~ ಮನುಜ ~
ಯಾರಾದರೂ ನಿನ್ನ ಮೇಲಿಟ್ಟ ಅತೀಯಾದ ನಂಬಿಕೆಯ
ಮೇಲೆ ಒಮ್ಮೇ ಅಪನಂಬಿಕೆಯಿಂದ ಬಿದ್ದರೇ ಪೆಟ್ಟು.!
~ ಇದರ ಪರಿಣಾಮ ~
ಮತ್ಯಾರೂ ಸಹ ಅಷ್ಟು ಸುಲಭವಾಗಿ ನಂಬಲಾರರೂ
ನಿನ್ನ ಮೇಲೆ ಮತ್ತೊಮ್ಮೆ ಅತೀಯಾದ ನಂಬಿಕೆಯಿಟ್ಟು..!!-
❣ ವಿರಹಿ ಕಲ್ಪನಾ ಬರಹಿ..✍
❣ ಹನುಮನ🙏ಭಕ್ತ ❣
𝐑 ~ 𝐑𝐞�... read more
*💧*
ಒಲವೇ ಕೇಳದೇ ನಿನ್ನೊಲವ ದನಿ.!
ಕಂಪಿಸಿ ಬತ್ತಿಹೋಗಿದೇ ಕಣ್ಗಳಲಿ ಕಂಬನಿ.!
ಅರಿತು ನೀನೊಮ್ಮೆ ಸುರಿಸಬಾರದೇ ಮಾತಿನ ಮಳೆ ಹನಿ.!
ಆಗ ನನ್ನೀ ಮನವು ಸವಿದಂತಾಗುವುದು ಒಲವಭರಿತ ಜೇನ ಹನಿ..!!-
~ ಮನುಜಾ ~
ಜಂಟಿ ಇರುವಾಗ ಜೀವನದ ಗುರಿಯ
ದಡವನು ತಲುಪುವ ಸಲುವಾಗಿ ಆತ್ಮವಿಶ್ವಾಸದಿ
ಮನದೊಳು ಮೂಡಲಿ ಜೀವನದ ಬಗ್ಗೆ ಒಂದಷ್ಟು ಯೋಜನೆ.!
ಒಂಟಿ ಇರುವಾಗ ಜೀವನದ ದಡವನು ತಲುಪಲಾರೆನೆಂದು
ಹತಾಶೆಯಿಂದ ಕೊರಗಿ ಕೊರಗಿ ಮನದೊಳು ಎಂದೂ
ಮೂಡದಿರಲಿ ಸಾವಿನ ಬಗ್ಗೆ ಯೋಚನೆ..!!-
❣️
ನನ್ನೆಲ್ಲಾ ಹೆಜ್ಜೆಯೊಡನೆಯೇ ಹೆಜ್ಜೆ ಬೆಸೆದವಳು ನೀ.!
ನನ್ನೆಲ್ಲಾ ಮೌನಭರಿತ ಮಾತಿಗೆ ಧ್ವನಿ ಸೇರಿಸಿದವಳು ನೀ.!
ನನ್ನೆಲ್ಲಾ ಮನದೊಡಲ ಭಾವವ ಸಂಪೂರ್ಣ ಅರಿತವಳು ನೀ.!
ನನ್ನೆಲ್ಲಾ ನೋವ ತಿಳಿದಿದ್ದರೂ ಸಹ ನಕ್ಕು ನಗಿಸಿ ನಲಿಸಿದವಳು ನೀ.!
ನನ್ನೆಲ್ಲಾ ನೋವನ್ನೆನೆನೆನೆದೂ ಜೊತೆಯೇ ಕಂಬನಿ ಹರಿಸಿದವಳು ನೀ.!
ನನ್ನೆಲ್ಲಾ ಸಮಯದಿ ಸದಾ ಜೊತೆಗಿರುವೆನೆಂದು ಭರವಸೆಯಿತ್ತವಳು ನೀ..!!-
ಸಂಪೂರ್ಣ ಅರಿಯಲಾಗುತ್ತಿಲ್ಲಾ ಮನದೊಳು ತುಂಬಿ
ತುಳುಕುತಾ ನಾಟ್ಯವಾಡುತ್ತಾ ಅವಿತಿರುವ ಈ ಪರಿಯ ಭಾವ.!
ಈ ಪರಿಯ ಭಾವವನು ಸಂಪೂರ್ಣ ಅರಿತುಕೊಳ್ಳುವುದರೊಳಗೆ ಸ್ವತಃ ತನ್ಮನದಸ್ಥಿತ್ವವನೇ ಮರೆತು ಈ ಭಾವದೊಳಗೇ ಬೆರೆತು ಕೊನೆಗೂ ಅರಿಯಲಾಗದೇ ಕಳೆದೋಗಬಹುದೇನೋ ಈ ಜೀವ..!!-
~ ಮನುಜಾ ~
ಸಿರಿತನದಲಿದ್ದರೇನು ಅವನೂ
ಕೂಡ ಭಿಕ್ಷೆ ಬೇಡುವ ಭಿಕ್ಷುಕನಲ್ಲವೇ.!
