ಉರಿಯುತಿವೆ ಕೋಲ್ಮಿಂಚಿನ ಕಂಗಳು
ಒಳಗೊಳಗೆ ಅರಿಯದ ತೊಳಲಾಟ
ಭ್ರಮಾಲೋಕದಲ್ಲೆ ಕಪಟಿಗಳ ಮೆರದಾಟ
ಮಾಯಾಲೋಕದಲ್ಲೆ ಅವರ ಹಾರಾಟ
ಒಂದುಗೂಡುವಿಕೆಯಲಿ ನಿಲ್ಲದ ಕಿತ್ತಾಟ
ಮೆರೆದ ಸ್ನೇಹಕೂಟದಲಿ ಅವರದ್ದೆ ಕಪಟ
ಎಲ್ಲೆಲ್ಲಿಯೂ ನಡೆಯುತಿದೆ ಬರೀ ದೊಂಬರಾಟ
ಜಗದೊಳು ಬರಿ ಮುಖವಾಡಗಳದ್ದೆ ಆಟ
ಧಗಧಗಿಸುತ ಉರಿದಿದೆ ಕೋಪದೊಡಲ ಕೂಪ
ಸಹಿಸಲಾರದೆ ಕೋಪಾಗ್ನಿಯ ಜ್ವಾಲೆಯ ರೂಪ
ಕೆಣಕುತಿರಲು ಈ ಸ್ವಾಭಿಮಾನಿಯ
ಆಂತರ್ಯದ ಪ್ರತಿರೂಪ.!-
🙏ಪಂಚಮುಖಿ ವೀರ ಹನುಮಂತ🙏
ಓಂ ಶ್ರೀ ರಾಮದೂತಾಯ ಆಂಜನೇಯಾಯ ವಾಯುಪುತ್ರಾಯ ಮಹಾಬಲ ಪರಾಕ್ರಮಾಯ ಸೀತಾದುಃಖ ನಿವಾರಣಾಯ ಲಂಕಾದಹನಕಾರಣಾಯ ಮಹಾಬಲ ಪ್ರಚಂಡಾಯ
ಪಲ್ಲಘುಣಸಬಾಯ ಕೋಲಾಹಲ ಸಕಲ ಬ್ರಹ್ಮಾಂಡ ವಿಶ್ವರೂಪಾಯ ಸಪ್ತ ಸಮುದ್ರ ನಿರ್ಲಂಗನಾಯ ಪಿಂಗಳನಯನಾಯ ಅಮೀತ ಪರಾಕ್ರಮಾಯ ಸೂರ್ಯಬಿಂಬ ಫಲಸೇವನಾಯ ದುಷ್ಟ ನಿವಾರಣಾಯ ದೃಷ್ಟಿ ನಿರಾಲಂಕೃತಾಯ ಸಂಜೀವಿನಿ ಸಂಜೀವತ ಅಂಗದ ಲಕ್ಷ್ಮಣ ಮಹಾಕಪಿ ಸೈನ್ಯ ಪ್ರಾಣದಾಯ ಮಹಾಪಲ್ಲಘುಣ ಸಬಾಯ ಸೀತ ಸಹಿತ ರಾಮದರ ಪ್ರದಾಯ ಸಟ್ ಪ್ರಯೋಗ ಆಗಮವಿದೆ.........ಪಂಚಮುಖಿ ವೀರ ಹನುಮಂತೆ ನಮೋ ನಮಃ.........!!!!!!!!!
-
ನಮ್ಮತನವನ್ನು ಕೊಲ್ಲಲು
ಪ್ರಯತ್ನಿಸುವವರನ್ನು
ನಮ್ಮ ಸ್ವಾಭಿಮಾನದ
ಅಗ್ನಿಯಿಂದಲೇ ಸುಡಬೇಕು...-
ನಾಕದಲ್ಲಿ ಆತ್ಮಾಭಿಮಾನವಿಲ್ಲದ
ನಾಯಕನಾಗುವುದಕ್ಕಿಂತ..
ನರಕದಲ್ಲಿ ಸ್ವಾಭಿಮಾನದ
ಸೇವಕನಾಗುವುದು ಉತ್ತಮ..-
ಅಹಂಗೂ ಸ್ವಾಭಿಮಾನಕ್ಕೂ
ಕೂದಲೆಳೆಯ ಅಂತರವಿದೆ,
ಎಲ್ಲಾ ನನ್ನಿಂದಾನೇ ಎನ್ನುವುದು ಅಹಂ...
ನಾನೆಲ್ಲಾ ಮಾಡಬಲ್ಲೆ ಎಂಬುವುದು
"ಸ್ವಾಭಿಮಾನ"-
ಸ್ವಾಭಿಮಾನದ
ಸರಹದ್ದನ್ನ ಮೀರದವ,,
ಅಹಂಕಾರದ
ಉನ್ಮಾದವನ್ನ ತಲುಪಲಾರ!!
✍️ ಶಿಲ್ಪಾ ಪಾಲ್ಕಿ💞-
ಹೇ ಮನುಜನೆ ಸ್ವಾಭಿಮಾನ ಒಂತರ ಮಾಯಾವಿ
ಅದನ್ನು ಬಿಟ್ಟರೆ ಆತ್ಮಾಭಿಮಾನಕ್ಕೆ ಧಕ್ಕೆ!
ಅತಿಯಾದರೂ ಕಷ್ಟ! ಮಿತಿಯಿದ್ದರೂ ನಷ್ಟ
ಆತ್ಮಗೌರವದ ಮಿಂಚು
ಅಹಂಕಾರದ ಅಂಚು
ಏನಿದರ ಗುಟ್ಟು !ಬಲ್ಲವರೆ ಬಲ್ಲರು ಇದರ ಗಮ್ಮತ್ತು!
ನಮ್ಮೊಳಗೆ ಇವೆರಡರಲ್ಲೂ ಮಿತಿಯಿರಲಿ
ಮನದಲ್ಲಿನ ಚೌಕಟ್ಟಿನೊಳಗೆ ಸ್ವಾಭಿಮಾನದ
ತೇರು ಎಳೆಯುಂತಾಗಲಿ! ಅದೇ
ದುರಾಭಿಮಾನದ ಕರೆ ಘಂಟೆಯಾಗದಿರಲಿ!
ಆಗುವುದು ಮನೆ ಮನ ಜಗವೆಲ್ಲಾ
ಕಷಾಯದ ನಂಟು!
ಆಗಾಗದಿರಲಿ! ಮನದಿಂದ ಕಿತ್ತೆಸೆಯೋಣ
ಅಹಂಕಾರವೆಂಬ ದುರಾಭಿಮಾನ! ಬಿಟ್ಟು
ಬಿಡೋಣ ಈ ಮಾನ ಕಷಾಯವ!
ಮಾನವರಾಗೋಣ ಮೊದಲು!
ಮಾರ್ದನ ಗುಣವಂತರಾಗೋಣ!
ಬೇರೆಯವರ ಭಾವನೆಗಳ ನೋಯಿಸದೆ
ಬೆಲೆಕೊಡೋಣ! ನಮ್ಮ ಭಾವನೆಗಳನ್ನೂ
ಅರಿಯೋಣ!ಸ್ವಾಭಿಮಾನದಿಂದ ಬಾಳೋಣ!-