ಕಾಯುತಿರುವೆ-ಕ್ಷಮಿಸಿಬಿಡುವೆ
ಒಮ್ಮೆ ನೀ ಕ್ಷಮೆಯ ಕೇಳು
ಕ್ಷಮಿಸಿಬಿಡುವೆ ಎಲ್ಲ ಮರೆತು
ಮೊದಲಿನಂತಿರುವೆ ಇಲ್ಲ ಏನು ನಿನ್ನ ಹೊರತು
ಹಳೆಯ ನೆನಪು ಚುಚ್ಚುತಿಹುದು ಎದೆಯಲಿ ಕುಳಿತು
ಕಾಯುತಿಹೆನು ಕೇಳಲು ನಿನ್ನ ಸಿಹಿಯ ಮಾತು🙎♀
-
ನಿಮ್ಮಿಂದ ಏನಾದ್ರು ತಪ್ಪಾಗಿದ್ರೆ, ಯಾರ ಮನಸಿಗಾದ್ರೂ ನೋವಾಗಿದ್ರೆ, ಅಹಂ, ನಾಚಿಕೆ ಬಿಟ್ಟು ಕ್ಷಮೆ ಕೇಳಿ ಅವರು ನಿಮಗಿಂತ ಹಿರಿಯರಾಗಿರ್ಲಿ ಕಿರಿಯರಾಗಿರ್ಲಿ
ಕ್ಷಮೆ ಕೇಳೋದ್ರಿಂದ ನಿಮ್ಮ ವ್ಯಕ್ತಿತ್ವ ಕಿರಿದಾಗಲ್ಲ-
extremely sorry 🙏🏻
ಕೇಳುತ್ತಿರುವೆ ನಾ ಕ್ಷಮೆಯನ್ನೂ,
ಮುನಿಸೆಕೇ ನನ್ನ ಮೇಲಿನ್ನೂ,
-
ನಿನ್ನ ಪ್ರೀತಿಗಾಗಿ ಒಮ್ಮೆ ಅಲ್ಲ.. ನನ್ನೊಲವೆ,
ದಿನಕ್ಕೆ ಸಾವಿರ ಸಾರಿ ಬೇಕಾದರೂ ಕ್ಷಮೆ ಕೇಳುವ.
ಪದೇ ಪದೇ ಕೇಳುವ ಕ್ಷಮೆಗೆ ಬೆಲೆ ಇಲ್ಲ ಮನವೇ,
ಆ ಕ್ಷಮೆ ಗಿಂತ ಬೆಲೆಬಾಳುವ ಮೌಲ್ಯ ನಿನ್ನ ಪ್ರೀತಿ ನಲ್ಲೆ.
ಕ್ಷಮೆ ಕೇಳಿದ ಕಾರಣಕ್ಕೆ ನನ್ನದು ತಪ್ಪು ಎಂದಲ್ಲ
ನನ್ನಿಂದ ನೀ ಕೈ ತಪ್ಪಬಾರದೆಂದು..!!-
ನನ್ನೊಲವೆ ಪ್ರತಿಕ್ಷಣ ನನಗೆ ನಿನದೆ ಚಿಂತೆ
ಕಾಡುತಿದೆ ನೆನಪುಗಳು ಮನದಲಿ ಕುಂತೆ
ನೀನಿಲ್ಲದೆ ಮನಸ್ಸಾಗಿದೆ ಚಿಂತೆಗಳ ಸಂತೆ
ಬಳಿ ಬಾ ನಿನಗಾಗಿ ಕಾದಿರುವೆ ಕೈಚಾಚಿ ನಿಂತೆ-
ಪ್ರೀತಿಸುವೆ - ಪ್ರೇಮಿಸುವೆ
ನನ್ನನೇ ಪ್ರೀತಿಸುವೆಯೆಂದು ಒಮ್ಮೆ ಹೇಳು
ಚುಚ್ಚುತಿಹ ನೆನಪಿಗೆ ಕಪ್ಪು ಚುಕ್ಕಿಯನಿಟ್ಟು
ಸಿಹಿಯಾದ ಮುತ್ತು ಕೊಟ್ಟು
ನಾ ಹೇಳುವೆ.....ನಿನ್ನ ಪ್ರೀತಿಸುವೆ ಪ್ರೇಮಿಸುವೆ-
***********
ಕಾಯುತಿದ್ದೆ...ಇದೊಂದು ಕರೆಗಾಗಿ... ನಿನ್ನ ಕ್ಷಮೆಯ ಕೇಳಲೆಂದು,
ಕಣ್ಣ ಬಿಂದು ಹೃದಯ ತುಂಬಿ ನಿನ್ನ ಪಾದ ಸೋಕೊವರೆಗು ಕೇಳುವೆ ಕ್ಷಮಿಸೊಮ್ಮೆ..
ಇದ್ದದ್ದು ಗೊತ್ತಿಲ್ಲ ನಿನ್ನ ಮರತೆಂದು, ಆರಿದ್ದು ಗೊತ್ತಿಲ್ಲ ಎದೆಯ ಗಾಯವೆಂದೂ. ಆ ನೋವೆಲ್ಲ ಅರಿವಾಗಿಸಿತ್ತು ನಿನ್ನ ನೋವೆನೆಂದು. ಕ್ಷಮಿಸಿಬಿಡು ಮತ್ತೊಮ್ಮೆ ನಿನಗಾದ ನೋವಿಗಿಂದು.. ಸಾಗೋಣ ಜೊತೆಗೂಡಿ ಮುಂದೆಂದು-
ನೀ ನನ್ನವಳಾದಗ ಕ್ಷಮೆ ಕೆಳೂ ಅವಶ್ಯಕಥೆ ಇಲ್ಲಾ
ಯಾಕಂದ್ರೆ ಬರಿ ನೆನ್ಪಲ್ಲಿ ಅಲ್ಲಾ ಹೃದಯದಲ್ಲಿ ಇಟ್ಟಿನಿ ನಿನ್ನ
ನಿನಗಾಗಿ ತೆರೆದಿರುವುದು ಮನೆ ಬಾಗಿಲು ಸದಾ
ನಿನ್ನ ಮಡಿಲು ಬೇಕಿನಿಸಿದೆ ನನ್ನ ತೊಳು ನಿನ್ನ ಬಯಸಿದೆ
ಸಿಟ್ಟು ಬಿಟ್ಟು ಕಾಲ್ ರಿಸೀವ್ ಮಾಡೆ ಚಿನ್ನ
ಕರೆನ್ಸಿ ಕಾಲಿ ಆಗುವ ಮುನ್ನ😁🙏
-
ಮರೆತು ಬಿಡು ಗೆಳತಿ ನಾ ಮಾಡಿದ ತಪ್ಪು
ಬಂದಿರುವೆ ನಾನು ನಿನ್ನಲ್ಲಿ ಎಲ್ಲಾ ಮರೆತು
ನಿನ್ನ ಪ್ರೀತಿ ಒಂದಿದ್ದರೆ ನನಗದು ಸಾಕು
ಬೇಕಿಲ್ಲ ನನಗೆ ಯಾರ ಜಾಹಿರಾತು
ನೀ ನನ್ನ ಜೊತೆ ಕೊನೆಯವರೆಗೆ ಇದ್ದರೆ ಸಾಕು-