QUOTES ON #ಶ್ರದ್ಧಾಂಜಲಿ

#ಶ್ರದ್ಧಾಂಜಲಿ quotes

Trending | Latest
3 MAY 2020 AT 22:20

ಕನ್ನಡ ಸಾರಸ್ವತ ಲೋಕದ ಜ್ಯೋತಿ
ನೆನದವರ ಮನದಲ್ಲಿರುವ ಕೀರ್ತಿ
ನವೋಲ್ಲಾಸದ ಭಾವೈಕ್ಯವೀ
ನಮ್ಮ ಹೆಮ್ಮಯ ನಿತ್ಯೋತ್ಸವ ಕವಿ..

ದೇಹವಳಿದರೇನಂತೆ
ಕಾವ್ಯಸುಧೆಯು ಸದಾ ನೆನವು
ಎಂದೆಂದಿಗೂ ಅಜರಾಮರ
ನಿತ್ಯೋತ್ಸವ ಗೀತೆಯೂ.!

ಅರವತ್ತೈದರ ಐಸಿರಿಯೊಳು
ನಿಸ್ಸಾರ್ ರವರ ನವೋಲ್ಲಾಸ
ನಾನೆಂಬ ಪರಕೀಯವು
ಮರೆಯಲಾರದ ಕೃತಿಗಳಿವು...

ನಿತ್ಯದ ನಿತ್ಯೋತ್ಸವದೊಳು
ಅನವರತ ಜೀವಂತವಿಹರು
ಎಲ್ಲಿಯೂ ಹೋಗಿಲ್ಲ ಇಲ್ಲವೆಂದು
ಹೇಳಲ್ಲ ನಮ್ಮೊಂದಿಗಿನ ಕೊಂಡಿಯೂ..

ಕನ್ನಡ ಸಾಹಿತ್ಯದ ಅಮೂಲ್ಯ ರತ್ನವು
ಸುಮುಹೂರ್ತದೊಳು ನಡೆಯುತ
ಕನ್ನಡ ಕಾವ್ಯಸುಧೆಯ ಹರಿಸಿದ
ಕವಿಪುಂಗರಿವರು ನಿಸ್ಸಾರರಿವರು..

ಆರಿದರು ಜ್ಯೋತಿ ನಮ್ಮೊಂದಿಗಿದೆ
ಅವರ ಕವನ ಸಂಕಲನಗಳ ಕೊಂಡಿ
ಸಿಗಲಿ ಆತ್ಮಕೆ ಶಾಂತಿ ಕೋರೋಣ
ನಾವೆಲ್ಲ ನಿತ್ಯೋತ್ಸವ ಕವಿಸಹೃದಯಕೆ...

ಅಭಿಜ್ಞಾ ಪಿ ಎಮ್ ಗೌಡ

-


23 APR 2020 AT 16:12

ಎಲುಬಿಲ್ಲದ ನಾಲಿಗೆಯೆಂದು
ಮನಬಂದಂತೆ ಹರಿಬಿಟ್ಟು
ಚುಚ್ಚು ಮಾತುಗಳನ್ನಾಡುತ
ಅವರಿವರೆನ್ನದೆ ಅಪಹಾಸ್ಯಮಾಡುತಲೇ
ಕಾಲಹರಣ ಮಾಡುತಿರುವ
ವಿಕೃತ ಮನಸ್ಸಿನ ಅದಮರೊಂದಿಗೆ
ವಾದಕ್ಕಿಳಿಯಲು ನನ್ನ ಮನಸ್ತಿತಿಗಂತೂ
ಮತಿಭ್ರಮಣೆಯಾಗಿಲ್ಲ
ಮಾತಿನ ಮಸಾಲೆಯಿಂದ
ಕಂಡವರ ಬದುಕನ್ನು
ಚಿತ್ರಾನ್ನ ಮಾಡಲೋರಟ
ಕಟ್ಟೆ ಪುರಾಣಿಕರಿಗೆ ಅಂತಿಮವಾಗಿ
ಭಾವಪೂರ್ಣ ಶ್ರದ್ಧಾಂಜಲಿ!!
✍️ಶಿಲ್ಪಾ ಪಾಲ್ಕಿ💞

-



ನಾ ಮಡಿಯುವ ಮೊದಲು
ಬರೆಯಬೇಕಿದೆ ಪ್ರೀತಿಯಿಂದ
ಅವಳ ಮೇಲೊಂದು ಕಾವ್ಯ
ಆ ಹಾಳೆಯನ್ನು ಹಿಡಿದರೂ ಸಾಕು
ಕಣ್ಣಾಡಿಸಿದರೂ ನಾ ಧನ್ಯ
ಓದಿ ಮನದುಂಬಿ ಅವಳ
ಕಣ್ಣೀರು ಹಾಳೆಯ ಮೇಲೆ
ಬಿದ್ದರೆ,ನನಗದೇ
ಶ್ರದ್ಧಾಂಜಲಿ.

