ಎಚ್. ಎಸ್   (ಎಚ್.ಎಸ್)
128 Followers · 108 Following

read more
Joined 30 April 2019


read more
Joined 30 April 2019
3 NOV 2021 AT 22:34

ಮನುಜ ಸತ್ತಾಗ
ಬೆನ್ನಿಂದೆ ಬರದು ಹಣ
ಒಳ್ಳೆಯದೆ
ತುಂಬಿದ್ದರೆ ಮನದ ಕಣ ಕಣ
ಎಣಿಸಲಾಗದು
ನೀನಿಲ್ಲದೆ ಕಣ್ಣೀರಾಕುವವರ ಬಣ
ಒಂದು ದಿನ ಕಣ್ಣುಮುಚ್ಚಿ
ಹೆಣವಾಗಿ ನೀ ಸೇರಿದಾಗ ಮಸಣ...

-


27 JUL 2021 AT 23:04

ಮೌನದಿ ಮಾತಾಡದೆ ನಾನಿದ್ದ ಮಾತ್ರಕ್ಕೆ
ದೂರಾದೆ ಎಂದೂ ಭಾವಿಸಿದೆಯ
ಬಗೆದಷ್ಟು ಬರಿದಾಗದ ಪ್ರೀತಿ ತುಂಬಿದೆ ಅನುಮಾನವೇಕೆ ಗೆಳತಿ
ಎಂದೆಂದಿಗೂ ನೀನೆ ಈ ಹೃದಯದ ಒಡತಿ

-


27 JUL 2021 AT 22:31

ಸಮಸ್ಯೆಯ ಸುಳಿಯನ್ನು ಸವಾಲಾಗಿ ಸ್ವೀಕರಿಸಿ ಸವಾರಿ ಮಾಡುವ ಮನಸ್ಸಿನ ಅಚಲ ಆತ್ಮವಿಶ್ವಾಸ

-


27 JUL 2021 AT 11:11

ಓ ಮನುಜ
ಹಣೆಯ ಬರಹಕ್ಕೆ
ಕಾರಣ ನೂರು
ನೋವು ಬಂದಾಗ
ಕನಸುಗಳೆ ಚೂರು
ಸಹಿಸಿ ಗೆದ್ದಾಗ
ಜೀವನ ಪಾಠ ಜೋರು
ನಲಿವೆ ಇದ್ದಿದ್ದರೆ
ದೂರಾಗುತ್ತಿರಲಿಲ್ಲ ನಿನ್ನವರಾರು
ಇದು ಕಲಿಯುಗ
ಇಲ್ಲಿ ಮನುಷ್ಯತ್ವವನ್ನೆ
ಮರೆಸುವ ದುಡ್ಡಿನದ್ದೆ ದರ್ಬಾರು...

-


25 JUL 2021 AT 23:33

ನಿನ್ನ ಸಿಹಿ
ಸಕ್ಕರೆಯ
ನಗುವಿಗೆ ಸೋತು
ಈ ಹೃದಯ
ಕರಗಿಹೋಗಿದೆ
ಗೆಳತಿ....
ಮಡಿಲೇಕೆ ನನ್ನೋಡಲೆ
ನಿನಗಾಗಿ ಕೈ ಬೀಸಿ
ಕರೆಯುತಿದೆ
ಹರಿಸು ಬಾ ಪ್ರೀತಿಯ ಧಾರೆ
ನೀನೆ ಅಲ್ಲವೇ
ನನ್ನ ಬಾಳ ಮಿನುಗು ತಾರೆ

-


9 APR 2021 AT 8:39

ದುಡ್ಡೆ ದುನಿಯ
ದುರುಳನಾದರು
ದುಡ್ಡಿದ್ದರೆ ಧರಣಿಗೆ ಧಣಿ
ದುಷ್ಟನಾದರು
ಕಾಂಚಣದಿಂದ
ಅವ ಸಮಾಜಕ್ಕೆ ಚಿನ್ನದ ಗಣಿ
ಇದು ಕಲಿಯುಗ
ಯಾರಿಗೆ ಬೇಕು ಒಳ್ಳೆಯ ಗುಣ
ವಿಜೃಂಭಿಸಿ
ಆಳುತ್ತಿದೆಯಲ್ಲ ಗುಣದ ಮೇಲೆ ಹಣ
ದುಡ್ದಿದ್ದವರಿಗೆ ಸನ್ಮಾನ
ದಣಿದು ದುಡಿದು ಬದುಕುವವರ ಬದುಕು ಸ್ಮಶಾನ

