ಸಮಯ ಎಲ್ಲಿಗೆ ಹೋಯ್ತು,
ಕಾಲ ಬದಲಾಗೋಯ್ತು
ಯಾಕ ಹಿಂಗಾಯ್ತು..,
ಸಮಯವೂ ಕೇಳುವುದು ಏನಾಯ್ತು.?
ಎಲ್ಲಾ ಅಲ್ಲಿಗಲ್ಲಿಗೆ.
ಕಾಲವೇ ಹಿಂಗೆ,
ಕ್ಷಣ ಹೊತ್ತು;
ಹತ್ಕೊಂಡು ಜಗತ್ತ ಸುತ್ತು,
ಏನು..?! ಆ ಸಮಯ ನಡುಗಿತ್ತು
ಬುಗುರಿಯಾ ಜಗತ್ತು,
ಸಮಯ ಚಲಿಸುತ್ತಲಿತ್ತು...
~ಸುವರ್ಣಾ ಗೌಡ
-
ಸಮಯ ಎಚ್ಚರಿಸುತಿದೆ
ನಿದ್ರಿಸುತಿರುವ ಮನಗಳ ಬಡಿದೆಬ್ಬಿಸುತಾ!
ರಂಗೇರುತಿರುವ ಜಗದೊಳು
ವಿಸ್ಮಯದ ಮಹಾಪರ್ವವೆ ಸೃಷ್ಠಿಸುತಾ
ತನ್ತನವ ಬಿಡದೆ ಮರೆಯುತಿರುವ
ಈ ಕಾಲ ಮಹಾರಾಜ..!-
"ಈ ಜಗತ್ತಿನಲ್ಲಿ ಖರ್ಚು ಮಾಡಬಾರದೆಂದರೂ ಖರ್ಚಾಗುವ ವಸ್ತು ವೆಂದರೆ ಸಮಯ. ಖರ್ಚು ಮಾಡಿದರೂ ಖರ್ಚಾಗದೆ, ದ್ವಿಗುಣವಾಗುವ ವಸ್ತು ವೆಂದರೆ ಜ್ಞಾನ. ಆದ್ದರಿಂದ ಯಾವಾಗಲೂ ಜ್ಞಾನವನ್ನು ಹೆಚ್ಚು ಖರ್ಚು ಮಾಡಿ ಆದರೆ ಅಜ್ಞಾನವನ್ನಲ್ಲ. ಸಮಯದಿಂದ ಸತ್ ಚಾರಿತ್ರ್ಯ ಖರೀದಿ ಮಾಡಿ ಆದರೆ ಅನಾಚಾರವನಲ್ಲ."
(caption for english)-
ಅಂದ್ರೆ ನಮಗೆ ಈ ಸಮಯದ ಮೌಲ್ಯನೇ ಇನ್ನು ಸರಿಯಾಗಿ ತಿಳಿದಿಲ್ಲ ,
ಸುಮ್ನೆ ನಾವ್ ಸಮಯನ ವ್ಯರ್ಥ ಮಾಡ್ತಿದ್ವಿ ಅನ್ನಿಸ್ತಿದೆ,😊-
ನಿನ್ನ ಜೊತೆ ನನ್ನನ್ನು ಕರೆದುಕೊಂಡು ಹೋಗುವೆಯಾ ಮನೆಲಿದ್ದು ಬೋರ್ ಆಗ್ಬಿಟ್ಟಿವೆ.,
ಪೊಲೀಸ್ ಮಾವನ ಕೈಲಿ ಮಾತ್ರ ಸಿಗೋದು ಬೇಡ.,-
ಮಾತಾಡೋಕೆ "ಸಮಯ"
ಮತ್ತು "ಪದಗಳ"
ಅಗತ್ಯ ಇಲ್ಲ..
ಮಾತಾಡಲು "ಮನಸ್ಸು"
ಅನ್ನೋದು ಇರಬೇಕು..-
ಯಾವುದೇ ವ್ಯಕ್ತಿ ನಿಮ್ಮ ಭಾವನೆಗಳ ಮೇಲೆ,
ತಮ್ಮ ಸಮಯದ ಹೂಡಿಕೆ ಮಾಡ್ತಿದಾರೆ ಅಂದ್ರೆ,
ಅವರ ಹೃದಯಲ್ಲಿ ನಿಮಗಾಗಿ ವಿಶೇಷ ಸ್ಥಾನವಿದೆ ಎಂದರ್ಥ.
"ಅಂತಹ ಜೀವವನ್ನ ಕಳೆದುಕೊಳ್ಳುವ ಸಾಹಸ ಮಾಡದಿರಿ, ಆಮೇಲೆ ನಷ್ಟ ಆಗೋದು ನಿಮಗೆ ಅವರೀಗಲ್ಲ ".-
ನನ್ನ ಪಾಲಿಗೆ ಸಮಯ 'ಬಂಗಾರದ ನಾಣ್ಯ'!
ಖರ್ಚು ಮಾಡುವಾಗ ಹೇಗೆ ಮಾಡಬೇಕೆಂಬ ಆಯ್ಕೆ ನನ್ನದೇ. ಸಾರ್ಥಕವಾಗಿ ಬದುಕಬೇಕೆಂಬ ನಿರಂತರ ಪ್ರಯತ್ನದಲಿ ಸಮಯದ ಬಂಗಾರದ ನಾಣ್ಯ ನಿರಂತರವಾಗಿ ಕರಗುತ್ತಿರುತ್ತದೆ. ತಡೆಯಲು ಸಾಧ್ಯವಿಲ್ಲ, ಆದರೆ ಕೈ ಜಾರಲು ಬಿಡೆನು.ಉಳಿದಿದ್ದೆಲ್ಲ ಆ ಭಗವಂತನ ಕೈಯೊಳಗಿದೆ!-
ಅನ್ನುವುದೇ ಶುದ್ಧ ಸುಳ್ಳು
ಪ್ರತಿಕ್ಷಣವೂ ಸರಿಯಾಗಿ ಉಪಯೋಗಿಸಿಕೊಂಡರೆ...
ಪ್ರತಿಕ್ಷಣವೂ ಗುರಿಯ ತಲುಪಲು ಪ್ರಯತ್ನಿಸಿದರೆ..
ಇಂದು ಸಾಧನೆಯ ದಾರಿಯ ಕೊನೆಯ ಹಂತದಲ್ಲಿ ನಮ್ಮ ಪಯಣ.......-
ಸಮಯವೇ ತಾನೇ ಗೆಲುವಿಗೆ ದಾರಿ.,
ಪ್ರತಿಯೊಂದು ಗೆಲುವಿನ ಸಾಧನೆಗೆ ಸಮಯವೇ ಮುಖ್ಯ.,
ಸಮಯದ ಪಾಲನೆ ನಮಗಿರಬೇಕು.,-