-


31 JUL 2019 AT 11:32

🌼 ಭಾವಪೂರ್ಣ ಶ್ರದ್ಧಾಂಜಲಿ 🌼

ಜೀವನದಲ್ಲಿ ಎಲ್ಲವೂ ಇದ್ದರೂ
ನೆಮ್ಮದಿಯಿರುವುದಿಲ್ಲ
ನೆಮ್ಮದಿಯಿಲ್ಲದ ಜೀವನ ಜೀವಿಸುವುದು
ದುರ್ಲಭವಲ್ಲವೇ..

ಕೋಟಿಕೋಟಿಗೆ ಒಡೆಯನಾದರೂ
ಸಹಸ್ರಾರು ಕನ್ನಡಿಗರಿಗೆ ಅನ್ನದಾತನಾದರೂ
ಒತ್ತಡಕ್ಕೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದು ಬೇಸರ ತರಿಸಿದೆ.

ಕಾಫಿ ಡೇ ಮಾಲಿಕ : ಸಿದ್ಧಾರ್ಥ ಹೆಗಡೆ ಅವರ ಆತ್ಮಕ್ಕೆ ಶಾಂತಿ ಸಿಗಲಿ 🙏😑

-


6 JUN 2020 AT 16:55

ತೆಗೆದ ಕೊನೆ ಪಟವೆ
ಬದುಕಿನ ಕೊನೆ ಪುಟದಲ್ಲಿ
ಶ್ರದ್ಧಾಂಜಲಿಯ ಪಟವಾಗಿ
ರಾರಾಜಿಸುತ್ತಿತ್ತು...

-


7 JUN 2020 AT 23:09

ಅಶ್ರುತರ್ಪಣ..
ಚಿರು,
ಸಣ್ಣ ವಯಸಿನಲ್ಲಿಯೇ
ಏರಿ ಬಿಟ್ಟೆಯಾ ಕೊನೆಯ
ಸಡಗರದ ತೇರು,
ಹುಟ್ಟುವ ಮಗುವು ಅಳುವಾಗ
ಚಂದಮಾಮನ ತೋರಿಸಿ
ನಗಿಸುವವರು ಯಾರು
ಕಾಣದೂರಿಗೆ ಕಾರಣ ಹೇಳದೆ
ಪಯಣಿಸಿಬಿಟ್ಟೆ ನೀನು
ನಿನ್ನೆಸರಿನವರ ಬೇರೆ ಯಾರದಾದರೂ
ಸರತಿ ಬಂದಿರಬಹುದು
ತಪ್ಪಿ ನಿನ್ನನ್ನು ಕರೆದೊಯ್ದಿರಬಹುದು
ನಮ್ಮಯ ಅನಿಸಿಕೆ ಸುಳ್ಳಾಗದಿರಲಿ
ಅರುಳುತಿರುವ ಹೂವು
ನಿನ್ನ ಮೊಗವನ್ನು ಕಾಣದಾಯ್ತು
ಮೂಗ ವಾಗಿದೆ ಮನಸ್ಸು ಭಾರವಾಗಿದೆ
ನಿಜ ಜೀವನದಲ್ಲಿ ಅದ್ಬುತ ಪಾತ್ರಧಾರಿ
ನವ ಕಲಾವಿದರಿಗೆ ಮಾದರಿ
ಆದರೆ ಏನು ಮಾಡುವುದು
ಆದರದಿಂದ ಬರ ಮಾಡಿಕೊಂಡ
ನಿನ್ನನ್ನು ಮೇಲಿನ
ಕಪಟ ನಾಟಕ ಸೂತ್ರಧಾರಿ,
ಅವನ ಕೆಲಸಗಳೆ ಇಂತವು
ಬರೀ ಘನಂಧಾಂರಿ
ಒಳ್ಳೆಯವರನ್ನು ಕಂಡರೆ
ಅವನಿಗೆ ಉರಿ
ಗೊತ್ತಾಗದಂತೆ ಎಳೆದುಬಿಡುವನು
ನಮ್ಮೆಲ್ಲರ ಎದೆಯಮೇಲೆ
ಮಾಸದಂತ ಬರಿ ( ಬರೆ ) .!
__✍🏻ದೇವಕಿ ಕಂದ ಗುರು ಡಿ.