-


31 MAR 2021 AT 0:08

ಓ ಹೃದಯದ ಅರಸಿ
ನೀ
ಕನಸಲಿ ಕಡಲಾಗಿ
ಮನಸಲಿ ಮುಗಿಲಾಗಿ
ಕಣ್ಣಿಗೆ ಕಾಮನಬಿಲ್ಲಾಗಿ
ನನ್ನೆದೆಯಲ್ಲಿ ನೆಲೆಯಾಗಿ
ಉಸಿರಲ್ಲಿ ಹೆಸರಾಗಿ
ಬದುಕಿಗೆ ಬೆಳದಿಂಗಳ ಬೆಳಕಾಗಿ
ಭಾವನೆಗಳ ಮೆರವಣಿಗೆಯಲ್ಲಿ
ಮಹಾರಾಣಿಯಾಗಿ
ಮಾಡುವೆಯಲ್ಲ ಪ್ರೀತಿಯ ಜಂಬು ಸವಾರಿ
ಇದು ಸರಿಯೇ 🤔
ನಿದ್ದೆಯ ಕೊಡದೆ ನನ್ನನ್ನು ಬಿಡದೆ !😍💞

-


30 MAR 2021 AT 23:32

ಮಮತೆಯ ತಿಳಿಸುವುದು
ಕರುಳ ಬಳ್ಳಿಯ ಭೇಟಿ
ತಾಯಿಯ ಋಣ
ತೀರಿಸಲಾಗದು ಹುಟ್ಟಿ ಬಂದರು
ಜನ್ಮಜನ್ಮಗಳ ದಾಟಿ
ಅಮ್ಮ ನೀನು
ದೇವರ ಪ್ರತಿರೂಪ
ಈ ಭೂಮಿಯಲಿ ನಿನಗಾರು ಸರಿಸಾಟಿ

-


29 MAR 2021 AT 1:07

ಹಚ್ಚುವುದೇನಿದೆ
ನನ್ನೋಲವೆ
ನೋಡುತಿದ್ದರೆ
ಆ ನಿನ್ನ ಸುಂದರ ಕಣ್ಣ
ಮನದಲ್ಲಿ
ಮೂಡುತ್ತಲ್ಲ
ಕಾಮನಬಿಲ್ಲಿನ ಬಣ್ಣ
ನೀ ಧರೆಗಿಳಿದ
ಸೌಂದರ್ಯ ತುಂಬಿದ
ದೇವಲೋಕದ ಹೆಣ್ಣ
ನಿನಗಾಗೆ ನನ್ನುಸಿರು
ನೆನಪಿರಲಿ
ಅಳಿಸಲಾಗದು
ನಿನ್ನೇಸರ
ನಾ ಸೇರಿದರು ಮಣ್ಣ..

-


28 MAR 2021 AT 23:46

ಅಂತರಂಗದಲ್ಲಿ
ಅರಮನೆಯ ಕಟ್ಟಿ
ಮಹಾರಾಣಿಯಾಗಿಸಲು
ಹೃದಯವ ಮೀಸಲಿಟ್ಟು
ಕಾದಿರುವೆ...
ದೂರ ನಿಂತಿಲ್ಲ ನಾನು
ನನ್ನುಸಿರಲ್ಲಿ ನಿನ್ನೇಸರಿರಿಸಿ
ಕೈ ಬೀಸಿ ಕರೆಯುತಿರುವೆ
ಒಮ್ಮೆ ತಿರುಗಿ ನೋಡದೆ
ನೀನ್ಯಾಕೆ ಸುಮ್ಮನೆ ಕುಂತಿರುವೆ!..

-


Fetching ಎಚ್. ಎಸ್ Quotes