Jayashree Awati (ಶ್ರೀ)  
963 Followers · 2 Following

Joined 20 December 2019


Joined 20 December 2019
27 JAN 2021 AT 8:30


❤️ಅವ್ವ❤️

ತಾನುರಿದು ಜಗವ ಬೆಳಗೋ ದೀಪ ಅವಳು
ಬೆಲೆಕಟ್ಟಲಾಗದ ದೈವತ್ವ ಪಡೆದವಳು
ಹಲವು ಪಾತ್ರಗಳನ್ನೊಟ್ಟಿಗೆ ನಿಭಾಯಿಸುವಳು
ಪ್ರತಿಯಾಗಿ ಪ್ರೀತಿಯನ್ನಷ್ಟೇ ಬಯಸುವಳು

-


23 JAN 2021 AT 11:14


#ರುಬಾಯಿ #

ನಡೆ ನಡೆ ನೀನು ನಿಲ್ಲದಿರು
ಕಣ್ಣ ಹನಿಯ ಒರೆಸಿ ಓಡುತಿರು
ಹೀಗಿದ್ದರೆ ಈ ಸಮಾಜ ನಿನ್ನ ಒಪ್ಪದು
ಎಲ್ಲರೊಳಗೊಂದಾಗಿ ಮುನ್ನುಗ್ಗುತ್ತಿರು

-


16 JAN 2021 AT 13:34

#ಜೀವನ-ಪಾವನ #

ನಿಸರ್ಗ ಶಕ್ತಿಯ ಬಿಂಬಿಸುವ
ನೀಲಿ ಬಾನನು ಚುಂಬಿಸುವ
ಅನಂತತೆಯನ್ನೇ ಸಾರುವ
ಕಲ್ಪವೃಕ್ಷ ನೀನಾಗು ಮಾನವ

-


12 JAN 2021 AT 6:00

#ಜೀವನ-ಪಾವನ #

ಇರೋದೊಂದೇ ಬಾಳು ಓ ಬಾಲೆ
ಅದೇ ಕನಸುಗಳ ಸರಮಾಲೆ..
ಕಲ್ಲು-ಮುಳ್ಳೋ,ಹೂ-ಗಂಧವೋ
ಕನಸಲ್ಲೂ ಕನಸು ಕಮರದಿರಲಿ
ತಿರುಕನೂ ರಾಜನಾಗುವನಂತೆ,
ಛಲವೊಂದೇ ಮುಖ್ಯವಂತೆ..
ನೀ ಚಿರನಿದ್ರೆಗೆ ಜಾರುವ ಮುನ್ನ
ನನಸಾಗಿಸು ನಿನ್ನ ಕನಸುಗಳನ್ನ

-


10 JAN 2021 AT 7:32

ನಿನಗೆ ನಿನ್ನ ಸಾಮರ್ಥ್ಯದ
ಅರಿವಾಗುವುದಷ್ಟೇ ಮುಖ್ಯ ಇಲ್ಲಿ
ಅದೊಂದಾದರಾಯಿತು,
ನಿನಗೂ ಮತ್ತೆ
ಆ ಸಾಧನೆಯ ಶಿಖರಕ್ಕೂ ಇನ್ನೆಷ್ಟು ದೂರ..
ನಿನ್ನ ಗುರಿಯೇ ನಿನಗೆ ಗುರುವಾಗಿ
ಸೋಲು ಗೆಲುವಾಗಿ
ಬದುಕು ಬದಲಾಗುವ ಕಾಲ ಇನ್ನಿಲ್ಲ ದೂರ..

-


2 JAN 2021 AT 15:52

ನನ್ನಾಸೆಗೆ ಉಳಿಗಾಲವಿರುವುದಿಲ್ಲ
ನನ್ನಾಲೋಚನೆಗೆ ಲಂಗುಲಗಾಮಿರುವುದಿಲ್ಲ
ಏಳುಬೀಳಿನ ಜೀವನಕೆ ನೆಮ್ಮದಿಯಿರುವುದಿಲ್ಲ
ಮನಸ್ಸಿಗಂತೂ ಕೊಂಚವೂ ಖುಷಿಯಿರುವುದಿಲ್ಲ

-


31 DEC 2020 AT 10:56

ನೀಯೊಡ್ಡಿದ ಆ ಎಲ್ಲಾ ಸವಾಲುಗಳಲ್ಲೂ,
ಈ ಜೀವ ಗೆದ್ದು ಸೋತಾಯ್ತು..
ನಿನ್ನೆಲ್ಲ ನೋವುಗಳ ಸಹಿಸಿಕೊಂಡು,
ಅದೆಷ್ಟೋ ಪಾಠಗಳ ಕಲಿತಾಯ್ತು..
ಕಂಡ ಕನಸುಗಳಿಗೂ,ಜೊತೆಗಿದ್ದ ಸಂಬಂಧಗಳಿಗೂ,
ಎಲ್ಲದಕ್ಕೂ ನೀ ಕೊಳ್ಳೆಯಿಟ್ಟಾಯ್ತು..
ವಿರಹದ ನೆನಪುಗಳ ಸಾಲಿನಲ್ಲಿ,
ನಿನಗೂ ತುಸು ಜಾಗ ಸಿಕ್ಕಾಯ್ತು..
ಇನ್ನಾದರೂ ನನ್ನ ಬಿಟ್ಟು ನೀ ಹೋಗು..
ಮತ್ತೆಂದಿಗೂ ಮರುಕಳಿಸದಷ್ಟು ದೂರ ಹೋಗು..

-Jayashree Awati(ಶ್ರೀ)

-


22 DEC 2020 AT 19:13

ಆ ಪಾಠದಿಂದಲೇ ಶುರುವಾಗಬೇಕು
ಸೋಲನ್ನೂ ಕೂಡ ಸೋಲಿಸುವ
ಆ ಅಸಲಿ ಆಟ.

-


18 DEC 2020 AT 8:32

#ಜೀವನ-ಪಾವನ #

ಎಂದು ಆಡಂಬರದ ಜೀವನ
ಅಂತ್ಯವಾಗುವುದೋ..,
ಅಂದೇ ನಮ್ಮ ಜೀವನ
ಪಾವನದ ದಾರಿಯತ್ತ
ಮುಖ ಮಾಡುವುದು

-


16 DEC 2020 AT 10:55

ಅಷ್ಟು ನೆಮ್ಮದಿಯ ಜೀವನ ನಮ್ಮದಾಗುತ್ತದೆ!
ನಮ್ಮ ಜೀವನದ ಹಲವು ದುರ್ಘಟನೆಗಳನ್ನೂ
ಕೆಲವು ಸಂಬಂಧಗಳನ್ನೂ
ಹಲವು ದುಃಖದ ದಿನಗಳನ್ನೂ
ಇನ್ನೂ ಕೆಲವು ಕಹಿ ಕ್ಷಣಗಳನ್ನೂ
ನಮಗೆ ತಾಕದಂತೆ ಮಾಡುವ
ಶಕ್ತಿಶಾಲಿ ಆಯುಧವೇ ಈ ತಾಳ್ಮೆ!

-


Fetching Jayashree Awati (ಶ್ರೀ) Quotes