QUOTES ON #ವರಕವಿ

#ವರಕವಿ quotes

Trending | Latest
1 FEB 2022 AT 5:13


#ವರಕವಿ
#ಅಂಬಿಕಾತನಯದತ್ತ

--ದ.ರಾ. ಬೇಂದ್ರೆ

-


31 JAN 2019 AT 13:16

ಇಂದು ವರಕವಿ ಬೇಂದ್ರೆಯವರ ಜನ್ಮದಿನ..

-


31 JAN 2022 AT 11:42

ಜಗಚ್ಚಕ್ಷುವಾದ ಮಿಹಿರನು 'ಉತ್ತರಾಯಣ'ದ ಕಡೆ
ಸಾಗಿ ಜಗವ 'ಬೆಳಗು'ತ ಹಕ್ಕಿಗಳು 'ಗರಿ'ಗೆದರಿ
'ಮುಕ್ತಕಂಠ'ದಿಂದ 'ಚೈತನ್ಯ'ದಿ 'ಸಖೀಗೀತೆ'ಯ
'ನಾದಲೀಲೆ'ಯಿಂದ 'ಶ್ರೀಮಾತೆ'ಯ ನೆನೆಯುತ್ತ
'ವಿನಯ'ದಿ 'ಉಯ್ಯಾಲೆ'ಯಲ್ಲಿ 'ಹಾಡುಪಾಡು'ತ
'ಮೇಘದೂತ'ನು ನಾಚುವಂತೆ 'ಗಂಗಾವತರಣಿ'ಸುವಂತೆ
'ಒಲವೆ ನಮ್ಮ ಬದುಕೆಂದು' ಸಾಹಿತ್ಯಕ್ಕೆ 'ನಮನ' ಸಲ್ಲಿಸಿ
ರಸವೆ ಜನನ, ವಿರಸವೆ ಮರಣ, ಸಮರಸವೆ ಜೀವನ
ಎಂದು ಜೀವನವನ್ನು ಕುರಿತು ಪರಿಣಾಮಕಾರಿಯಾಗಿ
ಹೇಳಿದ ಧೀಮಂತ ಕವಿ, ಉತ್ತಮ‌ ವಾಗ್ಮಿ
ಜ್ಞಾನಪೀಠ ಪ್ರಶಸ್ತಿಯ ಪುರಸ್ಕೃತರಾದ
ವರಕವಿ ದ.ರಾ.‌ಬೇಂದ್ರೆಯವರ ಜನುಮ
*************************
ದಿನದ ಶುಭಾಶಯಗಳು.
💐💐💐💐💐💐💐💐💐💐💐

-



ವಿಶ್ವಮಾನವರ ನಾಡು
ಕಲಾಪೋಷಕರ ಬೀಡು.

-


31 JAN 2020 AT 21:07

ಬೇಂದ್ರೆ ಕುರಿತು ಹೀಗೊಂದು ಕಥೆ...

ಒಂದ್ಸಲ ಬೇಂದ್ರೆ ಅವರ ಆತ್ಮೀಯ ಸ್ನೇಹಿತ ಸತ್ತು ಹೋಗಿರುತ್ತಾರೆ.
ಅವರ ಮಣ್ಣು ಮಾಡುವ ಸಂಧರ್ಭದಲ್ಲಿ ಯಾರೋ ಒಬ್ಬರು ಕಣ್ಣೀರು ಹಾಕುತ್ತಾ ಹೇಳಿದರಂತೆ
"ಹೆಂಗ್ ಹೂತಾರ್ ನೋಡ್ರಿ ಅಜ್ಜಾರ ಅವರನ್ನ" ,
ಅದಕ್ಕೆ ಬೇಂದ್ರೆ ಹೀಗ್ ಹೇಳಿದ್ರಂತೆ...
"ಅವನನ್ನ ಹೂತಿಲ್ಲೋ ಹುಚ್ಚ ಖೋಡಿ ಅವನನ್ನ ಬಿತ್ತ್ಯಾರ ಅಂತ".

-


31 JAN 2020 AT 3:25

“ಕನ್ನಡದ ಅಶರೀರವಾಣಿಯು
ಸಾವಿರ ಬಾಯಿಗಳಿಂದ
ತನ್ನ ಕನಸನ್ನು ಕನ್ನಡಿಸುತ್ತಿದೆ. 
ಆ ಸಾವಿರ ಬಾಯಿಗಳಲ್ಲಿ
ನನ್ನದೂ ಒಂದು. 
ಅದೇ ನನ್ನ ಧನ್ಯತೆ."
ಎಂದು ಕನ್ನಡದ ಕುಡಿಯಾಗಿ
ಬೀಗಿದ ಬೇಂದ್ರೆ ತಾತನ
ನೆನಪಿನ ಇತಿಹಾಸದ
ಪುಟಗಳ ತಿರುವುತ್ತಾ....

(CAPTIONS!!!)

