QUOTES ON #ಶ್ರದ್ದಾಂಜಲಿ

#ಶ್ರದ್ದಾಂಜಲಿ quotes

Trending | Latest
19 DEC 2020 AT 23:04

ನಾ ಬರೆವ ಪ್ರತಿ ಸಾಲುಗಳೆಲ್ಲವೂ
ನಿನ್ನೆಡೆಗೆ ನನಗಿರುವ ಮನಸಿನ ತುಡಿತವಲ್ಲ..
ನಿನಗಾಗಿ ಪ್ರತಿ ಕ್ಷಣವೂ ಮಿಡಿವ
ನನ್ನೆದೆಯ ಬಡಿತವೂ ಅಲ್ಲ..
ಅದು ಸತ್ತು ಬದುಕುವ ಪ್ರತಿ ಕ್ಷಣವೂ
ನಾ ಸಲ್ಲಿಸುವ ಶ್ರದ್ಧಾಂಜಲಿ..;
ಸೋತ ನನ್ನ ಒಲವಿಗೆ..!
ಪ್ರೀತಿಯೇ ಇಲ್ಲದ ನಿನ್ನ ಗೆಲುವಿಗೆ..!!!

-



!!ಭಾವಪೂರ್ಣ ಶ್ರದ್ಧಾಂಜಲಿ!!

ಓ ಮನಸ್ಸೇ
ಆಯಿತು ನನಗೆ
ಇಂದು ನಿರಾಶೆ
ನೊಂದು ಬೆಂದಿರುವ
ಮನಸ್ಸುಗಳು ಕತ್ತಲೆಯ
ಕತ್ತಲೆಯಲ್ಲಿ ಕಳೆಯುತ್ತಿದ್ದಾಗ
ಓ ಮನಸ್ಸೇ ಎಂದು ಕೂಗಿ
ಆ ಬೆಂದ ಮನಸ್ಸುಗಳಿಗೆ
ಬೆಳಕು ಚೆಲ್ಲಿದ ರವಿಯು
ಇಂದು ಮರೆಯಾಗಿ
ಮತ್ತೆ ಉದಯಿಸದ
ಲೋಕಕ್ಕೆ ಪಯಣ ಬೆಳಸಿದ
ಅವರನ್ನು ಒಂದು ಸಾರಿನಾದರು
ಅವರನ್ನು ನೇರವಾಗಿ ಬೇಟಿ
ಆಗಿ ಮಾತನಾಡಬೇಕು
ಎಂಬ ನನ್ನ ಮನದ ಆಸೆ
ಕೊನೆಗು ಆಯಿತು ನಿರಾಶೆ

-


25 SEP 2021 AT 10:11

ನಿಮ್ಮ ಸ್ವರ ಮಾಧುರ್ಯ
ನಿಮ್ಮ ಅಂತಕರಣದ
ಮಾತುಗಳ ಮರೆಯಲು
ಸಾಧ್ಯವೇ SPB sir...
ಭಾವ ಪೂರ್ಣ
ಶ್ರದ್ಧಾಂಜಲಿ ತಮಗೆ...
💐💐💐⚘⚘⚘

-



ಅಕ್ಷರ ಮಾಂತ್ರಿಕ
ಬರಹವೆ
ಬದುಕೆಂದವ,
ಪ್ರೀತಿ ಮಮತೆಗೆ
ಕನ್ನಡಿಯಾದವನ
ಇಹಲೋಕವ ಬೀಳ್ಕೊಟ್ಟ

-



ನೊಂದು ಬೆಂದು ಬಸವಳಿದು ಬೆಂಡಾದ ಭಾರವಾದ ಭಾವನೆಗಳು ಬತ್ತುಹೋಗಿ ಅಸುನೀಗಿದ ಕಾರಣ ಭಾವಪೂರ್ಣ ಶ್ರದ್ಧಾಂಜಲಿ ,,,,,

-


11 JUN 2021 AT 19:17

ಸೈಜುಗಲ್ಲನ್ನು ಹೊತ್ತರನ್ನು
ಕನ್ನಡ ಸಾಹಿತ್ಯಕ್ಕೆ ಪರಿಚಯಿಸಿ
ಮಡಿವಂತಿಕೆಯನ್ನು ಮುರಿದು
ಸಾಮಾನ್ಯರು ಭಾವಗಳು
ಕವಿತೆಯ ಕವನಗಳ
ಮಾತಾಗಬಲ್ಲರು ಎಂದು
ತೋರಿಸಿದ ಕವಿಮನಕೆ
ಅಶ್ರುತರ್ಪಣದ
ಭಾವಪೂರ್ಣ ಶ್ರದ್ಧಾಂಜಲಿ

