ಅಂತರಿಕ್ಷದಗಲದ
ಅಗಮ್ಯವಾದಣುಗಿನ
ಅಧೀಶ
ಅಣ್ಣಾ!!
ಅಂಧಕಾರದಲ್ಮುಳುಗಿದ್ದೆನಗೆ
ಸಿಕ್ಕ ಅತೀವ ಅಕರಾಸ್ತೆಯ
ಅಕ್ಷಯಪಾತ್ರೆ
ಅಣ್ಣಾ!!
ಏನೂ ಶಾಶ್ವತವಲ್ಲದೀ
ಬದುಕಿನಲಿ ನಂಬಿಕೆಯೆಂಬ
ಆಶಾಗೋಪುರವ ನಿರ್ಮಿಸಿ
ಅಗಾಧ ಪ್ರೀತಿಯ ಮಹಲಿನಲಿ
ಅನಂದಿಸುತ್ತಿರುವ ಭಾವಜೀವಿ
ಅಣ್ಣಾ!!
Simple ನೇಚರ್
Unique ಕ್ಯಾರೆಕ್ಟರ್
Unlimited ಲವ್
With Lot of ಕೇರಿಂಗ್
"ಅಣ್ಣಾ"-
ತಂದೆಯಂದಿರ ದಿನ:
ಜೀವನದ ಅನುಭವ -
ಅಂಬೆಗಾಲಿಡುವಾಗ ನೋವಾದಿತ್ತೆಂದು ಎತ್ತಾಡಿಸಿದವ,
ಕನಸ್ಸುಗಳನ ಕಟ್ಟಿಕೊಂಡು ನನ್ನ ಹೆಗಲಮೇರಿಸಿಕೊಂಡ ಹೃದಯವಂತ,
ಬದುಕು ಭಾರವಿದ್ದರೂ ನನಗಾಗಿ ಮುನ್ನುಗ್ಗಿದ ಧೈರ್ಯವಂತ,
ನನ್ನ ಸಂತೋಷದಲ್ಲಿ ತನ್ನ ಏಳಿಗೆ ಕಂಡವನು,
ಜೀವನದ ಪ್ರತಿ ಹೆಜ್ಜೆಯಲ್ಲಿ ಕೈಹಿಡಿದು ನಡಿಸಿದವ,
ಕೊರತೆಯ ಖಿನ್ನತೆ ಕಾಡದಂತೆ ಕಾಯುವ ಕರುಣಾಮಯಿ,
ಜಗವೇ ಕೈಬಿಟ್ಟರು ನನ್ನ ಜೀವನಕ್ಕೆ ಆಧಾರ ಸ್ತಂಭವಾದ,
ನನ್ನ ಪ್ರತಿಯೊಂದು ಯಶಸ್ಸೇ ಅವನಿಗೆ ಉಡುಗೊರೆ,
ನನ್ನ ಈ ಜೀವವೆಂಬ ಸಾಗರದಲ್ಲಿ ನನಗೆ ದೊರೆತ ಅತ್ಯಮೂಲ್ಯವಾದ ಅನರ್ಘ್ಯ ರತ್ನ ನನ್ನ ಜ್ಯೇಷ್ಠ ಬ್ರಾತ.
"ತಂದೆಯ ಸ್ಥಾನದಲ್ಲಿ ನಿಂದು ಪ್ರೀತಿ, ವಾತ್ಸಲ್ಯ, ಮಮತೆ ನೀಡಿ ಕರ್ತವ್ಯ ನಿಭಾಯಿಸಿದ ನನ್ನ ಅಣ್ಣನಿಗೆ ಈ ದಿನ ತಂದೆಯಂದಿರ ದಿನದ ಶುಭಾಶಯಗಳು ಕೋರುವೆ "
"ಎಷ್ಟೇ ಜನುಮವೆತ್ತಿದರು ನಿನ್ನ ಋಣ ತೀರಿಸಲಾಗದು ಅಣ್ಣಾ,
ನನ್ನ ಜೀವನದ ಆದರ್ಶ ನೀನು".-
ಅಣ್ಣ:--
ಅಭಿಮಾನದಲ್ಲಿ ಅಮ್ಮ,ಅಧಿಕಾರದಲ್ಲಿ ಅಪ್ಪ.
ಪ್ರೋತ್ಸಾಹ ದಲ್ಲಿ ಸ್ನೇಹಿತ, ವಿಮರ್ಶೆಯಲ್ಲಿ ಶತ್ರು.
ಕಲಿಸುವುದರಲ್ಲಿ ಗುರು.
ನನ್ನ ಬದುಕಿನ ಮೊದಲ ಗೆಳೆಯ*-
ಅವನೆಂದರೆ...
