ದಿಕ್ಕೆಟ್ಟ ಮನ ದಿಕ್ಕಾಪಾಲಾಗದಿರಲಿ
ಧೀರತನದ ಧೀಮಾಕಿರಲಿ! ಧೃಢತೆಯ ಅರಿವಿರಲಿ
ದುಂಡು ಮೇಜಿನ ದಂಡೇ ಬಂದರು
ದಿಗಿಲಾಗದೆ ಗಾಳಿಗೆ ದಿಗಂತದೆಡೆ
ದಾವಿಸುವ ನಿಷ್ರಯೋಜಕ ವಸ್ತುಗಳಂತಿರಲಿ
ದೂರದೃಷ್ಠಿಯ ಗೆಲುವಿನ ಮನ!
ದೂರಾಗದಿರಿ ಏಕಾಗ್ರತೆಯಿಂದ
ದಿಗ್ರ್ಭಮಣಗೊಳ್ಳದಿರಿ ದುರಾದೃಷ್ಟತೆಗೆ!
ದುರಾಲೋಚನೆಗಳಿಗೆ ಸೆಡ್ಡು ಹೊಡೆದ ಸಾಹಿತ್ಯವಿರಲಿ
ದುರಾಯಿಗಳೊಂದಿಗೆ ಸೆಣಸುವ ಪಾಂಡಿತ್ಯ
ದೂರ್ವಾಂಕುಸುವುದು ನವ ಚೈತನ್ಯ
ದಿಗ್ದರ್ಶನವಾಗುವುದು ಕಾಲದೊಂದಿಗಿನ ಸಾಂಗತ್ಯ
ದಿಙ್ಮಂಡಲತ್ತರ ಸಿಂಚನಿಸುವುದು ಗೆಲುವಿನ ನಡೆ
ದಿಗಿಲ್ಗೊಳ್ಳದೆ ದರ್ಶಿಸಿ
ದಿವ್ಯತೆಯ ಮನದೊಂದಿಗಿರಲಿ ನಡೆ
ದೀಪದಂತೆ ಸದಾ ಬೆಳಗುವಿರಿ!-
ಅನುಭವವೂ ಬಂತು..ಪ್ರಖ್ಯಾತಿಯೂ ಸಿಗ್ತು..
ಸಿರಿವಂತನೂ ಆದ..ಮಾದರಿಯೂ ಆದ..
ವ್ಯತ್ಯಾಸವೆಂದರೆ ಈಗ ಸಂಭ್ರಮಿಸುವ
ಸಂಬಂಧಿಗಳಿಲ್ಲ,
ಸ್ನೇಹಿತರೂ ಇಲ್ಲ
ವಯಸ್ಸೂ ಇಲ್ಲ
ಕೆಲವು
ಗೆಲುವು
ನಿಷ್ಪ್ರಯೋಜಕ..;!-
ಸೋತಾಗ ಕುಗ್ಗದೆ,
ಗೆದ್ದಾಗ ಬೀಗದೆ,
ಸಮ ಚಿತ್ತದಿ ನಡೆದರೆ ಬದುಕು ಮತ್ತಷ್ಟು ಸಿಹಿ
ಸೋಲೇ ಗೆಲುವಿನ ಮೆಟ್ಟಿಲು
ಪ್ರತಿ ದಿನಾ ಒಂದೇ ತರ ಇರಲ್ಲಾ
ಸಿಹಿಯೋ ಕಹಿಯೋ ಅನುಭವಿಸುತ್ತ ಸಾಗಬೇಕಷ್ಟೇ.-
ಸೋತು ಹೋದೆನು ನಿನ್ನಯ ನೋಟಕೆ
ಹಗಲುಗನಸಿನ ಪ್ರೇಮ ಪಾಠಕೆ
ಕ್ಷಮಿಸು ನನ್ನನು ನೆನೆಯುವೆ ನಿನ್ನನು
ಕಾತುರದಿ ಕಾದಿರಿಸು ಕಣ್ಣನು..!!
