ಆ ನಗು.!!
ಕಿಲ ಕಿಲ ಆ ನಗು
ಆಶಾಕಿರಣದ ಆ ನಗು
ರಾಜಭಾವದ ಆ ನಗು
ಆಕರ್ಷನೆಯ ಆ ನಗು
ಚಿಂತೆಯನ್ನು ನಾಚಿಸುವಂತಹ ಆ ನಗು
ಪದಗಳೇ ಜಾರುತ್ತಿವೆ ವರ್ಣಿಸಲು ಆ ನಗು
ಎಷ್ಟೆಂದೂ ನಾ ಹೇಳಲಿ ಆ ನಗು,
ಎತ್ತಿ ಆಡಿಸುವವರ ಮೊಗದಲ್ಲೂ ಬೀರುತ್ತಿದೆ ಆ ನಗು.!
-
ಎಲ್ಲ ಸಂದರ್ಭದಲ್ಲೂ ಜೊತೆಗಿರುವ ವಿಜಿ & ಸುಷ್ಮಾ.!
ಸದಾ ಪ್ರೀತಿ ಕಾಳಜಿಯಿಂದ ಆದಿನ ಜೋಪಾನ ಮಾಡುವ ನಿಧಿ..!
ನಿಧಿಯ ನೆನಪಿನಲ್ಲೇ ಎಲ್ಲೆಡೆ ನಿಧಿಯನ್ನೇ ಕಾಣುವ ಆದಿ..!
ಶಿಖರದಷ್ಟು ಪ್ರೀತಿಯಿದ್ದರೂ ನಿಧಿ-ಆದಿ ಆದಿ-ನಿಧಿಯರ ಬಾಂಧವ್ಯ ಕಂಡು ತನ್ನ ಪ್ರೀತಿಯನ್ನು ತ್ಯಾಗಮಾಡಿದ ಸಿಹಿ..!
ಸಿಗಬೇಕು ವಿಜಿ & ಸುಷ್ಮಾ ತರಹ ಸ್ನೇಹಿತರು...
ಸಿಗಬೇಕು ನಿಧಿಗೆ ಆದಿ, ಆದಿಗೆ ನಿಧಿ ಎಂತಹ ಜತೆಗಾರ ಸಂಗಾತಿ...
ಸಿಗಬೇಕು ಸಿಹಿ ತರಹ ಸಂತಸದಿಂದ ಇರಲಿ ಎಂದು ಆಶಿಸುವವರು...
#ಲವ್ ಮಾಕ್ಟೇಲ್ ೨-
ಜೀವನ..!
ಸವಾಲುಗಳನ್ನು ಎದುರಿಸೋದಾ...?
ಸಾಮರ್ಥ್ಯವಿದ್ದರೂ ಸುಮ್ಮನಿರುವುದಾ...?
ತನ್ನ ಕೆಲಸಕ್ಕಾಗಿ ಮತ್ತೊಬ್ಬರನ್ನು ಕಾಯುವುದಾ...?
ಗೊತ್ತಿದ್ದರೂ ಗೊತ್ತಿಲ್ಲದವರ ಇರೋದಾ...?
ನಿತ್ಯ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಾ ಸಾಗುವುದಾ...?
ನಿತ್ಯ ಪರೀಕ್ಷೆಯ ಜಂಜಾಟಗೊಳಡನೆ ಸಾಗೋಣ, ಸಾಗಬೇಕು, ಸಾಗಲೇಬೇಕು.....!-
ನನ್ನ ಒಲವೇ,
ನಿನ್ನ ನೆನೆಯದ ದಿನಗಳಲ್ಲಿಲ್ಲಾ,
ನೆನೆದಾಗಲೆಲ್ಲಾ ಫೋಟೋ ನೋಡ್ತಾ ಆನಂದಿಸುವುದು,
ಮಾತನಾಡಿಸಲು ಬಯಕೇ ಹುಟ್ಟುವುದು,
ಕರೆ ಮಾಡಲು ಪ್ರಯತ್ನಿಸಿದಾಗ ಸಂಕೋಚ ಅಡ್ಡಿಯಾಗುವುದು,
ಕುಳಿತ್ತಿರುವೇ ನಿನ್ನನೇ ಕರೆ ಮಾಡೆಂದೂ.
ಕಾತುರದಿಂದ ಇರುವೇ ಭೇಟಿ ಮಾಡಲು,
ಭೇಟಿಯಾದಾಗ ಮಾತೇ ಹೊರಡದೂ....!-
ನಿನ್ನ ಅಕ್ಕ-ಪಕ್ಕದಲ್ಲಿ ಎಷ್ಟೇ ಜನ ಇದ್ದರು,
ನಿನ್ನ ಕಾಳಜಿ ವಯಿಸುವ, ಆ ಒಂದು ವ್ಯಕ್ತಿ ಇಲ್ಲ ಅಂದ್ರೆ,
ಆ ಕ್ಷಣ ನಿನಗೆ ನೀನು ಒಬ್ಬಂಟಿ ಎನಿಸಿವುದು....
ಆ ವ್ಯಕ್ತಿ ಬೇರೆ ಯಾರು ಅಲ್ಲ......
ಅವಳು ನನ್ನ ಮೊದಲು ಗುರು ನನ್ನ ಪ್ರೀತಿಯ ಅಮ್ಮ❤️-
ಭುವನೇಶ್ವರಿ ದೇವಿಯ ಉತ್ಸವ
ಬಂತು ಬಂತು ರಾಜ್ಯೋತ್ಸವ, ಬಂತು ಬಂತು ರಾಜ್ಯೋತ್ಸವ,
ಕನ್ನಡಿಗರ ಮನಗಳು ಕುಣಿಕುಣಿದಾಡಿದವು, ಆಚರಿಸಲು ಉತ್ಸವ ಆಚರಿಸಲು ಉತ್ಸವ.
