ಕಾಡಬೇಡಿ ನನ್ನ ಹೀಗೆ..
ಈ ಮುಗ್ಧ ಮನಕ್ಕೆ
ನೋವಾಗುವ ಹಾಗೆ..
ಅವನು ಅವಳಿಗಾಗಿ
ನನ್ನನ್ನು ತೊರೆದ..
ಈ ಹೃದಯದಲಿ ವಿರಹವನು
ಶಾಶ್ವತವಾಗಿ ಕೊರೆದ..
ತುಂಬಾ ನೊಂದಿದೆ ಈ ಜೀವ
ಇನ್ನಷ್ಟು ನೋಯಿಸದಿರಿ..
ನಿನ್ನೆಯ ನೋವನ್ನು ನೆನಪಿಸಿ
ನಾಳೆಯ ಖುಷಿಯನ್ನು ಕಳೆಯದಿರಿ.
ಓ ನೆನಪುಗಳೇ.. ಕಣ್ಮುಚ್ಚಲು ಬಿಡಿ..-
ಕಾಡದಿರಿ ನೆನಪುಗಳೇ ದಿನರಾತ್ರಿ ಬಂದು
ನೆಮ್ಮದಿಯ ಕೆದುಕದಿರಿ ಬಿಟ್ಟು ಬಿಡಿ
ನಿದಿರಿಸಲು ಬಿಡಿ ಸುಳಿಯದಿರಿ
ಸನಿಹಕೆ ನೆನಪುಗಳೇ...
ಮಸಣವಾಗಿದೆ ನನ್ನೀ ಮನೆಯಂಗಳವು
ಮಡುಗಟ್ಟಿದೆ ಎದೆಯೊಳಗಿನ ದುಃಖವು
ಮಾತಿಲ್ಲದೆ ಮೂಕವೇದನೆ ಅನುಭಸುತಿದೆ
ಈ ಮನವು ಕಾಡದಿರಿ ನೆನಪುಗಳೆ ಬಾರದಿರಿ
ನಿಮ್ಮ ದಮ್ಮಯ್ಯ ನನ್ನ ಮನದಂಗಳದಿ
ಸುಳಿಯದಿರಿ ನೆನಪುಗಳೇ...
ನೀವು ಸನಿಹ ಸುಳಿದೆಂತೆಲ್ಲಾ ಮನದ ಗಾಯ
ಉಲ್ಬಣಗೊಳ್ಳುತಿದೆ ನನ್ನೊಲವ ನೆನೆ ನೆನೆದು
ಏಕೀಗೆ ಬರಬೇಡವೆಂದರು ಸುಳಿಯುವಿರಿ
ಬಂದೇಕೆ ಕಾಡುವಿರಿ ಕಾಡಿ ಮನವೇಕೆ
ನೋಯಿಸುವಿರಿ ಕಾಡದಿರಿ ನೆನಪುಗಳೇ
ನೆಮ್ಮದಿಯ ನಿದಿರೆ ಮಾಡಲು ಬಿಟ್ಟು ಬಿಡಿ
ಸುಳಿಯದಿರಿ ಸನಿಹ ನೆನಪುಗಳೇ....
ಅಂತೆ ಕಂತೆಗಳ ಚಿಂತೆಯ ಬದಿಗಿಟ್ಟು
ದುಃಖ ದುಮ್ಮಾನಗಳ ಸರಿಸಿಟ್ಟು
ನೆಮ್ಮದಿ ನಿದಿರೆ ಮಾಡಲೊರಟಿರುವೆ
ಬಂದು ಕಾಡದಿರಿ ಎನ್ನೆದೆಯೊಳಗಿನ ನೋವ
ಮರೆಮಾಚಿ ನಗುವಿನೊಂದಿಗಿರುವೆ
ಮತ್ತೆ ಮನವ ಕಾಡದಿರೆ ನೆನಪುಗಳೇ.... ಅಭಿಜ್ಞಾ ಎಮ್
-
ದಿನವಿಡೀ ಕಾದ ಬಿಸಿಲು ತಣ್ಣಗಾಗಿದೆ
ತಣ್ಣಗೆ ಗಾಳಿ ಬಿಡುಸುಯ್ದಿದೆ
ನಿದ್ದೆಯೆಳೆಯುತ್ತಿದೆ,ನೆನಪುಗಳೇ ಮಲಗಲುಬಿಡಿ!
ಸುತ್ತಲೂ ತುಂಬಿದೆ ತಮಸ್ಸು
ಇಳಿದುಹೋಗುವ ಮುನ್ನ,
ಕಣ್ ರೆಪ್ಪೆಗಳ ಮುಚ್ಚಲು ಬಿಡಿ
ನಿಮ್ಮ ತೆಕ್ಕೆಯಿಂದ,ನನ್ನ ಕೊಡವಿಹೋಗಿ!
ನಿನಗೆ ನನ್ನುಸಿರೊಂದಿಗೆ,
ಬದುಕುತ್ತಿರುವೆನೆಂಬ ಒಣಹೆಮ್ಮೆ.
ನಿನ್ನ ನಂಬಿಕೆಯ ಗೇಲಿಮಾಡುವ, ಹುಚ್ಚುತನವಿಲ್ಲ.
ವಿಶ್ರಾಂತಿ ಬೇಕಿದೆ,ಒಂದಿಷ್ಟು ಮಲಗಲುಬಿಡಿ!
