ಈ ಮುಂಜಾನೆಯೂ ಕೆಂಪಾಗಿ, ಕಂಪಾಗಿದೆ...
ಗಿಡ ಮರಗಳು ಹೊಸ ಚಿಗುರಿ ಸೊಂಪಾಗಿದೆ...
ಚಿಲಿಪಿಲಿಗಳ ದನಿ ಸೇರಿ ಇಂಪಾಗಿದೆ...
ನವಯುಗ~ಆದಿಗೆ ಸ್ವಾಗತವು ಜೋರಾಗಿದೆ...
🌺..ಹೊಸ ವರ್ಷದ ಹಾರ್ದಿಕ ಶುಭಾಷಯಗಳು..🌺-
ಭಾರತೀಯ ಆಧ್ಯಾತ್ಮ, ಧರ್ಮ, ಸಾಹಿತ್ಯ, ಕಲೆ, ಸಂಸ್ಕೃತಿಯ ಕುರಿತಾದ ಜಾಗೃತಿ ಮ... read more
ತವರಿನಲ್ಲಿ
ಅಣ್ಣ~ತಮ್ಮಂದಿರೆಲ್ಲ ಒಟ್ಟಾಗಿದ್ದು
ತಂದೆ~ತಾಯಿಯ ಚೆನ್ನಾಗಿ ನೋಡಿಕೊಳ್ಳಬೇಕೆಂದು ಬಯಸುವ ಹೆಚ್ಚಿನ ಮಹಿಳೆ
ಗಂಡನ ಮನೆಯಲ್ಲಿ ಆಸ್ತಿ ಪಾಲಿಗೆ ಪಣತೊಟ್ಟು ಅತ್ತೆ~ಮಾವನ ಅನಾಥರಾಗಿಸುವ ಪರಿಯೇ ವಿಪರ್ಯಾಸ...-
ಖುಷಿಯಾದಾಗ ಪ್ರೀತಿಯಿಂದ
ಮಾತನಾಡಿದಂತೆ
ಸಿಟ್ಟಾದಾಗ ಬೈತಾರೆ..
ಆದರೆ, ಹೆಚ್ಚಿನವರು ಬೈದದ್ದನ್ನು
ನೆನಪಿಟ್ಟುಕೊಂಡಷ್ಟು ಕರಾರುವಕ್ಕಾಗಿ
ಪ್ರೀತಿಯ ನುಡಿಗಳನ್ನು ನೆನಪಿಡಲ್ಲ...
ಯಾಕೆಂದರೆ,
ನಕಾರಾತ್ಮಕತೆ ಅವರ ಹುಟ್ಟುಗುಣ..
-
ಬೆಳಕ ಬಿತ್ತಿ ಬಿಸಿಲ ಬೆಳೆಯ ಇಳುವರಿ ಪಡೆಯಲು
ಅರುಣ ಭಾಸ್ಕರರು ಪಥ ಬದಲಾಯಿಸಿ ರಥವ ಮುನ್ನಡೆಸುತ್ತಿರುವರು ಮಕರ ಸಂಕ್ರಾಂತಿಯಕಡೆಗೆ...-
ನಡೆದಾಡುವ ದೇವರು
ನಡೆ-ನುಡಿಯ ಸರಳ ಸೂತ್ರವ ತಿಳಿಸಿ
ನಡೆದೇಬಿಟ್ಟರು ಮುಕ್ತಿ ಪಥದ ಕಡೆಗೆ...-
ತುಂಬಾ ಜನ ಹೆಚ್ಚಿನ ಶಿಕ್ಷಣ ಪಡೆದವರಿದ್ದರು,
ಬಾಳ ಜನ ಶ್ರೀಮಂತರಿದ್ದರು
ಮನುಷ್ಯರಾದರು ಅಂತ ಹೇಳೋದಕ್ಕಾಗಲ್ಲ...