-



ನವೋದಯ ಕಾಲದ ರಸಿಕರ ಕವಿ
ಕನ್ನಡ ನಾಡಿನ ವರಕವಿ
ಕನ್ನಡದ ಕಥೆ, ಕವನ, ವಿಮರ್ಶೆಗಳಲ್ಲಿ ಹೊಸ ಅಲೆಯನ್ನೇ ಸೃಷ್ಟಿಸಿದ ಅತ್ಯುತ್ತಮ ಕವಿ
'ಬೆಳಗು ಜಾವ' ಎಂಬ ಪದ್ಯದಿಂದ ಎದ್ದೇಳಿ, ಮೇಲೆಳಿ ಎಂದು ಎಚ್ಚರಿಸಿದ ಕವಿ
'ಹಕ್ಕಿ ಹಾರುತ್ತಿದೆ ನೋಡಿದೀರಾ' ಎಂದು ಹೇಳುತ್ತಾ ಜೀವನದ ಕಾಲಚಕ್ರವನ್ನು ಸಾರಿದ ತತ್ವ ಕವಿ
ಸಾವಿರಾರು ಸಣ್ಣ ಪುಟ್ಟ ಕವಿಗಳಿಗೆ ದಾರಿದೀಪವಾಗಿ, ಆಶ್ರಯಕೊಟ್ಟು ಸೂರ್ಯನಂತೆ ಬೆಳಕು ನೀಡಿದ ರವಿ ಕವಿ
ಅವರೇ "ದ. ರಾ. ಬೇಂದ್ರೆ" ಎಂದೆ ಪ್ರಸಿದ್ಧರಾಗಿರುವ "ದತ್ತಾತ್ರೇಯ ರಾಮಚಂದ್ರ ಬೇಂದ್ರೆ"

-



ನಿನ್ನಂತಾಗಬೇಕು ದೊರೆ ನಾ ನಿನಾಗಬೇಕು ಬೇಂದ್ರೆ

-


31 JAN 2021 AT 8:41


ಅವಾಗ ಬೇಂದ್ರೆ ಅಜ್ಜಾ ಅವರು ಕವನಗಳನ್ನು ಬರೆಯುವಾಗ
ಎಷ್ಟೋ ಜನರು ಹೀಯಾಳಿಸಿ ಅಂತಿಂದ್ರಂತ -ಧನ ಕಾಯೊರು ಹಾಡೊ , ಹಾಡು ಬರದಾನ ಅಂತ ,
ಮುಂದ ಅವರಿಗೆ ಜ್ಞಾನಪೀಠ ಪ್ರಶಸ್ತಿ ಸಿಕ್ಕ ಮ್ಯಾಗ ಅವರ ಹಾಡುಗಳನ್ನು ಧನ ಕಾಯೋರು ಕೂಡ ಹಾಡುತ್ತಾರ ಅಷ್ಟೊಂದು ಪ್ರಸಿದ್ಧಿ ಅವರ ಕವನಗಳು ಅಂತ ಅದೇ ಎಷ್ಟೋ ಜನ ಅಂದ್ರಂತ ...
ಅದಕ್ಕ ಜನ ಬದಲಾಗತಾರ ವಿನಹ ಕಾವ್ಯ ಕವನ ಕಥೆಗಳು ಎಂದೂ ಬದಲಾಗೋದಿಲ್ಲ ನೋಡ್ರಿ.

-


31 JAN 2020 AT 8:47

ಸಾಹಿತ್ಯ ಭೂಮಿಯಲ್ಲಿ ಪದಗಳ ಬಿತ್ತಿದ ಕೃಷಿಕ
ನವೋದಯ ನೌಕೆಯ ನೆಡೆಸಿದ ನಾವಿಕ
ಸಾಧನಕೇರಿಯಲ್ಲಿ ಸಾಹಿತ್ಯವ ಪೋಷಿಸಿದ ಪೋಷಕ
ಪಾತರಗಿತ್ತಿ ಪಕ್ಕ ನೋಡಿದೇನ ಅಕ್ಕ ಎಂದುಲಿದ ಗಾಯಕ

ಅಕ್ಷರಗಳ ನೂಲಿಂದ ನೇಯ್ದ ಕನ್ನಡಮ್ಮನಿಗೆ ಸೀರೆಯ
ಪದಗಳ ಪೋಣಿಸಿ ತೋಡಿಸಿದ ಸಾಹಿತ್ಯದೇವಿಗೆ ಮಾಲೆಯ
ವರ್ಣದಳಗಳಿಂದ ಸಿಂಗರಿಸಿದ ಕನ್ನಡತಾಯಿಯ
ಇಳಿದು ಬಾ ತಾಯಿ ಇಳಿದು ಬಾ ಎಂದ ಕರುನಾಡತನಯ

ಮಾತೃ ಭಾಷೆ ಮರಾಠಿಯಾದರೇನು?
ಶ್ವಾಸಿಸಿದ ಕನ್ನಡವನು ಉಸಿರಿರುವತನಕ
ಓ ಅಂಬಿಕಾತನಯ!
ಕನ್ನಡ ಭಾಷೆಗೆ ನೀ ಹೊನ್ನ ತಿಲಕ

ಸಮರಸವೇ ಜೀವನವೆಂಬ ತತ್ವವ ಸಾರಿದೆ ಜಗಕೆ
ಜ್ಞಾನಪೀಠವೇ ತಲೆಬಾಗಿತು ನಾಕುತಂತಿಯ ನಾದಕೆ
ಸಾಹಿತ್ಯ ಬೆಳಕ ಚೆಲ್ಲಿ ಮರೆಯಾದ ಓ ಬೆಳಕೇ!
ಮತ್ತೆ ಈ ನೆಲದಲ್ಲಿ ಜನಿಸಿ ಬಾ ಎಂದು ನಿನ್ನಾರಾಧಕನ ಕೋರಿಕೆ

-