"ನನ್ನ ಪರಿಚಯವಿಲ್ಲವೆ ನಿನಗೆ" ಅಚ್ಚರಿಯಿಂದ ಪ್ರಶ್ನಿಸಿದರವರು; ನೆನಪುಗಳ ಸುರುಳಿಗಳು
ಬಿಚ್ಚಿಕೊಂಡು ಗಂಟಲ ನರವುಬ್ಬಿ ಕಣ್ತುಂಬಿ
ತಲೆ ತಿರುಗಿ ಬೀಳುವಂತಾಯಿತು, ಆದರೆ ಕಲಿತ ಜೀವನಪಾಠ ಕೈಹಿಡಿದು ಆಸರೆ ನೀಡಿ ಭದ್ರವಾಗಿ ನಿಲ್ಲಿಸಿದಾಗ ಮುಗುಳ್ನಕ್ಕು ಉತ್ತರಿಸಿದೆ "ಹಿಂದಿತ್ತು!"-
ಸುಮಾ ರಮೇಶ್
352 Followers · 83 Following
ಸಾಹಿತ್ಯ ನೃತ್ಯ ಪ್ರೇಮಿ
ಪುಸ್ತಕಗಳು ಮೆಚ್ಚಿನ ಗೆಳೆಯರು
ಸಂತೋಷ ಜೀವನದ ಗುರಿ
ಬದುಕೇ ಗುರುಗಳು.
ಪುಸ್ತಕಗಳು ಮೆಚ್ಚಿನ ಗೆಳೆಯರು
ಸಂತೋಷ ಜೀವನದ ಗುರಿ
ಬದುಕೇ ಗುರುಗಳು.
Joined 21 December 2017
1 FEB 2023 AT 12:40
14 JAN 2023 AT 20:14
ನಾವು ಮರವೊಂದರ ವಿವಿಧ ರೆಂಬೆಗಳು ಹಾಗೂ ಎಲೆಗಳಾದರೂ ನಮ್ಮ ಬೇರೊಂದೇ! ಪ್ರತಿ ವರ್ಷವೂ ಉತ್ಸಾಹದಿಂದ ನಾವು ಒಗ್ಗೂಡುವುದು ನಮ್ಮ ಪರಂಪರೆಯನ್ನು ಸಂಭ್ರಮಿಸಲು! ಒಟ್ಟಾಗಿ ಉಣ್ಣುವ, ನರ್ತಿಸುವ, ಹಾಡುವ,ಆಡುವ ಹಾಗೂ ನಗುವ ಕುಟುಂಬ ಸಂತಸದ ಹೊನಲನ್ನೇ ಸೃಷ್ಟಿಸುತ್ತದೆ!
-
9 JAN 2023 AT 22:58
ಕಳೆದೆ ರಾತ್ರಿ ಬುದ್ದಿಶಾಲಿಯೊಬ್ಬರ ಬಳಿ ವಿಶ್ವ ರಹಸ್ಯವನ್ನು ತಿಳಿ ಹೇಳುವಂತೆ ಬೇಡಿಕೊಂಡೆ, ಮೆಲ್ಲನೆ ಬಲು ಮೆಲ್ಲನೆ ಅವರು ಕಿವಿಯಲ್ಲುಸಿರಿದರು "ನಿಶ್ಯಬ್ದಳಾಗು...ರಹಸ್ಯವನ್ನು ಮಾತಿನಲ್ಲಿ ಹೇಳಲಾಗುವುದಿಲ್ಲ; ಏಕೆಂದರೆ ಮೌನದೊಳಗದು ಸುತ್ತಲ್ಪಟ್ಟಿದೆ"
-
1 JAN 2023 AT 22:43
ಬಂಧುವಾತ್ಸಲ್ಯದ ಬೆಚ್ಚನೆಯ ಕೋಶದೊಳಗೆ ಕಳೆದ ದಿನವೊಂದು ಸಂತಸದ ದಿನವಾಗಿತ್ತೆನಲು ಸಾಕ್ಷಿ; ಮುಖದ ಮೇಲಿನ ರೇಷ್ಮೆಯ ನುಣುಪಿನ ಮಗುಳ್ನಗೆಗಳೇ ಸಾಕಲ್ಲವೇ?!-
30 DEC 2022 AT 12:23
ಯಾರಿಗೆ ನಿನ್ನನ್ನು ರೊಚ್ಚಿಗೆಬ್ಬಿಸುವ ಶಕ್ತಿಯಿರುವುದೋ ಅವರು ನಿನ್ನ ಒಡೆಯರಾಗುತ್ತಾರೆ.
-