ಆದರೆ,
ಯಾರಿಗೆ ಧರ್ಮ ಶ್ರದ್ಧೆ ಇದೆಯೋ,
ದೇವರನ್ನ ಗಟ್ಟಿಯಾಗಿ ನಂಬುತ್ತಾರೋ,
ತನಗಿಂತ ಹೆಚ್ಚಿನ ಶಕ್ತಿಯೊಂದಿದೆ ಅನ್ನೋ ವಿಶ್ವಾಸ ಇದೆಯೋ
ಅವರೆಲ್ಲಾ ಒಳ್ಳೆಯತನದಲ್ಲಿ ಬಾಳತಾ ಇದ್ದಾರೆ...-
ಪ್ರಪಂಚ ವಿಶಾಲವಾಗಿದೆ
ಇಲ್ಲಿ ಯಾರೂ ಯಾರಿಗೂ
ಅನಿವಾರ್ಯವಲ್ಲ, ಶಾಶ್ವತವೂ ಅಲ್ಲಾ
ಅಲ್ಪ ಸಮಯದ ಆಯುಷ್ಯದಲ್ಲಿ
ಸ್ನೇಹ, ಸಂಬಂಧ, ಸಮಾಜವನ್ನು ತ್ಯಜಿಸಿ
ಸ್ವಾರ್ಥ ಸಂಸಾರ ಕೂಪದೊಳಗೆ
ಬಂಧಿಯಾಗುವುದಕ್ಕಿಂತ
ಅಬ್ಬೇಪಾರಿ ಅಲೆಮಾರಿಯಾಗಿರುವುದೇ
ಲೇಸು..!!-
~ನಗ್ನಸತ್ಯ~
ತನ್ನ ತವರು ಮನೆಯಲ್ಲಿ
ಅಣ್ಣ ತಮ್ಮಂದಿರು ಒಟ್ಟಾಗಿದ್ದು
ತಂದೆ~ತಾಯಿಯನ್ನು ಚೆನ್ನಾಗಿ
ನೋಡಿಕೊಳ್ಳಬೇಕೆಂದು ಬಯಸುವ
ಹೆಚ್ಚಿನ ಸ್ತ್ರೀಯರು
ತನ್ನ ಗಂಡನನ್ನು ಅವರ ತಂದೆ~ತಾಯಿ,
ಸಹೋದರ, ಸಹೋದರಿಯರಿಂದ
ದೂರ ಮಾಡುವ ಅವಕಾಶಕ್ಕಾಗಿ
ಕಾಯುತ್ತಿರುತ್ತಾರೆ...-
ಪ್ರತಿಯೊಬ್ಬರ ಬದುಕು
ಪ್ರತ್ಯೇಕ ಆತ್ಮದ ಜೊತೆ
ಪೂರ್ವದ ಕರ್ಮವ ಅಂಟಿಕೊಂಡೇ ಬರುತ್ತದೆ..
ಜೊತೆಯಾಗಿದ್ದೇವೆ ಎಂದ ಮಾತ್ರಕ್ಕೆ
ನಮ್ಮ ಕಣ್ಣುಗಳಲ್ಲೇ ಪ್ರಪಂಚ ನೋಡಬೇಕು
ಎನ್ನುವುದು ಮೂರ್ಖತನವಾದೀತು..
ಅವರವರ ಒಳ್ಳೆಯ ಭಾವನೆ, ಹವ್ಯಾಸ,
ಆಸಕ್ತಿಗೆ ಕಡಿವಾಣ ಹಾಕದೆ ಇಷ್ಟಪಟ್ಟು
ಜೋತೆಯಾಗುವುದೇ ಪ್ರೀತಿ...
ಬಲವಂತದ ಬಲಾತ್ಕಾರದಿಂದ ಯಾವುದನ್ನು
ಸ್ವಂತಮಾಡಿಕೊಳ್ಳಲಾಗದು...-