ಪಿಳುಕಿಸದ
ಕಣ್ಣುಗಳಿಂದ
ಕಟ್ಟಿ ಹಾಕದಿರು
ಮನಸು ಕಂಗಾಲು
ಆಗದಿರುವಂತೆ-
ಸೂರ್ಯನು ಬೇಜಾರಾದ ನಿನ್ನ ನೋಡಲಿಲ್ಲವೆಂದು
ಚಂದ್ರನು ಖುಷಿಯಾದ ನಿನ್ನ ನೋಡುವನೆಂದು
ನಾ ಕಂಗಲಾದೆ ನೀ ಹೊರಗೆ ಬರಲ್ಲವೆಂದು...-
ಸಿಂಗರಿಸಿ
ನಸುನಗು
ಚೆಲ್ಲುತ್ತ
ಮನೆಯ
ಮೆಟ್ಟಿಲಲ್ಲಿ
ಕುಳಿತು
ಕಾಯುತ್ತಿದೆ
ಗೆಳೆಯ
ನಿನಗಾಗಿ,
ನನ್ನೀ ಮನ..
ನೀ ಬರುವ
ಹಾದಿಯ
ಮುನ್ಸೂಚನೆ
ಇಲ್ಲದೆ
ಕಂಗಲಾಗಿದೆ
ಈ ನನ್ನ
ತನುಮನ..
_ಶೃತಿ ಶೈವ
-
ಮರಳಿ ಬರುವ
ಹಾದಿ ತಿಳಿಯದೇ
ಕಂಗಾಲಾಗಿರುವೆ,
ಹುಚ್ಚನಂತೆ ಅಲೆಯುವ
ನನ್ನ ನೋಡಿ ನಗದಿರಿ
ಹುಚ್ಚರ ಸಂತೆಯಲ್ಲಿ
ಏಕಾಂಗಿ ನಾನಲ್ಲ.-
ಹುಚ್ಚರ ಸಂಗ
**********
ಮರಳಿ ಬರುವ ಹಾದಿ ತಿಳಿದಿಲ್ಲ
ತಿಳಿದರೂ ಬರುವ ಮನಸ್ಸೇ ನನಗಿಲ್ಲ
ಈ ಅರೆ ಪ್ರಜ್ಞಾವಂತರ ಕೂಟಕ್ಕಿಂತ
ಈ ಹುಚ್ಚರ ಸಂತೆಯೇ ನೆಮ್ಮದಿಯ ತಾಣ
ಕೃತಘ್ನರ ಜೊತೆ ಮುಸುಕಿನ ಗುದ್ದಾಟಕ್ಕಿಂತ
ಮುಗ್ಧ ಹುಚ್ಚರ ಸಂಗವೇ ಲೇಸೆನೆಗೆ...-
ಅವಳ ಗುಂಗಿನಲ್ಲಿ
ನಾನೀಗ ಕಂಗಾಲು,
ಅವಳನ್ನ ಮರಿಯೋದೆ
ನನ್ನ ಹೃದಯಕ್ಕೊಂದು ಸವಾಲು...!-
ನಲ್ಲೆಯ ನಲ್ಮೆಯ ಸವಿನುಡಿಗಳು ಮಾತು ಕರಗಿಸಿತು
ಅವಳ ಒಲವಿನಲ್ಲಿ ಮನವು ಮಾಯವಾಯಿತು..-
ಮುಂಗುರುಳು ಮುತ್ತಿಕ್ಕಿದೆ ಕಿವಿಯ ಜುಮುಕಿಗೆ
ಹೊಸ ರಾಗವು ಹೊಮ್ಮಿದೆ ಉಸಿರಿನ ರಭಸಿಗೆ
ತುಟಿಗಳಿಗೆ ಕುತೂಹಲ ಮೂಗುತಿ ನೋಡಲು
ಹೊಳೆಯುವ ಸೆಳೆತಕೆ ಕಣ್ಣ ರೆಪ್ಪೆಗಳು ಕಂಗಾಲು-
ಬಿರು ಬೇಸಿಗೆಯು ಮರಳಿದೆ,
ಬೀಸೋ ಗಾಳಿಯು ಬಿಸಿಯಾಗಿದೆ,
ಕೆರಗಳು ಬತ್ತುತ್ತಿವೆ, ಮರಗಳು ಬಾಡುತ್ತಿವೆ,
ಹಸಿರದು ಮಣ್ಣಿನ ಬಟ್ಟೆಯ ತೊಟ್ಟಿದೆ,
ಹನಿ ನೀರಿಗಾಗಿ ಮೂಕ ಜೀವಿಗಳವು ಪರದಾಡುತ್ತಿವೆ,
ಕೊನೆಯಿಲ್ಲದ ಹಾದಿಯಲ್ಲಿ, ನೆರಳಿಲ್ಲದೆ ಕಂಗಾಲಾಗಿವೆ ಜೀವಿಗಳು.
ಬೆಳೆಗಳು ಒಣಗಿವೆ, ಜೀವಿಗಳವು ಉಪವಾಸವ ಮಾಡಿದೆ,
ರೈತನು ಆಗಸಕ್ಕೆ ಕೈಯ ಮುಗಿದು ನಿಂತಿದ್ದಾನೆ.
ಶುರುವಾಗುವ ಮೊದಲೇ ಕೊನೆಯ ಬಯಸುತ್ತಿದ್ದೇವೆ ಈ ಬೇಸಿಗೆಯ.
-
ಮರಳಿ - ಮರಳಿ
ಮರಳಿ - ನೂರಿನ
ಆ ಮರಳು - ಅರಮನೆಗೆ .... ,
ಅವರವರ ಕರ್ಮ
ಮುಗಿದ ಮೇಲೆ
ಅರಳಿ - ಮರಳಿ ,
ಆ ಮುರಳಿಯ ನೆನೆದು
ಅಲ್ಲಿಗೆ ಹೊರಟವರೆಲ್ಲಾ...
ಬಹುತೇಕ
"ಏಕಾಂಗಿ "ಯೇ - - -💕.-