ಇಂದು ಕನ್ನಡ ರಾಜ್ಯೋತ್ಸವ
ಎಲ್ಲರ ವಾಟ್ಸಪ್ ಸ್ಟೇಟಸ್ನಲ್ಲು ಕನ್ನಡದ ಉತ್ಸವ
ಆದ್ರೆ ಅದು ಬರಿ ಸ್ಟೇಟಸ್ ಗೆ ಸೀಮಿತವಾಗಿದ್ದು ಕಟು ವಾಸ್ತವ..☹️
ಅದನ್ನು ಮರೆಮಾಡುವವರಿಗೆ ವರ್ಷಕೊಮ್ಮೆ ಕನ್ನಡ ರಾಜ್ಯೋತ್ಸವ...!
ಮಾತಾಡಿ ಮನಸ್ಸಲ್ಲಿ ಮಾತೃಭಾಷೆಗೆ ಮನೆ ಮಾಡಿರುವವರಿಗೆ ದಿನಾಲು ಕನ್ನಡದ ಹೃದಯೋತ್ಸವ...!
ಬದಲಾಗು ಓ ಕನ್ನಡದವ
ಮಾತಾಡು ಕನ್ನಡವ..!!
-
ನನ್ಮನದಲ್ಲಿ ನಿತ್ಯ ಮಿಡಿಯುವ ಈ ಸಾಲುಗಳು
ಚೆಂದದ ಪದಗಳಲ್ಲಿ ಕಟ್ಟಿಹ ಕನ್ನಡದಾಳುಗಳು
ಮನುಷ್ಯ ಜಾತಿ ತಾನೊಂದೆ ವಲಂ ಎಂದರು
ಅರಿವೇ ಗುರು ನುಡಿ ಜೋತಿರ್ಲಿಂಗಗಳೆಂದರು
ಮಾನವ ಜನ್ಮ ದೊಡ್ಡದು, ಹಾನಿ ಬೇಡವೆಂದರು
ಕುಲ ಕುಲ ಕುಲವೆಂದು ಹೊಡೆದಾಡದಿರಿ ಎಂದರು
ಜಗದೇಳಿಗೆಯಾಗುವುದಿದೆ ಕರ್ನಾಟಕದಿಂದೇ,
ನರನರವನೆಲ್ಲ ಹುರಿಗೊಳಿಸಿ ಹೊಸೆದು
ಹಚ್ಚೇವು ಕನ್ನಡದ ದೀಪವೆಂದರು
ಲೆಕ್ಕಿಗಮಿತಾಕ್ಷರರು ಬೆಳೆದು ಮೆರೆದಿಹ ನಾಡೆಂದರು
ಸದ್ವಿಕಾಸದ ತಾಯಿಗೆ ನಿತ್ಯೋತ್ಸವ ಎಂದರು
ವಿಶ್ವಭಾರತಿಗೆ ಕನ್ನಡದಾರುತಿ ಮಾಡಿದರು
ಸರ್ವ ಜನಾಂಗದ ಶಾಂತಿಯ ತೋಟವೆಂದರು
ತನು ಕನ್ನಡ ಮನ ಕನ್ನಡ ನುಡಿ ಕನ್ನಡವೆಂದರು.
ಕನ್ನಡದ ಕೋಗಿಲೆಗಳು ಉಲಿದ ಪದಗಳಿವು
ನಿತ್ಯ ಕೇಳುತಲೆನ್ನ ಬಾಳಿದು ಸಾಗುವುದು.-
ಬರಗಾಲವಿಲ್ಲ ಬರವಣಿಗೆಗೆ
ನಿತ್ಯ ಚಿಮ್ಮಿ ಹೊಮ್ಮುತಿದ್ದಾರೆ
ಸಾಹಿತಿಗಳು ಮೆಲ್ಲಗೆ.
ಪ್ರತಿ ಹೂವಲಿರುವ ವಿಶಿಷ್ಟ
ಪರಿಮಳದಂತೆ ಪ್ರತಿಯೊಬ್ಬರ ವಿಶಿಷ್ಟ
ಅನುಭವಗಳ ಧಾರೆ ಹರಿಯುತಿದೆ.