ಸುರಿಯೋ ಮಳೆಗೂ ಕಾದ ಇಳೆಗೂ
ಎಂಥಹ ಸುಂದರ ಸಂಬಂಧ
ನನ್ನ ಕನಸಿಗೂ ನಿನ್ನ ನಿದಿರೆಗೂ
ಎಂಥಹ ಸುಂದರ ಅನುಬಂಧ..!!-
ಇಳಿ ಸಂಜೆಯಲ್ಲಿ ಚಳಿ ತಂಗಾಳಿಯಲ್ಲಿ
ಬಿಳಿ ಸೀರೆಯುಟ್ಟು ಬಳಿ ಬಂದಳು ನಾರಿ
ಕಣ್ಣ ತುಂಬ ತುಂಬಿ ಕೊಂಡೆ
ಸಣ್ಣ ನಗುಗೆ ಸೋತು ಹೋದೆ
ಚಂದ ಅವಳ ನಿಲ್ಲದ ಮಾತುಗಳು
ಅಂದ ಅವಳ ಕಾಲ್ಗೆಜ್ಜೆ ಮೌನಗಳು
ಅವಳೇ ನನ್ನವಳು ನನ್ನ ಕನಸವಳು
ಎಂದು ಮರೆಯಾಗಳು ಮನ ತುಂಬಿದವಳು-
ಅವಳ ಮುಗ್ದ ಮೊಗದ ಕಿರು ನಗುವ
ಒಮ್ಮೆ ನೋಡಿ
ಅರಳುವ ಹೂವೊಂದು ಮುದುಡಿದೆ
ತಂತಾನೆ ಸೋತು
ಅವಳಂದ ಇರುವಾಗ ನನ್ನಂದ ಕಾಣದೆಂದು
ಅಂತಹ ಅಂದಗಾತಿ ನನ್ನವಳು
ಹೀರದ ಬೆಳದಿಂಗಳು-
ಯಾಕಿಂತ ಮೌನದ ನಾಚಿಕೆ
ಇಡು ಇದನ್ನು ಊರಿಂದ ಆಚೆಗೆ
ಯವ್ವನದ ರಂಗಿನಲ್ಲಿ ನಗುವ ಬೀರುವ
ಹೂಗಳು ನಾವೀಗ ಮೊಗ್ಗಾಗಿವೆವು
ಕಂಡು ನಿನ್ನ ನಾಚಿಕೆಯ
ಕರಗಿ ನೀರಾಗಿ ಅರಳಿ ಘಮಿಸುತ್ತಿರುವೆವು
ಕಮಲಾಂಗಿಯೇ, ಕೋಮಲಾಂಗಿಯೇ
ಕಮರಿದೆ ಒಳಗೆ ಅಂದು ಬಚ್ಚಿಟ್ಟು ಹೇಳಿದ್ದ
ಪ್ರೇಮಬೇಡವೆಂದ ಮಾತು
ಅದಕ್ಕಾಗಿ..
ಕನಸಲು, ಕನವರಿಕೆ ಇಂದು
ಕೇಳಿಕೋ ಪ್ರೇಮ ಭಿಕ್ಷುಕನಾದೆ ಬಂಧು
ನಿನ್ನ ಸೆರಗ ಸೋಕಿಸಿದರೆ ಸಾಕು
ಸತ್ತು ಮತ್ತೆ ಹುಟ್ಟಿ ಬರುವೆ ಸೋತು
ಅಂತು ಇಂತು ಬೆಳೆಯಿತು ಒಲವ ಬೇರು ಎದೆಯಲ್ಲಿ
ಇಂದು ಕಂಡು ವಯ್ಯಾರದ ನಿನ್ನ ನಡಿಗೆಯ ಎದುರಲ್ಲಿ-
ಗೆಲುವಿಗೊಂದು ಅರ್ಥ.
ಸೋಲಿಲ್ಲದೆ ದೊರೆಯುವ ಗೆಲುವು
ರುಚಿಗೆ ತಕ್ಕಷ್ಟು ಉಪ್ಪು ಸಹ ಇರದ
ಸಪ್ಪೆ ಊಟಕ್ಕೆ ಸಮಾನ..!-