ಕಾಯುತ್ತಿದೆ ನಯನ ಹಂಬಲದಿ ನಿನ್ನ ನೋಡಲು,
ಬಯಸುತ್ತಿದೆ ಮನಸ್ಸು ನಿನ್ನ ಸೇರಲು,
ನೀ ಇಲ್ಲದ ಈ ದಿನಗಳು ಯುಗಗಳಂತಿದೆ ಗೆಳೆಯಾ,
ಬರಬಾರದೇ ನನ್ನ ಸೇರಲು; ಜೊತೆ ಸಾಗಲು ಕೊನೆವರೆಗೂ....-
ಬದಲಾಗಿದೆ ನನ್ನ ಲೋಕ ನೀ
ಪರಿಚಯಗೊಂಡ ಬಳಿಕ,
ಬಹುಕಾಲವೂ ಇರಬೇಕು
ಎನಿಸುತ್ತದೆ ನಿನ್ನ ಸನಿಹ...-
ಮತ್ತೆ ಮತ್ತೆ ನಿನ್ನ
ಸನಿಹವೇ ಬೇಕೆಂಬ
ಇರಾದೆಯೇನಿಲ್ಲ ಸಖ,
ನಿನ್ನೊಟ್ಟಿಗಿನ
ನೆನಪುಗಳು
ನೆನಪಾದರೆ ಸಾಕು,
ಮಂದಹಾಸ
ಮೂಡಲು,
ಮರುಭೂಮಿಯಂತ
ವಿರಹಕ್ಕೆ
ಮಳೆಹನಿಯಾಗಿ
ತಂಪೆರೆಯಲು,
ತಮವಾವರಿಸಿದ
ಮನಕೆ ತಿಳಿಬೆಳಕ
ನೀಡಲು...-
ಬದುಕಿನ ಹಾದಿಯಲ್ಲಿ ಜೊತೆಯಾಗಿ
ನೀನು ವರವಾಗಿ ಬಂದೆ ಈ ಬಾಳಿಗೆ,
ನೀನು ಕೈ ಹಿಡಿದಾಗಲ್ಲೇ ಬದುಕು ಸುಂದರ
ನೆಮ್ಮದಿ,ಖುಷಿಯೂ ಸಿಕ್ಕಿದು ಎನ್ನಗೆ
ನಿನ್ನ ಹೆಸರಿನ ಸಿಂಧೂರ,ಈ ಕರಿಮಣಿಯ
ಉಡುಗೊರೆಯಾಗಿ ನೀಡಿರಲು ನನಗೆ
ಈ ಬಾಳಿನ ಜ್ಯೋತಿಯೂ ನೀವಾಗಿರಲು
ನನ್ನ ಬದುಕಿನ ಸಂತಸ,ಎಲ್ಲಾ ನೀನೇ ನನಗೆ
ನಮ್ಮ ಪುಟ್ಟ ಗೂಡಿನಲ್ಲಿ ನಮ್ಮದೇ ಕಲರವದಿ
ಸುಖವಾದ ಸಂಸಾರವು ಸಿದ್ಧವಾಗಿರಲು
ನಿನ್ನ ಜೊತೆಯಾಗಿ ನಾ ಸೇರಲು ಕ್ಷಣ ಸನಿಹವಿರಲು
ಬದುಕಿನ ಪಯಣ ನಿನ್ನೊಡನೆ ನಾ
ಜೊತೆಯಾಗಲು ಹಾಲು ಜೇನಿನಂತೆ ಸಿಹಿ ಹೊನಲು.
✍️ಪಾರು❤️-
ಕಾಣಲು ಕೈಗೆಟಕುವಷ್ಟೇ ಹತ್ತಿರ,
ಸನಿಹ ಬಯಸಿದಷ್ಟೂ ದೂರ..! ಥೇಟ್
ಮುಗಿಲಂತವನು ನೀನು ।-
ಅದೆಷ್ಟು ದೂರ ಸಾಗಿ ಬಂದಿತು ನನ್ನೀ ಮನ...!?
ಕೆಂದಾಗಸದಗಲ ಹರಡಿ ನಿಂತ ಸೂರ್ಯನ ಸನಿಹ..!-
ಖಾಲಿ ಖಾಲಿ
ಆಗಿಹೆ
ನೀನು
ಸನಿಹ
ಇಲ್ಲದಿರುವಾಗ
ನಾವಿಬ್ಬರು
ಅಂದು
ಜೊತೆಗೂಡಿ
ಆಡಿದ
ಜೋಕಾಲಿ.-
ಕಂಪಿಸುವ
ಕನಸಲ್ಲಿ
ಬರಲು ಕದ್ದೋಡುವೆ
ಏಕೆ ಮನವೇ..
ನನ್ನ ಸನಿಹ
ನಿನಗೆ
ಸುಖಿಸುವುದಿಲ್ಲವೇ..!!-
ಕಣ್ಮುಚ್ಚಿದರು ಬಾರದ ನಿದಿರೆಯಲ್ಲಿ
ನಿನ್ನ ಕನಸ ಕಾಣುವ ಖಯಾಲಿ..
ಮಾತುಗಳೇ ಬಾರದ ಸನಿಹದಲ್ಲಿ
ಪಿಸು ಮಾತುಗಳದ್ದೆ ಉಯ್ಯಾಲಿ...-
ನೀ ಬಳಿಯಿರದ ರಾತ್ರಿಗಳೆಲ್ಲವು
ನಿರ್ನಿದ್ರೆಯ ಕಡಲು ಸಖ,
ನೀ ಬಳಿಯಿದ್ದರೆ ಕಾಣುವ
ಕನಸುಗಳಿಗು ಸುಖ ;-