ಸಿರಿತನ ಇನ್ನೂ ಬೇಕೆಂಬ ದುರಾಸೆಯ ಭಿಕ್ಷೆಯನ್ನು
ಅವನು ಕೊನೆಯವರೆಗೂ ನಿರಂತರವಾಗಿ
ಬೇಡುತ್ತಲೇ ಇರುವನಲ್ಲವೇ..!!-
ಈ ಸುಂದರ ಸಮಯದಲ್ಲಿ
ತಂಪಾಗಿ ಬೀಸುತಿರುವ ತಂಗಾಳಿಯಲ್ಲಿ
ನನ್ನನೇ ಮರೆತು ನಿನ್ನೊಳು ಬಂಧಿಯಾದೆ ನಾನಿಲ್ಲಿ
❣️ನಾನೆಂದಿಗೂ ಬಿಡುಗಡೆಯ ಬಯಸಿ ಬೇಡೆನು ನಿನ್ನಲ್ಲಿ❣️
ಹೆಜ್ಜೆಯೊಂದಿಗೆ ಹೆಜ್ಜೆ ಬೆಸೆಯುತಾ ನೀನಿದ್ದರೆ ಸಾಕು ಜೊತೆಯಲ್ಲಿ
ನನಗದಕ್ಕಿಂತಲೂ ಸಂತಸಭರಿತ ನೆಮ್ಮದಿ ದೊರಕುವುದು ಬೇರೆಲ್ಲಿ
ತಿಳಿಸಿಬಿಡು ಸದಾ ಹೀಗೇ ಜೊತೆಗಿರುವೆಯಾ ಬಾಳ ಪಯಣದಲ್ಲಿ-
ಜೀವನವೆಂಬುದೂ
ನಮ್ಮಿಚ್ಚೆಯಂತೆ ಅಭಿನಯಿಸುವುದಲ್ಲದೇ
ಅದರಿಚ್ಚೆಯಂತೆ ಹೊಂದಿಕೊಂಡು ಜೀವನವನ್ನ ಅನುಭವಿಸುವುದೆಂಬುದೂ ಎಷ್ಟು ಅಕ್ಷರಶಃ ಸತ್ಯವೋ.!
ಕೆಲವೂ ಸಮಯ ಸಂದರ್ಭ ಸಂದಿಗ್ಧ ಪರಿಸ್ಥಿತಿಗನುಗುಣವಾಗಿ ಜೀವನವನ್ನ ಅನುಭವಿಸುವುದರ ಜೊತೆ ಜೊತೆಗೇ ಉದ್ದೇಶ ಪೂರ್ವಕವಾಗಿ ಜೀವನದಲ್ಲಿ ಅಭಿನಯಿಸಬೇಕಾಗಿ
ಬರುವುದೆಂಬುದೂ ಕೂಡ ಅಷ್ಟೇ ಸತ್ಯ..!!-
ಭಾವನೆಯ ಬಣ್ಣಗಳು ಯಾರೂ
ಸಹ ಅಷ್ಟು ಸುಲಭವಾಗಿ ಅರಿಯದಂತೇ
ವಿಧ ವಿಧವಾದ ನೋವು~ನಲಿವಿನ ಬಣ್ಣ ಬಣ್ಣಗಳ
ಮಿಶ್ರಣದಿಂದಲೇ ಮನದೊಳು ಆವೃತವಾಗಿ ಅಡಗಿರುತ್ತವೆ.!
ಈ ನೋವು~ನಲಿವಿನ ಬಣ್ಣಗಳನು ಯಾರು ಅರಿತು ಮನಪೂರ
ಅರ್ಥೈಸಿಕೊಳ್ಳುವರೋ ಆ ಮನಗಳಿಗೇ ಮಾತ್ರ ನಿಜವಾದ
ಭಾವನೆಯ ಬಣ್ಣಗಳು ಸಂಪೂರ್ಣ ಅರಿವಾಗುತ್ತವೆ..!!-
~ ಮನುಜಾ ~
ಬದುಕುವುದಕ್ಕಾದರೂ ಇರಲಿ ಒಂದಷ್ಟು ಆಸೆ.!
ಆಸೆ ಇತರರ ಬದುಕನ್ನ ಇಣುಕಿ ನೋಡಿ ಆಗದಿರಲಿ ದುರಾಸೆ.!
ದುರಾಸೆ ನಕಾರಾತ್ಮಕ ಭಾವದಲಿದ್ದರೇ ನಾಳೆಗಾಗಬಹುದೂ ನಿರಾಸೆ.!
ನಿರಾಸೆ ಸಕಾರಾತ್ಮಕ ಮನೋಭಾವದಲಿದ್ದರೇ ನಾಳೆಗೆ ತಾನಾಗೇ
ಮೂಡುವುದು ಬಂದದ್ದನ್ನ ಸ್ವೀಕರಿಸುತಾ ಬದುಕುವಾಸೆ..!!-