Chira_parichita   (Chira_parichita)
53 Followers · 46 Following

Joined 21 March 2020


Joined 21 March 2020
24 JAN 2024 AT 20:30

ಗುರು ಬಲ ಇದೆ ಎಂದು
ಜ್ಯೋತಿಷಿಗಳು ಹೇಳಿದ್ದಾರೆ
ಹೊಸ್ತಿಲು ದಾಟಿ ಬಂದುಬಿಡು ಗೆಳತಿ
ಚಂದ್ರಲೋಕಕ್ಕೆ ಹೋಗಿ
ಸಪ್ತಪದಿ ತುಳಿಯೋಣ
ನಾವೇ ಮೊದಲಿಗರಾಗಿ

-


1 JAN 2024 AT 18:03

ಗೆಲುವಿನ ಸಂಭ್ರಮದಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿದವರು ಪಟಾಕ್ಷೀಯ ಹೊಗೆಯಲ್ಲಿ
ಬಣ್ಣದ ದೂಳಿನಲ್ಲಿ
ಮರೆಯಾಗಿ ಬಿಡುತ್ತಾರೆ

-


30 NOV 2023 AT 14:57

ಗೆಳತಿ ನೀ ಚಿರಪರಿಚಿತೆ
ನಿನ್ನನ್ನು ನಾನು
ಸದಾ ಅಪರಿಚಿತನಾಗಿ
ನೋಡಲು ಬಯಸುತ್ತೇನೆ.


-


30 NOV 2023 AT 12:01


ನಿನ್ನ ಜೊತೆ
ಕಳೆದಂತ ಪ್ರತಿಯೊಂದು ಕ್ಷಣಗಳು
ಮರೆಯದ ನೆನಪುಗಳಾಗಿ
ಸ್ಮಾರಕಗಳಾಗಿ ಬಿಟ್ಟವು

-


26 NOV 2023 AT 14:31

ಅವಳು ಎಂದೆಂದಿಗೂ ನನ್ನವಳೆ
ಆದರೆ ಕೊನೆಯವರೆಗೆ
ನನ್ನ ಜೊತೆ ಇರುವಳಲ್ಲ
ನನಗೆ ಸಿಗುವಳಲ್ಲ
ಆದರೂ ಅವಳು ನನ್ನವಳು

-


26 NOV 2023 AT 6:14

ಎಷ್ಟು ದಿವಸ ಇನ್ನೊಬ್ಬರ ನಗುವಿಗೆ
ನಿನ್ನ ನಗುವನ್ನು ಬಾಡಿಗೆಗೆ ಇಡುವೆಯಾ
ನಕ್ಕುಬಿಡು ಮನಬಿಚ್ಚಿ
ಕಣ್ಣೀರು ಬತ್ತುವವರೆಗೆ.

-


4 NOV 2023 AT 18:00

ನನ್ನ ಹೃದಯದಲ್ಲಿ ಪ್ರೀತಿಯ
ಗಲಭೆ ಎಬ್ಬಿಸಲು
ನಿನ್ನ ಹೃದಯಕ್ಕೆ
ಕುಮ್ಮಕ್ಕು ನೀಡಿರುವೆ
ಅದು ರುಜುವಾತು ಆಗಿದ್ದು
ನನ್ನ ಹೃದಯದಲ್ಲಿ
ನಿನ್ನನ್ನು ಬಂಧಿಸಿಲು
ಜಾಮೀನನು ನೀಡದೆ
ಆದೇಶ ಹೋರಡಿಸಲಾಗಿದೆ.




-


18 JUN 2023 AT 10:00

ಶಿಕ್ಷಕರು ಕಲಿಯುವುದನ್ನು
ಹೇಳಿಕೊಟ್ಟರೆ
ತಂದೆಯಾದವರು ಬದುಕುವುದನ್ನು
ಹೇಳಿ ಕೊಡುತ್ತಾರೆ.

-


16 JUN 2023 AT 18:28

ಗೆಳತಿ ನೀನು
ನೋಡಲು ಅತಿ ಸುಂದರ
ನಿನ್ನ ಸೇರಲು ಬಂದರೆ
ವೈಯ್ಯಾರ ಮಾಡುತ್ತಾ
ಹಾರುವೆ ಸಿಗದೇ

-


16 NOV 2022 AT 8:09

ಜಮಾ-ಖರ್ಚು
ಇಲ್ಲದ
ಬದುಕು
ಶೂನ್ಯ

-


Fetching Chira_parichita Quotes