👉ರಂಗನಾಥ್ ಪವಾರ್💞   (ತಾರಂಗು..✍💞)
110 Followers · 75 Following

👉ಅರ್ಥವಿರದ ಬದುಕಿನಲ್ಲಿ ಸುತ್ತ ನೋಡಿದರೂ ಸತ್ಯ ಕಾಣದು..✍
Joined 9 December 2017


👉ಅರ್ಥವಿರದ ಬದುಕಿನಲ್ಲಿ ಸುತ್ತ ನೋಡಿದರೂ ಸತ್ಯ ಕಾಣದು..✍
Joined 9 December 2017

ಜನಿಸಿದೆ ನೀನು ಹಿಂದೂಗಳ ಹಬ್ಬ
ಯುಗಾದಿಯ ದಿನ,
ಒಮ್ಮೆ ಎದೆಗೊತ್ತಿ ಒಮ್ಮೆ ಕಣ್ಗೊತ್ತಿದ ದಿನ,
ಮತ್ತೊಮ್ಮೆ ತುಟಿಗೊತ್ತಿ
ಸಿಹಿಮುತ್ತ ಸುರಿಸಿದ ದಿನ,
ಆ ದಿನಗಳಿಗೆ ತುಂಬಿತು ಇಂದಿಗೆ
ಎರಡು ವರುಷದ ಸುದಿನ,
ಎರಡನೇ ವರುಷದ ಹುಟ್ಟು ಹಬ್ಬದ
ಶುಭಾಶಯಗಳು ಮಗನೇ...

-



*ಸ್ನೇಹವೆಂಬ ಪ್ರೀತಿಯ ದೋಣಿ.*

ನನ್ನ ಹೃದಯದಲ್ಲಿ ಹುಟ್ಟಿದ ಪ್ರೀತಿಯದು ಸ್ನೇಹದ ಶೀರ್ಷಿಕೆ ಯೊಂದಿಗೆ,
ಸ್ನೇಹವನ್ನರಿತು.!ಪ್ರೀತಿಯನ್ನರಿಯದ ಗೆಳೆತಿಯೊಂದಿಗೆ.
ಅವಳು ಸನಿಹವಿದ್ದರೆ ಆಕಾಶವು ಕೈಲಿದ್ದಂತೆ,
ಅವಳೊಂದಿಗಿನ ವಿರಹದ ಅಲೆಯು ಬಂಡೆಯಿಂದ ದೂರಾದಂತೆ.
ಅವಳೊಳಗಿನ ಭಾವನೆಯು ನನ್ನಲ್ಲಿ ವಿಕಟವಾಗಿದೆ,
ನನ್ನೊಳಗಿನ ಪ್ರೀತಿ ಅವಳಿಗೆ ತಿಳಿಯದಾಗಿದೆ.
ಮಾತು ಬಾರದ ಮೂಕಳೋ,
ನನ್ನ ಮನಸಿನ ಮಾತನರಿಯದ ಮೂಢಳೋ..?
ಪ್ರತಿಬಾರಿಯೂ ನನ್ನೊಳಗಿನ ಪ್ರೀತಿಯ ಭಾವಕ್ಕೆ,
ಅವಳು ಸಾರಿ ಸಾರಿ ಇಡುವುದು ಸ್ನೇಹದ ಶೀರ್ಷಿಕೆ.
ಕಾರಣವು ಸಾವಿರವಿದೆ ಅವಳ ಮೇಲಿನ ಪ್ರೀತಿಗೆ,
ನನ್ನ ಹೃದಯದ ಮಾತುಕತೆ ಕೇವಲ ಅವಳೊಂದಿಗೆ.
ಮನಸ್ಸಿನಿಂದ ಹೊರಟ ಎಷ್ಟೋ ಮಾತುಗಳು ಗಂಟಲಿನಲ್ಲಿಯೇ ನಿಂತು ಹೋಗಿವೆ,
ಹೇಳಬೇಕಾದ ಪ್ರೀತಿಯ ಭಾವನೆಗಳು ಸ್ನೇಹದ ಸುಳಿಯಲ್ಲಿ ಸಿಕ್ಕು ಮೌನವಾಗಿವೆ.
ನಮ್ಮಿಬ್ಬರಲ್ಲಿ ಸ್ನೇಹ ಮಾತ್ರ ಇಂದಿಗೂ ಹಸನಾಗಿದೆ,
ಅವಳ ಸ್ನೇಹದ ಮುಂದೆ ನನ್ನ ಪ್ರೀತಿ ಸ್ತಬ್ಧವಾಗಿದೆ.
ಪ್ರತಿನಿತ್ಯವೂ ಅವಳೊಂದಿಗಿನ ಮಾತಿನ ನಿರೀಕ್ಷೆ,
ತಿಳಿಯಲಿ ಅವಳಿಗೆ ನನ್ನ ಪ್ರೀತಿಯ ಆಕಾಂಕ್ಷೆ.
ಸಾಗಿದರೆ ಸಾಗಲಿ ಬಿಡು ಸ್ನೇಹದ ಹೆಸರಲ್ಲಿ ನನ್ನ ಪ್ರೀತಿಯ ದೋಣಿ,
ದಡ ಸೇರುವುದರೊಳಗೆ ಕೇಳಲಿ ಅವಳಿಗೆ ನನ್ನ ಪ್ರೀತಿಯ ವಾಣಿ.

