ನೀನೊಂದು ಸುಂದರ ಕನ್ನಡ ಶಬ್ದ
ನಾನೊಂದು ಗಣಿತದ ಲೆಕ್ಕ
ನನ್ನ ಉತ್ತರ ಒಂದೇ
ಆದರೆ ನಿನ್ನ ಅರ್ಥ ಸಾವಿರಾರು...-
ಪ್ರೇಮದ ಗಣಿತ ಗೊತ್ತೆನ್ರೋ ನಿಮಗೆ....
ಇಲ್ಲಿ ಎರಡರಲ್ಲಿ ಒಂದು ಹೋದರೆ
ಉಳಿಯುವುದು ಬರಿ ಸೊನ್ನೆ ಮಾತ್ರ
-
ಹೃನ್ಮನದಗಣಿತಭಾವಗಳ ಗಣಿತ ನೀನು
ನಿನ್ನ ನೆನಪಿನಂಗಳದಿ ರಿಂಗಣ ಗುಣಿತ ಹಾಕುವ ನೆಪಮಾತ್ರದ ಚಿಟ್ಟೆ ನಾನು.-
ಸಿಕ್ಕಿದ್ದಳು
ನನಗೊಬ್ಬಳು
ಗೆಳತಿ
ಅವಳು ಲೆಕ್ಕದಲ್ಲಿ
ಆಗಿದ್ದಳು ಪರಿಣಿತಿ
ಕಲಿಸಿದಳು ನನಗೆ ಗಣಿತ
ನನ್ನ ಖುಷಿ ಆಗ ಅಗಣಿತ..-
ಗಣಿತ ಪಂಡಿತನೋರ್ವ ತನ್ನ ಮನೆಯವರೆಲ್ಲರ ಹೆಸರ ಅಳಿಸಿ ಹೊಸದಾಗಿ ನಾಮಕರಣ ಮಾಡಿದ್ದ...
ಅಪ್ಪ - ಬೆಸೆಸಂಖ್ಯೆ,
ಅಮ್ಮ - ಸಮಸಂಖ್ಯೆ,
ಮಗ - ಸಂಕಲನ,
ಮಗಳು - ವ್ಯವಕಲನ,
ಸೊಸೆ - ಭಾಗಾಕಾರ,
ಅಳಿಯ - ಗುಣಾಕಾರ,
ಮೊಮ್ಮಕ್ಕಳು - ಲಾ ಸ ಹ, ಮಾ ಸ ಹ,
ತಾನು - ಬೀಜಗಣಿತ,
ಹೆಂಡತಿ ಮಾತ್ರ - ರೇಖಾಗಣಿತ, ಭಿನ್ನರಾಶಿ.-
ಭಾವ ಬಿಂದುವಿನ
ಪೂರ್ಣ ಸ್ವರ್ಶ ನೀ
ಅಪೇಕ್ಷಿತ ವ್ಯಾಸನಿಯ
ಭೂ ಪರದ ಸೇತುವೆ ನೀ
ಪ್ರೀತಿ ಜ್ಯಾ ಗಳೇ ಆಗಿವೆ
ಸಂಪೂರ್ಣ ಸಂಕೀರ್ಣವಾಗಿದೆ
ಸಮಾನು ಬಾಹುಗಳಗೆ
ಸ್ವಂದಿಸಲಿ ಸಮಾನತೆಗೆ ಸಂಕ್ಷಿಪ್ತವಾಗಿ
ನಾ ವರ್ಣಿಸಲಾರೆ
ಪ್ರೇಮದ ವೃತ್ತಿಯನ್ನು...!!!-