ಸೋಲಿಗೆ ಆ ಕ್ಷಣ ಮಿಡುಕಿದರೂ
ಮತ್ತೆ ಎದ್ದು ನಿಲ್ಲುವೆ!
ಅಭ್ಯಾಸವಾಗಿದೆ ಸೋಲು.
ನನ್ನೊಂದಿಗೆ ಆಟವಾಡುತ್ತಲೇ
ತಾನೇ ಸೋತು ಹೋಗುತ್ತದೆ
ಅಂತ್ಯದಲಿ!
-
ಅಷ್ಟು ನೆಮ್ಮದಿಯ ಜೀವನ ನಮ್ಮದಾಗುತ್ತದೆ!
ನಮ್ಮ ಜೀವನದ ಹಲವು ದುರ್ಘಟನೆಗಳನ್ನೂ
ಕೆಲವು ಸಂಬಂಧಗಳನ್ನೂ
ಹಲವು ದುಃಖದ ದಿನಗಳನ್ನೂ
ಇನ್ನೂ ಕೆಲವು ಕಹಿ ಕ್ಷಣಗಳನ್ನೂ
ನಮಗೆ ತಾಕದಂತೆ ಮಾಡುವ
ಶಕ್ತಿಶಾಲಿ ಆಯುಧವೇ ಈ ತಾಳ್ಮೆ!-
ಎಲ್ಲವನ್ನೂ ಕಳೆದುಕೊಂಡೆನೆಂಬ ವಿಫಲ ಭಾವದಲಿ
ನಲುಗುವಾಗ, ಕಡೆಯಲ್ಲಿ ಕೈಹಿಡಿಯುವುದು ತಾಳ್ಮೆಯೊಂದೇ.
"ತಾಳ್ಮೆ" ಸದಾ ನಮ್ಮ ಬೆಂಗಾವಲಿಗನಾಗಿರಲಿ!-
ಬದುಕಲ್ಲಿ ಸಿಹಿ ಕಹಿಯ ಅನುಭವ ಚೆನ್ನಾಗಿ ಆಗಿರುತ್ತದೆ
ಬದುಕು ಅಷ್ಟೇ ಬಲಶಾಲಿಯಾಗಿರುತ್ತದೆ
ಹಾಗೇ ಜೀವನವು ಸೊಗಸಾಗಿರುತ್ತದೆ.
-
ಸಹನೆ ಧರ್ಮಕ್ಕಷ್ಟೇ ಅಧರ್ಮಕ್ಕಲ್ಲ
ತಾಳ್ಮೆ ಸಹಾನುಭೂತಿಗಷ್ಟೇ ಕ್ರೂರತನಕ್ಕಲ್ಲ
ಗೌರವ ವ್ಯಕ್ತಿತ್ವಕ್ಕಷ್ಟೇ ವ್ಯಕ್ತಿಗಲ್ಲ
ಪ್ರೀತಿ ಪಾವಿತ್ರ್ಯತೆಗಷ್ಟೇ ಮೋಹಕ್ಕಲ್ಲ.-
ನನ್ನತ್ರಾ ಎಷ್ಟು ತಾಳ್ಮೆ ಇದೆ ಅಂತ ಇದುವರೆಗೂ ಗೊತ್ತಿಲ್ರೀ...
ಆದ್ರೆ ಕೋಪ ಮಾತ್ರ ಖಂಡಿತಾ ಟನ್ಗಟ್ಟಲೇ ಇದೆ....-
ಕೆಲವೊಮ್ಮೆ ಒಂದು ಕ್ಷಣದ ತಾಳ್ಮೆ ದೊಡ್ಡ ಅನಾಹುತವನ್ನು ತಪ್ಪಿಸಬಲ್ಲದು..
ಹಾಗು ಒಂದೇ ಒಂದು ಕ್ಷಣ ತಾಳ್ಮೆ ಕಳೆದುಕೊಂಡರೆ ಇಡೀ ಜೀವನವೇ ನಾಶವಾಗಬಹುದು..!-
ಜೀವನ ಇರುವುದೇ ಎರಡು ದಿನ
ಒಂದು... ನಿನ್ನ ಪರವಾದ ದಿನ,
ಮತ್ತೊಂದು.. ನಿನ್ನ ವಿರುದ್ಧವಾದ ದಿನ.
ಪರವಾದ ದಿನದಲ್ಲಿ ಅಹಂಕಾರ ತೋರಿಸಬೇಡ,
ವಿರುದ್ಧವಾದ ದಿನದಲ್ಲಿ ತಾಳ್ಮೆ ಕಳೆದುಕೊಳ್ಳಬೇಡ. ..-