-



ಪ್ರೀತಿ
ತಾಯಿಯಿಂದ ಉಸಿರಾಗಿ
ತಂದೆಯಿಂದ ಹೆಸರಾಗಿ
ಸಂಗಾತಿಗೆ ಜೊತೆಯಾಗಿ
ಜೀವನಕ್ಕೆ ಬಂಧುವಾಗಿ
ನಮ್ಮ ಬದುಕಿಗೆ ಬಲವಾಗಿ.

-



ಸಂತಸದ ಕ್ಷಣಗಳನ್ನು
ಕಳೆಯಬೇಕೆಂದರೆ
ಮನಸ್ಸು ಪ್ರಶಾಂತವಾಗಿರಬೇಕು

-



ತ್ರಿವೇಣಿ ಸಂಗಮದಲ್ಲಿ
ಅರಳಿದಂತ ತಾವರೆ,
ಮಹಾಕುಂಭಮೇಳದಲ್ಲಿ
ಕಂಡಂತ ಭೂಲೋಕ ಅಪ್ಸರೆ.
ಆಕರ್ಷಕ ನೋಟದ
ನಯನ ಮನೋಹರಿ,
ಎಲ್ಲರ ಮೊಬೈಲ್ ನಲ್ಲೂ ಸದ್ಯ ಇವಳೇ
ನಗುವಿನ ಸುಂದರಿ.
ಪ್ರಯಾಗರಾಜ್ ನಲ್ಲಿ
ನಡಿತಿದೆ ಕುಂಬಮೇಳ,
ಸೋಶಿಯಲ್ ಮಿಡಿಯಾದಲ್ಲಿ
ನಡಿತಿದೆ "ಮೊನಾಲಿಸಾ"ಳ ಕಣ್ ಮೇಳ.

-



ಸಂಸಾರದಲ್ಲಿ ಇರಬೇಕು ಹೊಂದಿಕೆ,
ಯಾಕಂದ್ರೆ ಸಂಸಾರಕ್ಕೆ ಅದುವೇ ಹೊದಿಕೆ.

-



ಅರ್ಥ ಮಾಡಿಕೊಂಡವರಿಗೆ ನಮ್ಮ ಮೌನ ಉತ್ತರವಾಗಿ ಕಂಡರೆ,
ನಾವೇ ಅರ್ಥವಾಗದವರಿಗೆ ನಮ್ಮ ಮೌನ ಅಹಂಕಾರವಾಗಿ ಕಾಣುತ್ತೆ.

-



ಅರ್ಥವಿರದ ಬದುಕಿನಲ್ಲಿ
ಸುತ್ತ ನೋಡಿದರೂ ಸತ್ಯ ಕಾಣದು

-



ನೀನೇಕೆ ಬರುವೇ ನನ್ನೆದುರು,
ನನಗೆ ತಿಳಿಯದೆ ಏರುವುದು ನನ್ನುಸಿರು.
ನಿನ್ನಂದವ ನನ್ನ ಕಣ್ ಸೋಕಲು,
ನನ್ನ ಮನದೊಳಗೆ ಮೂಡುವುದು ದಿಗಿಲು.✍️😍

-



ನಿನ್ನ ಪ್ರೀತಿಯೆಂಬ
ಕಡಲ ತೀರದಲ್ಲಿ ಉದಯಿಸಿ
ಸಂಜೆಗೆ ಮರೆಯಾದ
ಕೆಂಪು ಸೂರ್ಯ ನಾನು.

-


Fetching 👉ರಂಗನಾಥ್ ಪವಾರ್💞 Quotes