...................
-
https://www.facebook.com/m.raina62
ಆಡಿಕೊಳ್ಳುವವರಿಗೆ
ಉತ್ತಮ ಆರೋಗ್ಯ
ನೀಡಿದ ಭಗವಂತ ,
ಅತ್ಯುತ್ತಮವಾಗಿ
ಬೇಡಿಕೊಳ್ಳುವವರಿಗೆ
ಬರಡು ಬದುಕು ಕೊಟ್ಟ ...!-
ನೆನೆದೆ ಮಳೆಯಲಿ
ಮೋಜಿದ್ದು ಮಾತಿಲ್ಲದೆ,
ನೆನೆದೆ ಕನಸಲಿ
ಪ್ರೀತಿ ಇದ್ದು ಧೈರ್ಯ ಇಲ್ಲದೆ,
ಸುರಿದು ಸರಿದು ಹೋಯಿತು
ನೆನೆದು ನೆನೆಯದಂತೆ ಇದ್ದ
ಆ ನಿನ್ನಯ ಮಳೆಯು,
ಆ ಪ್ರೀತಿಯು....!
😏😒😶-
ಗೋಳುಗಳ ಸಾಗರದಲಿ
ಗುಳ್ಳೆಯಂತಹ ಖುಷಿ ಕ್ಷಣಿಕ,
ಗಮನ ಇನ್ನೊಂದು ಕಡೆ
ಗೆಲುವು ಬಹುದೂರದೆಡೆಗೆ
ಗುಪ್ತ ನೋವೀಗ ಸಂಗಾತಿ......-
ಸವಿ ಬೆಲ್ಲದ ಮಾತಾಡಿ
ಸಿಹಿ ಸೊಲ್ಲಲಿ ಸಹವಾಸ ಮಾಡಿ
ಅದೃಶ್ಯದ ನೆಪಕ್ಕೆ
ಸದೃಶ್ಯದ ಸತ್ಯ ಮರೆಯುವ
ಜನರ ಮದ್ಯ
ನಾವುಗಳು ಹಾವಿಯ ಬಿಂದುವಂತೆ..-
ಉಂಡಾಡಿ ಎದ್ದು
ಕಾಡಿ ಬೇಡಿ ಕೊಂಡ
ಕಪಟಿ ನೀವಾಗದಿರಿ,
ಕೊಟ್ಟ ಪ್ರೀತಿಗೆ ಆತ್ಮೀಯತೆಗೆ
ನಾ ಋಣಿಯಾಗಿರಿ......!
-
ಖಚಿತವಲ್ಲದ ಜೀವನದಲಿ
ಉಚಿತ ನಷ್ಟಗಳು ಅಪಾರ ,
ಕುಚೇಲನಿಗೆ ಕತ್ತಲಲಿ
ಕನಕ ಧನ ಕೊಟ್ಟು
ಕರಾಳವಾಗಿ ಕಸಿದುಕೊಂಡಂತೆ....
-
ಸ್ವಚ್ಛ ಬದುಕು
ಹೂ ಗುಚ್ಛದಂತಿರಲಿ
ಅವನಿಚ್ಛೆ ಇದ್ದರೆ
ಎಲ್ಲವೂ ಸ್ವ ಇಚ್ಛೆಯಂತೆ
ಸಾಗುತ್ತದೆ.......!-
ಸಾಲು ಸಾಲು ಕಷ್ಟಗಳು
ತಲೆ ಎತ್ತಿವೆ
ಜೀವನದ ಮಧ್ಯ ,
ಕಷ್ಟಗಳ ಮರೆಸುವಂತ
ಒಂದು ನೆಮ್ಮದಿ ಸಿಕ್ಕಿತು ಮದ್ಯ ...!-
ಬೆನ್ನತ್ತಿದ ಬಡತನಕೆ
ಬಾಡದ ಭರವಸೆ
ಬಲು ದೂರ
ಬೇಸರದಿ ,
ಬದಿಗೊತ್ತಿದ ನೋವು
ಬಳುವಳಿಯಾಗಿ ನನಗೇ
ಇಂತಿರುಗಿಸಿರುವೆ......!-