ಆಗಸದಿ ಮೋಡಗಳ ಮಡಿಲೊಳಗೆ
ಮರೆಯಾದ ನಕ್ಷತ್ರಗಳ ನೋಡಲು
ಹಠ ಹಿಡಿದು ಕುಳಿತ ನನ್ನ ಕಣ್ಮುಂದೆ
ಮಿಣುಕು ಹುಳುಗಳ ಸೈನ್ಯವೊಂದ
ಕರೆಸಿ ಹಾರಾಡುವ ಬೆಳಕಿನಲ್ಲೇ ನೃತ್ಯವ
ಮಾಡಿಸಿದ ಜಾದುಗಾರ ...!!
ಚಪ್ಪಾಳೆ ತಟ್ಟುತಾ ನಾ ನಗುವಾಗ ನನ್ನ
ನಗುವಲ್ಲೆ ಅವನ ಖುಷಿಯೊಂದ
ಕಣ್ತುಂಬಿಕೊಂಡು ಗುಬ್ಬಚ್ಚಿಯಂತೆ
ತನ್ಮಡಿಲಲ್ಲಿ ಮಲಗಿಸಿ ತಲೆ ಸವರುತ್ತಾ
ಸಿಹಿಗನಸಿನ ನಿದಿರೆಯ ಹೊದಿಸುವ
ಮಾಯಗಾರ ...!!-
ಆಕಸ್ಮಾತ್ ಎಂಬ ಪದದಿನ್ನೆಲೆಯಲಿ ಬದುಕಿಗೆ ಬಂದು ಅನಿರೀಕ್ಷಿತವಾಗಿ ಹನಿಯೊಲವ ನೀಡಿ ಸಾಗರವನೆ ಮೊಗೆದು ಕೊಟ್ಟಂತೆ ಭಾವಿಸುವ ತಾತ್ಕಾಲಿಕ ಮನುಜರ ನಡುವೇ , ಬಾಲ್ಯಂದಿದ ನಿನ್ಮನದ ಶರಿಧಿಯಲಿ ಪ್ರತಿಹಂತದಲು , ದುರಂತದಲು ಅಚಲ ಅನುರಾಗವ ಪರೋಕ್ಷವಾಗಿ ತೊರುವ ನೀನೂ ನನ್ಬದುಕಿನ ನಿಜಾತ್ಮಿಯ!!
-
ಒಡ ಹುಟ್ಟಲಿಲ್ಲ, ಬಂದುವಲ್ಲ ಬಳಗವಲ್ಲ,
ಅದರೇನಂತೆ ಸಿಕ್ಕಿರುವನು ಒಬ್ಬ ಅಣ್ಣ ಬರೀ ಭಾವನೆಗಳಲ್ಲಿ ಬರಹಗಳಲ್ಲಿ ಹೇಳಲಾಗದಂತೆ, ಎಲ್ಲರನ್ನು ತನ್ನ ಅಕ್ಕ ತಂಗಿಯರಂತೆ, ಬಂದು ಬಳಗದಂತೆ ಪ್ರೀತಿಸುವ ಸಂತು ಅಣ್ಣ 😍-
ಒಡ ಹುಟ್ಟಲಿಲ್ಲ, ಬಂದುವಲ್ಲ ಬಳಗವಲ್ಲ,
ಆದರೇನಂತೆ ಸಿಕ್ಕಿರುವನು ಒಬ್ಬ ಅಣ್ಣ ಬರೀ ಭಾವನೆಗಳಲ್ಲಿ ಬರಹಗಳಲ್ಲಿ ಹೇಳಲಾಗದಂತೆ, ಎಲ್ಲರನ್ನು ತನ್ನ ಅಕ್ಕ ತಂಗಿಯರಂತೆ, ಬಂದು ಬಳಗದಂತೆ ಪ್ರೀತಿಸುವ ಸಂತು ಅಣ್ಣ 😍-
💙💛💜650+ ಬರಹಗಳ ಪೂರೈಸಿದ ನನ್ ಅಗ್ರಜನಿಗೆ ಹೃತ್ಪೂರ್ವಕ
ಅಭಿನಂದನೆಗಳು 💜💛💙
ೲ◆ೲ◆ೲ◆ೲ◆ೲ◆ೲ◆ೲ◆ೲ◆ೲ◆ೲ◆ೲ◆ೲ◆ೲ◆ೲ◆ೲ◆ೲ
💛ಸಾಂಸ್ಕೃತಿಕ ನಗರಿ ಮೈಸೂರು ಸಮೀಪದ ಚಾಮರಾಜನಗರದ
ಮುದ್ದುಕುವರ.👨
💙ಅಪ್ಪನ ನಗು ,ಅಮ್ಮನ ಮನದಾಳದ ಮಾತನ್ನ ಕೊಡುಗೆಯಾಗಿ
ಪಡೆದು ಅವಳ ನಿಶ್ಶಬ್ಧತೆಯ ಮಡಿಲೊಳು ಆಡುವ ಪುಟ್
ರಾಜಕುಮಾರ.👶