-


3 MAY 2020 AT 22:23

ದೇವನಹಳ್ಳಿ ಹುಟ್ಟಿ
ದೇವರಂತೆ ಬದುಕಿ
ದೇವನೆಡೆ ನಡೆದ
ನಿತ್ಯಸ್ಮರಣೀಯರಾದ
ನಿತ್ಯೋತ್ಸವದ ಕವಿ
ನಿಸಾರ್ ಅಹಮದ್ ರವರಿಗೆ
ವಿನಮ್ರವಾದ ಶ್ರದ್ಧಾಂಜಲಿಗಳು ... 🙏🙏🙏

-


3 MAY 2020 AT 20:37

ಇಂದು ನಮ್ಮನ್ನೆಲ್ಲ ಅಗಲಿದ ನಿತ್ಯೋತ್ಸವ ಕವಿ ಕೆ.ಎಸ್. ನಿಸಾರ್ ಅಹಮದ್ ಅವರ ಇನ್ನೊಂದು ಸುಪ್ರಸಿದ್ಧ ಹಾಡು :- (ಸಂಗ್ರಹ ಹಾಡು ನಿಮಗಾಗಿ)

ಕುರಿಗಳು ಸಾರ್ ಕುರಿಗಳು...
- ಕೆ.ಎಸ್.ನಿಸಾರ್ ಅಹಮದ್

-


29 OCT 2021 AT 20:23

ಕರುನಾಡ ರಾಜರತ್ನನ ರಾಜಕುಮಾರನಾಗಿ
ಎಲ್ಲಾ ವಯೋಮಾನದವರಿಗೂ ಪವರ್ ಸ್ಟಾರಾಗಿ
ಯುವರತ್ನವಾಗಿ ಮರೆಯಲಾಗದ ಮಾಣಿಕ್ಯವಾಗಿ
ಜಗವೇ ಮೆಚ್ಚುವ ಅಜಾತಶತ್ರುವಾಗಿ ಪ್ರತಿಯೊಬ್ಬರ
ಮನಸ್ಸಲ್ಲೂ ನಮ್ಮವರೆಂದು ಅನಿಸಿಕೊಂಡ ನೀವಿಂದು
ಬಾರದೂರಿಗೆ ಪಯಣವ ಬೆಳೆಸಿ ಉತ್ತಮ ಮಾನವನ
ಮನವ ನೆಲೆ ನಿಲ್ಲಿಸಿ ಅಜರಾಮರ ಚರಿತ್ರೆಯಾಗಿ
ಬದಲಾಗಿ ಕಣ್ಣಿಂದ ಮರೆಯಾದರೂ ಜಾರುವ
ಒಂದೊಂದು ಹನಿ ಕಣ್ಣೀರಲ್ಲೂ "ಅಪ್ಪು" ಎಂಬ ಹೆಸರಲ್ಲಿ
ಉಸಿರು ಇರುವವರೆಗೂ ಅಳಿಯದೆ ಉಳಿಯುವಿರಿ..
- ವರುಣ್..


-



ಬದುಕಿನುದ್ದಕ್ಕೂ
ಸಮಾಜಮುಖಿ
ಬರಹದ ಸೇವೆ ಸಲ್ಲಿಸಿದ
ಬರವಣಿಗೆಯ ಬ್ರಹ್ಮ .
ನೇರ ನುಡಿಯ ಕಲಾಕಾರ
ಉತ್ತಮ ಅಂಕಣಕಾರ
ನಟ ನಿರೂಪಕ
ಸಮಾಜಿಕ ಚಿಂತಕ
ಇಂದು ಬಾರದ
ಲೋಕಕ್ಕೆ ತೆರಳಿದ್ದಾರೆ..
😔😔😔😔😔😔
ಭಾವಪೂರ್ಣ ಶ್ರದ್ಧಾಂಜಲಿ
🌹 ರವಿ ಬೆಳಗೆರೆ 🌹

-