ಅವಳೆಂದರೆ,,,
ಭಾವಗಳ ಬಿಸಿಯಾಗಿಸೋಳು..
ಮನವ ಮೋಹಿಸಿ
ಆಸೆಯ ಅತಿಯಾಗಿಸೋಳು
ಅವಸರದಿ..
ತರುಣನೀ ತನುವಿನ
ತಂಟೆಗಾಗಮಿಸುವ
ತುಂಟಿಯಿವಳು..!-
'ಮೌನ ಪ್ರಿಯ'.
ಮನಸಿನ ಮಾತುಗಳನ್ನು ತಿಳಿಸುವಲ್ಲಿ ನಾನು
'ಬರಹ ಪ್ರಿಯ'...
......... read more
ಮನಸೆಂಬ ಹೊಲದಲಿ
ಈಗ ಒಲವಿನದೇ ಫಸಲು;
ಸಂತಸವೂ ದಿವಸದಲಿ
ನಿನ ಹೆಸರ ಜಪಿಸಲು..!-
ಕೇಳಿಲ್ಲಿ ಕುವರಿ,,,,,
ಮಳೆಯ ದಣಿವಿನದಿ
ತಂಗಿತು ತಣಿವು
ಈ ಭುವಿಗೆ..!
ಮಳೆಯ ಹನಿಗಳದಿ
ತೊಡಲ್ಪಟ್ಟಿತು ತಳಿರು
ಆ ಪ್ರಕೃತಿಗೆ..!!
ಅದರಂತೆಯೇ ನಿನ್ನೊಲುಮೆಯದಿ
ತಪ್ಪಿತು ತರತರದ್ಯಾತನೆ
ನನ ಮನಸಿಗೆ..!!
-
💞~~~~💞~~~💞
ಬದುಕೆಂಬ ಈ ದಿನದ ವೇಳೆಯಲಿ
ಬರೆದೆ ನಾನೊಂದನು ಬಿಳಿ ಹಾಳೆಯಲಿ
ಮಿಂದು ಭಾವಗಳ ಹೊಳೆಯಲಿ...
ಕಥೆಯಾಗುಳಿಯಲೆಂದು ನಾಳೆಗಳಲಿ
ನೆನ್ನೆವರೆಗೂ ನನ್ನೊಂದಿಗಿದ್ದ ನಿನ್ನ ನೆನಪಲಿ!
~ ನಂದನ್(೨೫೨~ಎ)
-
ನನ ಬದುಕಿಗೆ ಬೆಳಕೆಂದರೆ
ಅದು,,,,,,,,,, ನೀನೇ!
ನೀನಷ್ಟೇ ಜೊತೆಯಲಿಲ್ಲದಿರೆ
ಮನ ತುಂಬಾ ಬರೀ ಕತ್ತಲೆನೇ!!-
ಎನಿತೆನಿತೋ ಕನಸ ಕಂಡಿತು
ಈ ನಯನವು
ನಿನ ಕಾಣಲು,
ಇನಿತಿನಿತು ಮತ್ತೇ ಸಾಗಿತು
ಈ ತನುವು
ನಿನ ಸೇರಲು,
ಅನಿತನಿತು ಅನಿದಿನದಲಾಸೆ ಹೊತ್ತಿತು
ಈ ಮನವು
ನಿನ ಅಪ್ಪಿಕೊಳ್ಳಲು..!
ಹಣೆಬರಹದಲಿ
ನೀನಿರುವುದವ ಖಾತರಿಯೊಂದೇ
ಆಗಿಬಿಡಲಿ ಸಾಕು ,
ಬಾಳಲಿ
ನನ್ನೊಂಟಿತನಕೆ ಕತ್ತರಿಯನ್ನಿಂದೇ
ಹಾಕಲೇ ಬೇಕು..-
ಕನಸುಗಳನ್ನು ಕೊಲ್ಲುವವರಿರದಿದ್ದರೆ,
ಮನಸ್ಸನ್ನು ಮುರಿಯುವವರಿರದಿದ್ದರೆ
ಈ ಲೋಕದಲ್ಲಿ ನಾವು
ಸಾವಿಗೆ ಬಹು ದೂರದಲ್ಲಿರುತ್ತಿದ್ದೆವು!-
ಹುಡುಕುವಿರೇಕೆ
ಎನ್ನ ಬರಹವ
ಕನ್ನಡಕದಿ..?!
ಕಲೆತ ಭಾವಗಳ
ಕೂಡಿ ಹಾಕಿ ಬರೆದಿದೆ
ಕನ್ನಡವನೊಂದೇ ನೆನದೀ ಮನದಿ..!!
ಕಾಣಸಿಗದೇನವು..?
ಓ ನನ್ನ
ಕನ್ನಡಿಗರ ಕಂಗಳೇ!!!
~ ನಂದನ್(೨೫೨~ಎ)
-
ಇಂದು ಹುಟ್ಟಿದ ಪ್ರೀತಿಯ ಕುರುಹುಗಳೇ.....
......ನಾಳೆಯಲ್ಲಿ ನೆಲೆಸುವ 'ನೆನಪುಗಳು'!-
ಮೂಡುತಿರುವ
ನನ್ನೆಲ್ಲ ಕನಸುಗಳಿಗೆ
ನೀನೇ ಕಾರಣಕರ್ತೆ;
ಸತಾಯಿಸದೆ
ಸುಮ್ಮನೆ ಸಹಕರಿಸು
ನೀನೆನ್ನ ಜೊತೆ..!-