ಹುಟ್ಟುವಾಗ ಜಾತಕ
ಸತ್ತಾಗ ಸೂತಕ
ಇವೆರಡರ ನಡುವೆ
ನಮ್ಮ ಜೀವನವೇ ನಾಟಕ
ಅಷ್ಟೇ ಅಲ್ಲವೇ ಈ ಬದುಕು.-
*🌱*
🤝
ಜೀವನದೊಳಿತಿಗಾಗಿ ಇತರರ
ಬಳಿ ಕೇಳದಿರೆಂದೂ ಸಲಹೆಯ ಜಾತಕ.!
ಇದರೊಳಿತಾಗಿ ಮನಸ್ಥಿತಿ ಹಾಗೂ ಮನೆಸ್ಥಿತಿ
ಕ್ಷೀಣಿಸಿ ನಿಮ್ಮ ಬಾಳಾಗುವುದು ನಿರರ್ಥಕ.!
ಇದರೊರತಾಗಿ ಸುಖ ಜೀವನಕ್ಕಾಗಿ ಒಮ್ಮೇ ಕೇಳಿ
ನೋಡಿ ನಿಮ್ಮ ಆತ್ಮ ವಿಶ್ವಾಸದ ಜಾತಕ.!
ಇದರೊಳಿತಿನಿಂದಲೇ ನಿಮ್ಮ ಜೀವನ ನೆಮ್ಮದಿಯಲಿ
ಸುಖಕರ ಬಾಳಾಗುವುದು ಸಾರ್ಥಕ..!!
🤝-
ಈ ಬಿರು
ಬಿಸಿಲಿನ ಬೇಗೆಯ
ತಡೆಯಲು ನನಗೆ
ನಿನ್ನ ಮಡಿಲೇ ಶೀತಕ..,
ನಿನ್ನ ಮಡಿಲು
ಸೇರಿ ಮಗುವಂತೆ
ನಾ ಮಲಗಲು
ಬೇಗ ಬರೆಸಬೇಕು
ನಮ್ಮಿಬ್ಬರ ಜಾತಕ...🧡-
ಕಾವ್ಯಳ ಕಾವ್ಯದ ಮಾತು
••••••••••••••••••••••
ಯಾರೂ ಎಷ್ಟೇ ಜ್ಯೋತಿಷಿಗಳ ಮನೆಯನ್ನು ಸುತ್ತಿದರು
ಭವಿಷ್ಯವನ್ನು ಬದಲಾಯಿಸಲು ಯಾರಿಂದಲೂ ಸಾಧ್ಯವಿಲ್ಲ. ಆಗುವುದೆಲ್ಲದಕ್ಕೂ ಜಾತಕ ಕಾರಣವೆಂದು ನಂಬಿದರೆ ಬದುಕುವುದೇ ನೀ ವ್ಯರ್ಥ . ಮುಂದಾಗುವುದನ್ನು ತಡೆಯಲು ನೀನಾರು? ಆದ್ದರಿಂದ ಬಂದದನ್ನು ಬಂದ ಹಾಗೇ ಸ್ವೀಕರಿಸಿಬಿಡು ಅದೇ ಉತ್ತಮ.-
ಜಾತಕ
ಹೊಂದಾಣಿಕೆಯಾಗದ
ಜಾತಕದಿಂದಲೇ
ಮುರಿದು ಬೀಳುವ ವೇದಿಕೆ
ಹೊಂದಿಕೊಂಡು ಬದುಕಲು
ಜಾತಕ ಏತಕೆ?!
ಮದುವೆ ಎನ್ನುವುದು
ಎರಡು ಮನಸುಗಳ ನಂಬಿಕೆ
ಜಾತಕದಲ್ಲಿ ಏನಿದೆ ?
ಆಗದಿರಲಿ ಕುಣಿಕೆ..
ಎಂದಿಗೂ ಇರಲಿ ಹೊಂದಾಣಿಕೆ..
ಬದುಕಿ ತೋರಿಸಬೇಕು
ಇರದಿದ್ದರೂ ಜಾತಕ
ಬೆಸೆದ ಮನಸುಗಳ
ಬೇರ್ಪಡಿಸಲು ಬೇಕೆ ಜಾತಕ??-
ಯಾಕಿಷ್ಟು ತುಡಿತ ನನ್ನ ಮನಕೆ ನಿನ್ನ ಕಾಣುವ ತನಕ
ಕಂಡಾದಮೇಲೆ ಆಗಬಹುದೆನೋ ಮೈಯಲ್ಲಾ ಪುಳಕ
ಅಲ್ಲಿಯವರೆಗೂ ಯಾರಿಗೂ ಕೊಡಬೇಡ ನಿನ್ನ ಜಾತಕ
ನಾ ಬಂದೆ ಬರುವೆ ಕಾಯೋ ನೀ ಅಲ್ಲಿಯತನಕ !!-
ಸುತ್ತಲು ಸೂತಕ
ಮುತ್ತಲು ಗಾತುಕ
ಎತ್ತಲು ಆಗಂತುಕ!
ನನ್ನದೆ ಜಾತಕ
ಇಲ್ಲದೆ ಕೌತುಕ
ಆಗಿದೆ ನಿರಾಶಾದಾಯಕ!-
ಜಾತಕದ ಜೊತೆ ಹೆಜ್ಜೆಹಾಕಿದರೆ ಬದುಕು
ದೋಷಗಳಿಂದಲೆ ಮುಕ್ತಿ ಹೊಂದುತ್ತೆ
ಬುದ್ದಿ ಬಲದೊಂದಿಗೆ ನಡೆದರೆ
ಬದುಕು ಸ್ವರ್ಗದಲ್ಲೆ ಮನೆ ಮಾಡುತ್ತೆ.-
ತಲೆ ತಗ್ಗಿಸಿದ್ರೆ ಅಮಾಯಕ
ತಲೆ ಎತ್ತಿದ್ರೆ ಭಯಾನಕ
ಕೆಣಕಿದ್ರೆ ಮಾತ್ರ ಕಿರಾತಕ
ಇದೇ ನನ್ನ ಜಾತಕ.-