ಇವತ್ತಿನಿಂದ ನಾನ್ ಸತ್ರೂ ಎಣ್ಣಿ ಮುಟ್ಟಲ್ಲಾ ,
ನಿನ್ ಉದ್ದಾರ ಆಗಲ್ಲಾ ,
ನಿನ್ ಸರಿ ಹೋಗಲ್ಲಾ ,
ನಿನ್ ಮೊದಲ್ ಸತ್ತೋಗು ,
ಯಾಕ್ ಇನ್ನೂ ಬದ್ಕಿದಿಯಾ ,
ಈ ಜೀವನಾ ಬೇಕಾ ನಿನಗೆ ,
ನನ್ನ ಹಣೆಬರಹನೇ ಸರಿಯಿಲ್ಲಾ ,
ನಮ್ಮ ಅಮ್ಮಾ ಬಿಡಲ್ಲಾ ,
ಈ ಸತಿ ಪಕ್ಕಾ ಗೋವ ಟ್ರೀಪ್ ಮಾಡೋಣ ,
ನನಗೂ ಒಂದ್ ಟೈಮ್ ಬರ್ತದ ,
ನಮ್ಮ ಅವ್ವಾ ಬರಿ ಬೈತಾಳ ,
ಎಲ್ಲರ ರೊಕ್ಕಾ ಸಾಲ ಕೊಡಸು ,
ಬಿ ಎಮ್ ಡಬ್ಲು ಕಾರ್ ಮುಂದ್ ಒಂದ್ ದಿನಾ ತಗೋತಿನಿ ,
ಅಮೇರಿಕಾಗೆ ಹೋಗತಿನಿ ,
ನನ್ನ ಹುಡ್ಗಿ ನನ್ನ ಬಿಟ್ಟ ಹೋಗಲ್ಲಾ ,
ನಮ್ಮ ದೇಶ ಬೆಳೆಯಲ್ಲಾ ,
ನಾಳೆ ಅಕಿಗ್ ಪ್ರಪೋಸ್ ಮಾಡೇ ಮಾಡ್ತಿನಿ ,
-
ಮನಸ್ಸಿಗೆ ಬಂದಿದ್ದನ್ನಾ ಗಿಚ್ಚೋಳು 🖋
ಪುಸ್ತಕ ತಂದಿದ್ದರು ,
ತಂದಿಲ್ಲಾ ಎಂದ ಕಳ್ಳ
ರಜೆ ಬೇಕಾಗಿದ್ದಾಗ ,
ಮನೆಯಲ್ಲಿರುವರನ್ನಾ ಸಾಯಿಸಿದ ಕೊಲೆಗಾರ
ನೋವೇ ಇರದ ದೇಹಕ್ಕೆ ,
ಕುಂಟು ನೆಪ ಹೇಳಿದ ರೋಗಿ
ಸ್ನೇಹಿತರನ್ನು ತಪ್ಪಿನಲ್ಲಿ ಸಿಗಿಸಿ ,
ಕೂತು ತಮಾಷೆ ನೋಡಿದ ವೀಕ್ಷುಕ
ಓಪನ್ ಹೇರ್ ಹುಡ್ಗಿಯನ್ನ ನೋಡಿ ,
ಚರಣ್ ಸರ್ ಹಂಗೆ ಹಾಡಿದ ರಸಿಕ
ಒಂದು ಸುಳ್ಳು ಹೇಳಿ ,
ಸಾವಿರ ಸುಳ್ಳಗೆ ಆದ ಸೇರಮಾಲೆಗಾರ
ವೆಸ್ಟ್ ಎಂದು ಬಿಸಾಡಿದ ಹಾಳೆಗೆ ,
ಕಾಫಿ ಚೀಟಿ ತಯಾರಿಸಿದ ಕಲೆಗಾರ
ಜೇಬಿನಲ್ಲಿ ಅಡಗಿಟ್ಟ ತಿಂಡಿಗೆ ,
ಕೂರುಮ್ ಕೂರಂ ತಿನ್ನುವ ತಿಂಡಿಪೋತ
ಅಯ್ಯೋ ,
ದಿನಾ ವೇಷ ಬದಲಾದರೂ
ಟೀಚರ್ ಮಾತ್ರ ಬದಲಾಗಲಿಲ್ಲಾ....
-
ಬಾಚಿ ಬಾರಿ ಕರೆದರೂ ,
ಬರದೇ ಹೋದರೂ ,
ಬೇಕಾದ ಹಂಬಲಕ್ಕೆ ,
ಒತ್ತಾಯಿಸುವುದು ಸರಿಯೇ ?
ಸಿಗದೆ ಹುಡುಕುವ ಮುತ್ತಿಗೆ ,
ಮುತ್ತಿಕ್ಕೂವರು ಕಡಿಮೆಯೇ ?
ಹಿಂದೆ - ಮುಂದೆ ತೂಗುವ ಮನಸ್ಸಿಗೆ ,
ಬಿಗಿದಪ್ಪಿ ಬರುವರೇ ?
ನನ್ನದೆಂದು ಹೇಳುವ ಹೆಮ್ಮೆ ,
ನನಗಾಗಿಯೇ ಎಂಬ ಪ್ರೀತಿ ,
ನನ್ನ ಉಸಿರ ಜ್ಯೋತಿ ,
ಎನ್ನ ಮನಸ್ಸಿನ ಪ್ರತಿಂಬ !
ಸಿಕ್ಕರೆ ಸಾರ್ಥಕ , ಸಿಗದಿದ್ದರೆ ಸಾಂತ್ವನ.....
-
ತಿಳಿಯದ ಏಕಾಂತವೆಕೋ ಕಾಡುತಿದೆ
ಸುಮ್ಮನಿರಲೇ ನೀ ಇರದೆ ,
ಆಗೊಮ್ಮೆ ಹೀಗೊಮ್ಮೆ ಸ್ಮರವಾಗುವೇಕೆ ?
ಬೀಳವಿಲ್ಲದ ಭಾವಕ್ಕೆ ಕೊಂಡಿಯಾಗು
ತಾತ್ಸಾರವ ಬದಿಗಿಟ್ಟು...-
ಮನವೆಂಬ ಹುಚ್ಚು ಕುದುರೆಗೆ
ಹೆಚ್ಚು ಸಾಟಿ ನೀಡಿದಾಗ
ಬಯಕೆ ಬೇಡಿಕೆ ತೀರಿಸುವ
ಹಂಬಲಿಕೆ ಸಹಜವಲ್ವೇ...?
ಸಹನೆ ಇರ್ಲಿ ಕೊನೆಯವರೆಗೂ
ಇಲ್ಲದಿರುವ ಕಾಣಿಕೆಗೆ ಕಾಯಬೇಕು ,
ಕೊರಗಿ ಕರಗಿಸಲಿ ಸಿಟ್ಟು - ಗಿಟ್ಟು
ನಿರೀಕ್ಷೆಗಳನ್ನಾ ಬದಿಗಿಟ್ಟು
ಮನಸ್ಸು ಹಗುರಾಗಲಿ ಎಲ್ಲ ಬಿಟ್ಟು....!
-
ವರ್ಷದ ಕೊನೆ ,
ಜೀವನದ ಕೊನೆಯ ವರ್ಷ
ಇದಾಗದೆ ಇದ್ದರೂ ಸಾಕಷ್ಟು
ಪಾಠ ಕಲೆತ ದಿನಗಳು...
-