ಸಣ್ಣ ಪುಟ್ಟ ಕವನಗಳು, ಕಥೆಗಳು ಬೆಳೆಯಾಗಿ ಬಂತಲ್ಲಾ ಬಂತಲ್ಲಾ,
ಕನ್ನಡ ತಾಯಿ ಜ್ಞಾನವ ಕಡಿಮೆಯ ಮಾಡಿಲ್ಲ ಮಾಡಿಲ್ಲ.
ಕವಿಗಳು ನೀಡಲು ಮುತ್ತಿನ ಕಾವ್ಯಗಳು,
ಭುವನೇಶ್ವರಿ ದೇವಿಯು ನೀಡಲು ತುತ್ತಿನ ಪದಗಳು,
ಮೂಲೆಗೆ ಬಿದ್ದ ಲೇಖನಿ, ಮುಂದಕ್ಕೆ ಮುಂದಕ್ಕೆ ಬರೆಯಲು.
ಕಾವ್ಯದ ಸ್ವಾರಸ್ಯ ಹೀರಲು,
ತೆರೆಯಿತು ಪುಸ್ತಕದ ಬಾಗಿಲು,
ಕನ್ನಡಿಗರು ಹರುಷದಿ ನಲಿಯಲು,
ಬಂದಿದೆ ಹಬ್ಬದ ಹೊನಲು.-
ಜೀವನ ಎಷ್ಟು ವಿಚಿತ್ರ
ಒಬ್ಬರ ಹತ್ತಿರದಲ್ಲೇ ನಾವು ಇದ್ದರು, ಅವರಿಗೆ ನಾವು ದೂರದಲ್ಲಿ ಇದ್ದಂತೆ..
ಇನ್ನೊಬ್ಬರಿಗೆ ದೂರದಲ್ಲಿ ನಾವು ಇದ್ದರು , ಅವರಿಗೆ ನಾವು ಹತ್ತಿರದಲ್ಲೇ ಇದ್ದಂತೆ..-
ದೇಹದ ಭಾರ ಹೆಚ್ಚಾದರೆ,
ದೇಹಕ್ಕೆ ಮಾತ್ರ ಸುಸ್ತಾಗಬಹುದು.
ಮನಸ್ಸಿನ ಭಾರ ಹೆಚ್ಚಾದರೆ,
ದೇಹ ಮತ್ತು ಮನಸ್ಸು ಎರಡೂ ಕುಸಿದುಬಿಡುತ್ತದೆ.
ದೇಹ ಚಿನ್ನವಿದ್ದಂತೆ, ಮುರಿದರೆ ಸೇರಿಸಬಹುದು,
ಆದರೆ ಮನಸ್ಸು ಗಾಜು ಇದ್ದಂತೆ,
ಒಡೆದರೆ ಸೇರಿಸಲಾಗದು........-
ಅನಿರೀಕ್ಷಿತವಾಗಿ ನೀನು ನನ್ನ ಭೇಟಿಯಾದೆ...,
ನನ್ನ ಅರಿವಿಲ್ಲದೆ ನನಗೆ ನೀ ಹತ್ತಿರವಾದೆ..,
ನನ್ನ ಕನಸಿಗೆ ನೀ ಏಣಿಯಾಗಿ ಸಹಕರಿಸಿದೆ..,
ನನ್ನ ಕನಸಿಗೆ ನೀ ದಾರಿತೋರಿಸಲು ಪ್ರಯತ್ನಿಸಿದೆ,
ತಪ್ಪು ಮಾಡುವಾಗ ಎಚ್ಚರಿಕೆಯ ಗಂಟೆಯಾದೆ...,
ಇದೇ ನಮ್ಮಲ್ಲಿರುವ ಸ್ನೇಹದ ಶಕ್ತಿ...
ನಮ್ಮಿಬ್ಬರ ಗೆಳೆತನದ ಮೊಳಕೆ ಚಿಗುರೊಡೆದು,
ಬೃಹತಾದ ಗಟ್ಟಿಯಾದ ಮರವಾಗಿ ಬೆಳೆದಿದೆ, ಬೆಳೆಯುತ್ತಿದೆ,
ಅರಿವಿಲ್ಲದೆ ನೀನು ನನ್ನ ಶಕ್ತಿಯಾದೆ....,
ಕೊನೆಯದಾಗಿ ನಾ ಇಷ್ಟು ಹೇಳಬಲ್ಲೇ
ನಮ್ಮಿಬ್ಬರ ಗೆಳೆತನವನ್ನು ಯಾರಿಂದಲೂ ಬೇರೆ ಮಾಡಲು ಸಾಧ್ಯವಿಲ್ಲ.
-
ಸೂರ್ಯ ಮುಳುಗಿದರೆ,
ಚಂದಿರ ಉದಯವಾಗುತ್ತಾನೆ.
ಸೂರ್ಯ ಉದಯವಾದರೆ,
ಚಂದಿರ ಮುಳುಗುತ್ತಾನೆ.
ಒಬ್ಬ ಹುಟ್ಟಿದ್ದರೆ,
ಇನ್ನೊಬ್ಬ ಸಾಯ್ತಾನೆ.
ಒಳ್ಳೆಯ ಕಾರ್ಯ ಜನಿಸಿದರೆ,
ಕೆಟ್ಟ ಕಾರ್ಯ ನಾಶವಾಗುತ್ತದೆ.
ಜನನ ಮರಣದಲ್ಲಿ ಅಂತ್ಯವಾದರೆ,
ಮರಣ ಜನನದಲ್ಲಿ ಪ್ರಾರಂಭವಾಗುತ್ತೆ.-