ಈ 2000ನೇ ಬರಹ
ಜಗಜ್ಜನನಿ ಹೆಣ್ಣಿಗೆ ಅರ್ಪಿತ
(👇👇👇👇)-
ನನ್ನ ಸಮಸ್ಯೆಗಳು ಹೇಳಿಕೊಳ್ಳುವಷ್ಟು
ದೊಡ್ಡವೂ ಅಲ್ಲ ಗಾಲಿಬ್
ಆ ನೋವುಗಳನ್ನು ನುಂಗುವಷ್ಟೂ
ಚಿಕ್ಕವೂ ಅಲ್ಲ ಗಾಲಿಬ್-
ಸಹನೆ ನಿನ್ನಲ್ಲಿದ್ದರೆ
ಸಕಲವೂ ನಿನ್ನದೆ
ಸಂಸ್ಕೃತಿ ನಿನ್ನಲ್ಲಿದ್ದರೆ
ಸನ್ಮಾನವೂ ನಿನ್ನದೆ
ಸಂಸ್ಕಾರ ನೀ ಮರೆತರೆ
ಸಂಹಾರವೂ ನಿನ್ನದೆ-
ಸಹನೆ ಧರ್ಮಕ್ಕಷ್ಟೇ ಅಧರ್ಮಕ್ಕಲ್ಲ
ತಾಳ್ಮೆ ಸಹಾನುಭೂತಿಗಷ್ಟೇ ಕ್ರೂರತನಕ್ಕಲ್ಲ
ಗೌರವ ವ್ಯಕ್ತಿತ್ವಕ್ಕಷ್ಟೇ ವ್ಯಕ್ತಿಗಲ್ಲ
ಪ್ರೀತಿ ಪಾವಿತ್ರ್ಯತೆಗಷ್ಟೇ ಮೋಹಕ್ಕಲ್ಲ.-
ಸಂಬಂಧಗಳಿಗೆ ಜೀವದ ಕಳೆ ತುಂಬುವುದು
ಸಹನೆಯೆoಬ ಅಸ್ತ್ರ ಗಟ್ಟಿಯಿದ್ದಾಗ,
ಮನಸ್ಸುಗಳಿಗೆ ಉಲ್ಲಾಸ ತರುವುದು
ಭಾವನೆಯೆoಬ ಬಂಧ ಬಿಗಿಯಾಗಿದ್ದಾಗ.-
ನೋವಿಗೂ ತನ್ನದೆಯಾದ
ಗತ್ತು ಇರುತ್ತದೆ ಗಾಲಿಬ್
ಸಹಿಸಿಕೊಳ್ಳೊರನ್ನು ಕಂಡು
ಸೋತು ಬಿಡುತ್ತದೆ ಗಾಲಿಬ್-
ಸಹನೆ ತುಂಬಿದ ಹೃದಯಕ್ಕೆ ಪೆಟ್ಟು ಬಿದ್ದರೆ,
ಅದರ ನಿರ್ಣಯಗಳು ತುಂಬಾ ಕಠಿಣವಾಗಿರುತ್ತೆ.-
ಕರುಳ ಕುಡಿಯ ಜೊತೆ
ವಸುಂಧರೆಯಷ್ಟೇ ಸಹನೆಯನು
ಹೊತ್ತು ಹೆತ್ತವಳು ಅಮ್ಮ,
ಆದಿಶಕ್ತಿಯೆ ಮನುಜರೂಪ
ಧರಿಸಿ ಧರೆಗಿಳಿದವಳು ಅಮ್ಮ,
ಸದಾ ತನ್ನ ಸಂಸಾರಕ್ಕಾಗೆ
ಮುಡಿಪು ಅವಳ ಜನ್ಮ ।-
ಪ್ರತಿಯೊಬ್ಬರು ನಿಮ್ಮವರನ್ನು ತೊರೆಯುವಾಗ
ಆದದ್ದಕ್ಕೆ ಒಮ್ಮೆ ಕಾರಣ ಕೇಳಿದ್ದರೆ
ಎಷ್ಟೊ ಸಂಬಂಧಗಳು ಇನ್ನು ಉಳಿಯುತ್ತಿದ್ದವು!-