ಮೀತಿ ಮೀರಿದ ಹಾಗಿದೆ
ಮನಸಿನ ಭಾವನೆ.
ಹೃದಯಕೇ ಸೋಕಿದೆ
ಮನಮೋಹಕ ಯಾತನೆ.
ನಿನ್ನದೆ ಖಾಯಿಲೆ ಅಂಟಿದೆ ದೇಹಕೆ.
ನಿನ್ನಯ ನೆನೆಯುತ ಸೊಂಕು ಏರಿದೆ ಜೀವಕೆ.
ನೋವಿದೆ, ನಲಿವಿದೆ
ಕಾರಣ ತಿಳಿಯುತ.
ಮರದಡಿ ಕೂತಿದೆ
ಮನವು ನಿನ್ನ ನಗುವನು ನೆನೆಯುತ.-
ಕಂಗಳ ಸಂಭಾಷಣೆ ಜೋರಾಗಿದೆ.
ಭಾವಗಳ ಸಂಶೋಧನೆ ಹೆಚ್ಚಾಗಿದೆ.
ನಿನ್ನಲ್ಲೆ ನನ್ನೆಲ್ಲ ಖುಷಿಯನು ಠೇವಣಿ ಇಡಲೇ
ನಿನ್ನನ್ನೆ ಎದೆಯಲ್ಲಿಟ್ಟು ಕಾಪಾಡಲೇ
ಅಕ್ಷತೆಯಲಿ ಬರೆದಿರುವನು ಭಗವಂತ ನಿನ್ನಯ ಹೆಸರು
ಚೂರು ನನ್ನೆದೆಯ ಮೇಲು ಭಿತ್ತಭಾರದೆ..!-
ಕವಿತೆಯ ಬರೆದು
ಉಡುಗೊರೆ ಸುರಿದು
ನುಡಿಗಳೊಡೆಯಲು ಭಯವಿದೆ.
ಮರದ ಅಡಿಯಲಿ
ಯಾರಿರದ ಬೀದಿಲಿ
ಕಂಗಳ ಮಾತಿಗೂ ಬೆಲೆಯಿದೆ.
ಬೈಕು ರೈಡಿನಲಿ
ಬೆರಳ ತುದಿಯಲಿ
ಮುಂಗುರುಳು ಸರಿಸಿದ ಕಥೆಯಿದೆ.
ನೀ ಇಂದಿಗೂ ನನ್ನಲಿ ಜೀವಂತವಾಗಿರುವೇ
ಎಂದಿನಂತೆ ನಾ ನಿನ್ನ ಪ್ರೀತಿಸುತ್ತಿರುವೇ
ಎಂದೂ ಹೇಳಲು,
ನನ್ನಲ್ಲೂ ಮುಜುಗುರು ಆವರಿಸಿದೆ.!!
-
ನಗಬೇಕು
ಅಳಬೇಕು
ಎಲ್ಲ ಮುಗಿಯುವವರೆಗೂ
ತಾಳಬೇಕು.
ಬದುಕಬೇಕು
ಸಾಯಬೇಕು
ಕೊನೆಗೆ ಕಾಗೆ ಮುಟ್ಟುವವರೆಗೂ
ಕಾಯಬೇಕು.-
ನೀ ಭೇಟಿಯಾದ ಮೊದಲ ಜಾಗಾ
ಲೂಟಿಯಾಗಿ ಹೋಗಿದೆ.
ಆ ನೋಟದಲ್ಲಿ ನೂರಾ ಎಂಟು
ದಾಟಿಯು ಬದಲಾಗಿದೆ.
ಹುಡುಕಾಟದಲ್ಲಿ ಸೋತ ಹೃದಯ
ಅಲೆಮಾರಿಯಾಗಿ ಕೂತಿದೆ.-
ನಿನ್ನ ಪ್ರೇಮದ ಜ್ವರವು
ವಿಪರೀತವಾಗಿ ಹರಡುತಿದೆ;
ನನ್ನ ಪುಟ್ಟ ಹೃದಯದ ತುಂಬೆಲ್ಲ.
ದಾಖಲಾಗಬೇಕಿದೆ ನಿನ್ನ ಪ್ರೇಮದ ದವಾಖಾನೆಗೆ.-
ಇಂದಿನ ಹಾಗೇ ನಾಳೆ ಇರುವುದಿಲ್ಲ
ನೆನ್ನೆಯ ನೆನಪೇ ಅದ್ಭುತ!
ನಾಳೆಯ ದಿನವೇ ನನ್ನದಲ್ಲ
ಇಂದಿನ ಕ್ಷಣವೇ ಅದ್ಭುತ!
ಎಲ್ಲದಕ್ಕಿಂತ ದೊಡ್ಡದು ಬದುಕು
ಅದನಾಲಿಸುತ ನೆಮ್ಮದಿ ಹುಡುಕು!!-
ಕಂಗಳ ಸಂಭಾಷಣೆ ಜೋರಾಗಿದೆ.
ಭಾವನೆಗಳ ಸಂಶೋಧನೆ ಹೆಚ್ಚಾಗಿದೆ.
ನಿನ್ನಲ್ಲೆ ನನ್ನ ಖುಷಿಯನ್ನೆಲ್ಲಾ ಠೇವಣಿ ಇಡಲೇ.
ಮಗುವಂತೆ ಬೊಗಸೆಯಲಿ ಹಿಡಿದು ಮುದ್ದಾಡಲೇ.
ಅಕ್ಕಿ ಕಾಳಲ್ಲೆ ಬರೆದಿರುವನು ಭಗವಂತ ನಿನ್ನ ಹೆಸರು.
ನನ್ನ ಎದೆ ಮೆಲೋಂಚುರು ಭಿತ್ತಬಾರದೇ ಅಕ್ಷತೆಯ ಉಸಿರು..!-
ಬದುಕಿರುವೆ...!
ನಾ ಅಳುವ ಮೊದಲು.
ಬದುಕಿರುವೆ...!
ನಾ ನಗುವ ಮೊದಲು.
ನಾನಿರುವೆ...!
ನನ್ನಲ್ಲೆ
ನಾ ಸಾಯುವ ಮೊದಲು.-