ಮಾತೃ ಭಾಷೆಯ ಬಳಸಿ ಬೆಳಸಿ ಉಳಿಸಲು
ನಿಂತ ಸೈನಿಕರು ನಾವೆಲ್ಲಾ ನಿಮ್ಮೆಲ್ಲರ ಪ್ರೋತ್ಸಾಹ
ಕನ್ನಡಾಂಬೆಗೆ ನೀಡೊ ಗೌರವ.-
💛ತನು-ಮನದಲ್ಲಿ❤️
💛ನರನಾಡಿಯಲ್ಲಿ❤️
💛ಹೃದಯದಲ್ಲಿ ನೆಟ್ಟಿವು❤️
💛ಕನ್ನಡದ ಕಂಪು ಚೆಲ್ಲುತ❤️
💛ಕನ್ನಡದ ಡಿಂಡಿಮವ ಬಾರಿಸುತ❤️
💛ಎಲ್ಲೆಲ್ಲೂ ಕನ್ನಡದ ಬಾವುಟ ಹಾರಿಸುವೆವು..❤️
ಮತ್ತೊಮ್ಮೆ ಮೊಗದೊಮ್ಮೆ ಕನ್ನಡ ಪ್ರೇಮಿಗಳಿಗೆ
💛ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು❤️-
ನನ್ನೆಲ್ಲಾ yq ಬಳಗಕ್ಕೆ ಕನ್ನಡ ರಾಜ್ಯೋತ್ಸವದ ಹಾಗೂ ಕನ್ನಡ ಹಬ್ಬದ ಹಾರ್ದಿಕ ಶುಭಾಶಯಗಳು
ಸಿರಿ ಕನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ 💐💐💐-
ಕನ್ನಡ ಬಾವುಟಕ್ಕೇ ಎರಡೇ ಬಣ್ಣ
ನಮ್ಮ ಹೃದಯದ ಗುಡಿಗೆ ವಿಷ್ಣುನೇ ಅಣ್ಣ
ಭುವನೇಶ್ವರಿದೇವಿ ಕನ್ನಡದ ಅಮ್ಮ
ಡಾ ವಿಷ್ಣುವರ್ಧನ್ ಕರ್ನಾಟಕದ ಸಿಂಹ💛❤️
️
ಜೈ ಕನ್ನಡಾಂಬೆ💛❤️
-
ಜೇನಿನ ಹೊಳೆ ಹರಿಸುತ್ತಾ,
ಹಾಲಿನ ಮಳೆ ಸುರಿಸುತ್ತಾ, ಕನ್ನಡಾಂಬೆಯ ಯಶಸ್ಸಿಗೆ ಕಾರಣರಾಗಿರುವ ಎಲ್ಲಾ ಕನ್ನಡಾಂಬೆಯ ಹೆಮ್ಮೆಯ ಕನ್ನಡಿಗರಿಗೆ
ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.
01/11/2018-
ಕರ್ನಾಟಕ ಬರೀ ನಾಡಲ್ಲ, ನಮ್ಮ ಸಂಸ್ಕೃತಿಯ
ಧಾತು. ಕನ್ನಡ ಕೇವಲ ನುಡಿಯಲ್ಲ, ನಮ್ಮಂತರಂಗದ ಮಾತು, ಕನ್ನಡಾಂಬೆಯ ಸೇವೆಗೆ ನಮ್ಮ ಬದುಕನ್ನು ಮುಡಿಪಾಗಿಡೋಣ. ಕರುನಾಡಿನ ಶ್ರೇಯೋಭಿವೃದ್ಧಿಗೆ ಸದಾ ಶ್ರಮಿಸೋಣ. ಕನ್ನಡ ಬೆಳೆಸೋಣ, ಕನ್ನಡ ಕಲಿಸೋಣ ಜೈ ಕನ್ನಡಾಂಬೆ.
-
ಇಂಗ್ಲೀಷನ್ನು ಅಪ್ಪಿ ಮುದ್ದಾಡುವಾಗ
ನೆನಪಾಗದ ಕನ್ನಡಾಂಬೆ...
ಹಿಂದಿ ಶಬ್ದ ಕೇಳಿದ್ದೆ ತಡ ಕನ್ನಡ ತಾಯಿ
ಒಮ್ಮೆಲೇ ನೆನಪಾಗಿ ICU ಕಡೆ ಓಡುತಿಹರು...-