ನಿನ್ನ ವಿಷಾಧಭರಿತಾತ್ಮದಿಂದ ಕಂಗೆಟ್ಟಿರುವೆ
ಮುಂಬರುವ ಹಗಲುಗಳಿಗೆ,
ನನ್ನ, ನಾನು ಸಜ್ಜುಗೊಳಿಸಬೇಕಿದೆ.
ನೆನಪುಗಳೇ ಕಣ್ಣ್ ಮುಚ್ಚಲುಬಿಡಿ!
-
ಹೌದು,
ನಿತ್ಯ ನಿನ್ನ ನೆನಪುಗಳ
ತಂಗಾಳಿಯ ಜೋಗುಳದ
ಹಾಡಿನಲ್ಲಿ
ನನ್ನ ಚಿರನಿದ್ರೆ
ಉಸಿರಿಲ್ಲದೇ
ಸಾಗಿದೆ,
ಕೆಂಪು ಗುಲಾಬಿಯ
ಕೊಟ್ಟು ಹೋಗುವೆ
ಎಂದು ನಿತ್ಯ
ಕಾಯುವ ಕಾಯಕವಾಗಿದೆ.-
ನೆನಪುಗಳೆ ಕಣ್ಮುಚ್ಚಲು ಬಿಡಿ,
ನಡುರಾತ್ರಿಯಲಿ ಹೀಗೆ ಕಾಡದಿರಿ!
ಎಂದೊ ನಡೆದ ಗಳಿಗೆಯನ್ನು,
ಈಗ ತೋರಿಸಲು ಕಾರಣವೇನು?
ಕಲೆಗೊಂದು ಬೆಳಕು ಬೆಂಗಳೂರು,
ಬೆಳಿಗ್ಗೆ ಎದ್ದು ಹೋಗಲೇಬೇಕು!
ಕೈಮುಗಿತಿನಿ ಇವತ್ ಬಿಟ್ಬುಡ್ರಪ್ಪ,
ನಾಳೆಯಿಂದ ಏನಾದ್ರೂ ಮಾಡ್ಕಳ್ರಪ್ಪ.-
ಒಳಗಿನ ಚಂಚಲ ಭಾವನೆ
ಹೊರಗಿನ ಮುಗುಳ್ನಗಾ ವರ್ತನೆ
ನಟಿಸುವುದು ಕಷ್ಟಕರವಾಗಿದೆ..
ದಯಮಾಡಿ ಕಣ್ಮುಚ್ಚಲು ಸಮ್ಮತಿ ಕೊಡಿ
ನನ್ನ ಸಿಹಿ-ಕಹಿ ನೆನಪುಗಳೇ......-
ಕನಸುಗಳೇ ಕಣ್ತೆರೆಯಲು ಬಿಡಿ
ಪದೇಪದೇ ಕಾಡುತಿದೆ ನೆನಪು
ಪದೇಪದೇ ಕಾಡುತಿದೆ ಕನಸು
ನೆನಪು ಸುಂದರ ಕ್ಷಣಗಳ ಮೆಲುಕು
ಕನಸು ನನಸಾಗಿಸಲು ಬಯಸಿದೆ ಮನಸು-
ಪದೇ ಪದೇ ನನ್ನ ಮನಸಲ್ಲಿ
ಬಂದು ಕಾಡದಿರಿ ನನ್ನ
ಒಬ್ಬಂಟಿಯಾಗಿ ಬಿಟ್ಟುಬಿಡಿ
ಆ ಕಳೆದ ನೆನಪುಗಳನ್ನು ಮರೆತು
ಏಕಾಂಗಿಯಾಗಿ ಜೀವನ ನಡೆಸಲು
ನೆನಪುಗಳೇ ಕಣ್ಣುಮುಚ್ಚಿಬಿಡಿ..-
ನೀನು ಸಿಗುವುದೆ ತಡವಾಯಿತು ನನಗೆ
ದಿನವು ನಿನ್ನ ನೆನಪಲ್ಲೆ ಕೊರಗುತಿರುವಾಗ
ನೀ ಬೇಕು ಬೇಡಗಳ ನಡುವೆ ಸಿಲುಕಿ
ಸತಾಯಿಸಿ ಸಮೀಪ ಬಂದಾಗ
ನಾನು ನಿನ್ನಿಂದ ತುಂಬಾ ದೂರ
ಹೋದೆ ಪ್ರೀತಿಯ ಚಿತ್ತ ಚೋರ-
ಪ್ರೀತಿ ಪಾತ್ರರು ಹೃದಯ ಸಮುದ್ರದಿ ಬಿಟ್ಟುಹೋಗುವ ಪಳೆಯುಳಿಕೆಗಳೀ ನೆನಪುಗಳೇ..
ಮನದ ಸುತ್ತಲೇ ನಿಮ್ಮ ಆಟ
ಭಾವನೆಗಳ ಜತೆಗೇ ಓಟ.
ಸದಾ ಕಾಡುವ ನಿಮ್ಮ ಸ್ವಭಾವ
ಅದೇ ಆಸರೆಯಲೇ ಹುರಿದುಂಬಿತ ಜೀವ.
ಮರೆವಿಗೂ ಒಮ್ಮೆ ಹಾಕುವಿರಿ ಸವಾಲು!
ಸದಾ ಕಾಡದೆರಿ ಇದುವೇ ನಮ್ಮ ಅಹವಾಲು.
ಕನಸಲಿ ಬನ್ನಿ..ಈಗ ಹೊರಡಿ
ನೆನಪುಗಳೇ ಕಣ್ಮುಚ್ಚಲು ಬಿಡಿ!!-