧ ನಮ್ಮಿಬ್ಬರದ್ದು🐒-
ಅಪ್ಪ ❤😘
ಬಚ್ಚಿಟ್ಟ ಒಲವು
ಪದೇ ಪದೇ ಮರುಕಳಿಸುವುದು
ನೀ ನನ್ನೊಂದಿಗೆ ಇದ್ದರೆ
ತುಸು ಕೋಪ
ಪದೇ ಪದೇ ಜನಿಸುವುದು
ನೀ ನನ್ನೊಂದಿಗೆ ಇದ್ದರೆ
ನೀ ಪ್ರಶ್ನಿಸಿದರೆ
ಉತ್ತರಿಸುವೆ ಚೂರು ಹೆದರದೇ
ನೀ ನನ್ನೆದೆಯ
ಕಾಣದ ಸ್ನೇಹಿತ ನನಗೆ ತಿಳಿಯದೇ 🤭..-
ಅವನೋಲವ ಆರಾಧಕಿ..
ಅವಳೋಲವ ಆರಾಧಕ..
ಅವಳೊಲವು ಎಂದೆಂದೂ
ಅವನಿಗಾಗಿ ಸೀಮಿತ ((❤)) !
ಅವನೆದೆಯಲ್ಲಿ ಅವಳದೇ
ಸಿಹಿ ಮಾತಿನ ಬಡಿತ((❤)) !
(ಕಲ್ಪನೆ)
-
ಒಮ್ಮೆ
ಒಂದು aunty ಬಂದು ನಾನ್ ಗೊತ್ತಾ ಅಂತ ಕೇಳಿದ್ರು😉
ನನಗೆ ಎನ್ ಹೇಳಬೇಕು ಅಂತ ಗೊತ್ತಾಗದೇ
ಹ aunty ಗೊತ್ತಾಯ್ತು ಅಂತ ಸುಳ್ಳು ಹೇಳಿದೆ 🤭
ಅವ್ರು ಹೆಸರು ಏನು ಅಂತ ಹೇಳು ಅಂದಾಗ ನಾನು ಬ್ಯಾ ಬ್ಯಾ ಬ್ಯಾ ಅನ್ನೋದಿಕ್ಕೆ ಶುರು ಮಾಡಿದೆ 😂..
ಕೊನೆಗೆ ಹೆಸರು ಮರೆತು ಹೋಗಿದೆ aunty ಅಂತ ಇನ್ನೊಂದ್ ಸುಳ್ಳು ಹೇಳಿ ಬಿಟ್ಟೆ 🙈👻..-
( ಶೋಭಾ)
ಅಮ್ಮ 😘
ಅವಳೊಂತರ
ಕಣ್ಣಲ್ಲೇ ಬುದ್ಧಿ ಕಲಿಸುವ
ನನ್ನಮ್ಮ🤭
ಅವಳೊಂತರ
ನನ್ನ ಪುಟ್ಟ ಮನದ ದೊಡ್ಡ
ದೇವತೆ 🤗
ಅವಳೊಂತರ
ಪೆದ್ದು ಮನಸ್ಸಿಗೆ ಮುದ್ದು
ಮಮ್ಮ ❤-
ಹಕ್ಕಿಯೊಂದು ಗೂಡನ್ನು ತೊರೆದು
ಕಾಣದ ಊರಿಗೆ ಒಲಸೆ
ನೋವು ನಗುವನ್ನು ತೊರೆದು ಒಟ್ಟಾರೆ ಅಳು ಒಂದು ಮನೆಮಾಡಿ
ಅನುದಿನ ಅನುಕ್ಷಣ ಚಿತೆ ಏರಿದೆ ಮರಣದ ರೂಪದಲ್ಲಿ
☺
-