Dr.DIVAKAR D   (ಡಾ.ದಿವಾಕರ್.ಡಿ)
566 Followers · 396 Following

read more
Joined 14 June 2019


read more
Joined 14 June 2019
4 MAY AT 19:37

ಪ್ರಯಾಣದ ಹಾದಿಯಲ್ಲಿ ಆದಷ್ಟು
ತಿರುವುಗಳಿರಬೇಕು..!
ಜೀವನದ ಓಟದಲಿ ಮತ್ತಷ್ಟು
ಏರಿಳಿತವಿರಬೇಕು..!!
ತಿರುವು ಇಲ್ಲದ ಹಾದಿ..!
ಏರಿಳಿತವಿಲ್ಲದ ಬಾಳು..!!
ಮನುಜನಿಗೆ ಎಂದಿಗೂ ಜೀವನದ
ಪಾಠ ಅರ್ಥವಾಗುವುದಿಲ್ಲ..!!!

-


14 MAR AT 18:16

"Education
without
morality
is a curse to
society".

-


27 JAN AT 13:50

"ತನ್ನನ್ನು ತಾನು
ಪ್ರಯೋಗಕ್ಕೊಳಪಡಿಸದ
ಮನುಜ ತಾನು
ಬದುಕಿದ್ದರೂ
ಸತ್ತಂತೆ ಬಾಳುತ್ತಾನೆ"

-


20 NOV 2024 AT 2:06

ಮುಂಜಾನೆಗೊಂದು ಮುನ್ನುಡಿ
=====================
"ಬದುಕಿನಲಿ ಜಗದೆದುರಿಗೆ ಏಕಾಂಗಿಯಾದರೂ
ಮನುಜನೆದುರಿಗೆ ತಲೆಬಾಗದಂತೆ ಬಾಳಬೇಕು"..!!!

-


19 NOV 2024 AT 10:41

ಪ್ರಸ್ತುತ ಜಗತ್ತಿನಲ್ಲಿ ಶಿಕ್ಷಣ ಮತ್ತು ಜ್ಞಾನವು
ಮಾರುಕಟ್ಟೆಯಲ್ಲಿ ವ್ಯಾಪಾರ
ಮಾಡಬಹುದಾದ ಸರಕಿನಂತಿದೆ..!!
ಇಂದಿನ ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ
ತನ್ನ ಶಿಕ್ಷಣವನ್ನು ಯಾರು ಚೆನ್ನಾಗಿ
ಮಾರಾಟ ಮಾಡುತ್ತಾರೆಯೋ ಅವರು
ಜೀವನದಲ್ಲಿ ಯಶಸ್ಸನ್ನು ಕಾಣುತ್ತಾರೆ..!!

-


19 NOV 2024 AT 10:23

ಮುಂಜಾನೆಗೊಂದು ಮುನ್ನುಡಿ
=====================
ಯಾವುದನ್ನು ಮತ್ತೆ ಪ್ರಶ್ನಿಸದೇ
ಒಪ್ಪುತ್ತೇವೆಯೋ ಅದೇ ಮೌಡ್ಯತೆ...!!
ಯಾವುದನ್ನು ಮತ್ತೆ ಮತ್ತೆ ವಿಮರ್ಶಿಸಿ
ಒಪ್ಪುತ್ತೇವೆಯೋ ಅದೇ ಮಾನವೀಯತೆ..!!

-


19 NOV 2024 AT 0:29

Education and Knowledge
is like a business in the
present world...!!!
Whoever sells his
education well in today's
competitive market
will find success in life..!!!

-


14 OCT 2024 AT 14:43

ಇಡೀ ಪ್ರಾಣಿಸಂಕಲುವನ್ನೇ
ಮೀರಿಸಬಹುದಾದಷ್ಟು
ಕ್ರೂರತೆಯು
ಅತಿ ಬುದ್ದಿವಂತ
ಜೀವಿಯೆಂದು
ಬೀಗುವ
ಮನುಜನೊಬ್ಬನಲ್ಲೇ
ಇದೆ...!!!

-


11 OCT 2024 AT 13:02

ತಿಂದುಣ್ಣುವಾಗ ತಾತ್ಸರದಿ ತುತ್ತನ್ನವನಿಕ್ಕಿದವರು
ಬಗೆಬಗೆಯ ಭಾರಿ ಭೋಜನಗಳನರ್ಪಿತಿಸಿಹರಿಂದು..!!!

-


10 OCT 2024 AT 16:13

ಮನುಜ - ಮನುಜರನ್ನೇ ವಿಂಗಡಿಸಿ
ಭೋಧನೆ ಮಾಡಿದ ಯಾವುದೇ
ಧರ್ಮ - ಧರ್ಮಗ್ರಂಥಗಳು
ದೇವರು - ದೇವರ ಸ್ತುತಿಗಳು
ಜಾತಿ - ಜಾತಿಗಳ ಕಟ್ಟುಪಾಡುಗಳನ್ನು
ಮೀರಿ ಸಮಾನತೆ ಸಾಧಿಸದವರು
ಇಡೀ ಜೀವಸಂಕುಲದ ಶಾಪಗ್ರಸ್ಥರು..!!!

-


Fetching Dr.DIVAKAR D Quotes