-


30 APR 2020 AT 18:37

ಯಾಕೋ, ಏನೋ..!! ಹಿಂದಿ ಸಿನೆಮಾ ರಂಗದ ಹೋಳಪು ಕಳಚಿ ಹೋಗುತ್ತಿದೆ...
ವಜ್ರಗಳಂತೆ ಹೊಳೆಯುತಿದ್ದ ಕಲಾವಿದರು ಬಾರದ ಲೋಕಕ್ಕೆ ತೆರಾಳ್ತಾ ಇದ್ದಾರೆ...
ಪ್ರತಿಯೊಬ್ಬ ಕಲಾವಿದನ ಆರೋಗ್ಯ ಚೆನ್ನಾಗಿದ್ದು,ಎಲ್ಲಾರ ಕಲೆಯ ಪ್ರದರ್ಶನ ಚಿತ್ರಮಂದಿರಗಳಲ್ಲಿ ಹೊಳೆಯುತ್ತಾ ಇರಲಿ ಎಂಬುದೇ ಆ ದೇವರಲ್ಲಿ ನನ್ನ ಪ್ರಾರ್ಥನೆ....
💒🙏💒🙏💒🙏💒🙏💒🙏💒🙏💒

-


25 SEP 2020 AT 15:08

ಭಾವಕ್ಕೆ ಭಾಷೆಯ ಹಂಗೇಕೆ?
ಒಳಿತಿಗೆ ಯಾವುದೇ ಪ್ರಮಾಣ ಬೇಕೇ?
ಕೋಗಿಲೆಗೆ ಹಾಡದಂತೆ ಶಾಸನ ವಿಧಿಸಲಾಗುವುದೇ?
ಹಾಡೆನ್ನುವುದು ಮನದ ಭಾವನೆಯ ಹರಿಯುವಿಕೆ,
ನೀವು ಕಾಣದೂರಿಗೆ ಹೊರಟರೂ
ನಮ್ಮ ಮನದಿಂದ ದೂರಾಗಲು ಸಾಧ್ಯವೇ?
ಉಳಿಸಿ ಹೋದ ನೂರಾರು ನೆನೆಪು
ಎದೆಯಾಳದಲ್ಲಿ ಹಾಡಾಗಿಯೇ ಉಳಿದಿಲ್ಲವೇ?
ಮರೆಯದಿರಿ...ನಿಮ್ಮನ್ನು ನಾವು ನೆನಪಿಸಿಕೊಳ್ಳುವುದಿಲ್ಲ; ಏಕೆಂದರೆ ನೆನಪಿಸಿಕೊಳ್ಳಲು
ನಿಮ್ಮನ್ನು ನಾವು ಎಂದಿಗೂ
ಮರೆಯುವುದೇ ಇಲ್ವಲ್ಲ!

-


29 APR 2020 AT 15:44

ಸದಾ ಇಲ್ಲೇ ಬಾಳಲು ಆಗದು
ಬಂದವರು ಹಿಂದಿರುಗುವುದು ಸೃಷ್ಟಿ ನಿಯಮವು
ನಿಮ್ಮಂತೆ ನೆನಪಲುಳಿಯುವವರು ಕೆಲವರೇ ಇರಬಹುದು
ನೀವು ತೋರಿದ ಧೈರ್ಯ ಜಗಕೆ ಮಾದರಿಯಾಗಿರುವುದು....

-


13 NOV 2020 AT 10:28

ಪ್ರಾರ್ಥನಾ ಶಾಲೆ ಸ್ಥಾಪಕ,..
ಜಾತಿ ಮತಗಳ ಮೀರಿದ ಮಹಾನ್ ನಾಯಕ
ನಿನ್ನ ಕಳೆದುಕೊಂಡ e ಲೋಕ ಶೂನ್ಯ ದ ಪ್ರತೀಕ
ಉದಯಿಸದ ಕಡೆ ಪಯಣ ಬೆಳೆಸಿದೆ ರವಿ

-