💛ಸಮಾಜದ ರಕ್ಷಣೆಯ ಹೊಣೆ ಹೊತ್ತ "ರಕ್ಷಕ " ಸ್ನೇಹ,
ಸೋದರತೆಯ ಬಂಧ ಬೆಸೆದು ಸದಾ ಜೊತೆ ನಿಲ್ಲುವ
"ಆಪ್ತರಕ್ಷಕ"👮
💙ಇನ್ನು ಬರಹದ ಹಾದಿಯಲ್ಲಿ ತನ್ನದೇ ರೀತಿಯ ವಿಭಿನ್ನತೆ
ತೋರುವ ಇವರ ವಿಶಿಷ್ಟ ಗಝಲ್ಗಳು ಅಬ್ಭಾ! ಒಂದಕ್ಕಿಂತ ಒಂದು
ಚೆಂದ ಬಲ್ಲವರಿಗೆ ಗೊತ್ತು ಅದರ ಆಳದ ಅಂದ ✍️
💛ಅಣ್ಣನಾದರು ಬೆನ್ನ ಹಿಂದೆ ಹುಟ್ಟಿದ ತಮ್ಮ-ತಂಗಿಯರ
ಜವಾಬ್ದಾರಿ ಹೊತ್ತ ತಂದೆಯೇ ಸರಿ 🤗
💙ಗದರದೆ ತಿದ್ದಿ ತೀಡಿ ,ಮುದ್ಮಾಡಿ ತಂದೆಯಂತೆ ಧೈರ್ಯ ,ಸ್ಥೈರ್ಯ
ತುಂಬೋ ನಮ್ cute ಅಣ್ಣ ಎಲ್ಲ ಅಣ್ಣ-ತಮ್ಮಂದಿರಿಗೂ
favourite😍
💛ಮಗುವಿನಂತ ಮನಸ್ಸು ನೊರೆ ಹಾಲಿನಂತ ಶುದ್ಧತೆ ಅಣ್ಣ
ಹೊಗಳಿಕೆ ಅಲ್ಲ ಇದು ಮರುಜನ್ಮವೊಂದಿದ್ದರೆ ಹುಟ್ಟಿಬಿಡು
ನನ್ನೆತ್ತವರ ಒಡಲಲ್ಲಿ ಮೊದಲಿಗನಾಗಿ ನನ್ನಣ್ಣನಾಗಿ❤️
💙ಆ "ಭಾನು"ಈ "ಶಿವ" ನೆಲೆಸಿದ ಭುವಿಯ ಪ್ರೀತಿಗೆ ಸಾಟಿ ಆದರೂ
ಯಾರು, ಯುಗ ಉರುಳಿದರು ಚಿರವಾಗಿರಲಿ ಆ ಒಲವು 😍
💛ನಿರಂತರವಾಗಿ ಸಾಗಲಿ ಅಣ್ಣ ಈ ನಿಮ್ಮ ಬರಹದ ತೇರು ,ನಿಮ್
ವಿಚಾರವಂತಿಕೆ,ಜ್ಞಾನ, ಸೃಜನಶೀಲತೆಗೆ ಹೃತ್ಪೂರ್ವಕ ವಂದನೆಗಳು
ಅರಿತಷ್ಟು ಆಳ ,ತಿಳಿದಷ್ಟು ತಿಳುವಳಿಕೆ ಉಂಟು ನಿಮ್ಮಲ್ಲಿ ಆಗಾಗ
ನಮಗೂ ನಿಮ್ಮಿಂದ ಕಲಿಯುವ ಅವಕಾಶ ಸಿಗ್ತಿರ್ಲಿ🤗
❤️Stay Kush ,stay safe and keep writing shivu Anna ❤️-
ಹೇ ನನ್ನ ತಂಗಿ, ಭಾವನೆಗಳ ರೂವಾರಿ🙋🏻♂️
ಬರ್ತ್ ಡೇ ಅಂತ ಮುಂಚೆ ಗೊತ್ತಿದ್ರೆ ಬರೀತಿದ್ದೆ ನಿಂಗೊಂದು ಶಾಯರಿ✍🏻
ಈಗ ಗೊತ್ತಾಗಿ ಅವಸರದಲ್ಲಿ ಮಾಡಿದೆ ಪದಗಳ ತಯಾರಿ🤗
ಅಣ್ಣಾ ಅಂತ ಕರೆದ್ರೂ ನೀ ಮಾಡಿಲ್ಲ ನನ್ನ ಭುಜದ ಮೇಲೆ ಸವಾರಿ😐
ಆದ್ರೂ ನೀನೆ ನನ್ನ ಮುದ್ದು ಬಂಗಾರಿ😍
ಇವತ್ತು ಹುಟ್ಟಿದ್ದಕ್ಕೆ ಶುಭಾಶಯಗಳು ಕಂದ🥰
ಹೀಗೆ ಇರಲಿ ಈ ಅಣ್ಣ ತಂಗಿಯ ಬಂಧ🧡-