ಬ್ಯಾನ್ 14th ಫೆಬ್
ಗುಡಿಯಲ್ಲಿ ಕೂತು ಹೊಡಿತಿರಬೇಕಾದ್ರೆ ಹರಟೆ
ದೂರದಲ್ಲಿ ಹುಡುಗರು ಹಾಕೊಂಡು ಕುಣಿತಿದ್ರು ತಮ್ಟೆ
ಹತ್ರರ ಹೋಗಿ ನೋಡಿದೆ ಸಿಂಗಲ್ ಸಂಘಟನೆ ಅಂತೆ
ಫೆಬ್ರುವರಿ 14ತ್ ನಾ ಬಂದ್ ಮಾಡಿಸಬೇಕು ಅಂತೆ ||
ಮಾಡಿಸಬೇಕು ಅಂತೆ..
ಹುಡುಗಿಗೆ ಉಣಿಸುವಾಗ ಹಾಲುಸಕ್ಕರೆ
ಮಾತಾಡಿದ್ರೆ ಅಂತಾನೆ ಸುಮ್ನಿರೋ ಕೊಕ್ಕರೆ
ಮೂಡಲ್ಲಿ ಹೋದ್ರೆ ಬಾಯಿಗೆ ಸಕ್ಕರೆ
ಹಮೆ ಸಿಂಗಲ್ ಹೂ ಮೈ ಕ್ಯಕರೆ
ಮೈ ಕ್ಯಕರೇ..
ಕೈಗೆ ಹಾಕೊಂಡು ರಂಗು ರಂಗಿನ ಮೆಂದಿ
ಕೈಗೆ ಕೊಡುವಸ್ಟ್ರಲ್ಲಿ ಚಿಲ್ಲರೆ ಬಂದಿ
ತಿನಿಸಿ ದಾವಣಗೆರೆ ಬೆಣ್ಣೆ ದೋಸೆ
ಲವರ್ಸ್ day ಬರ್ತಿದೆ ಏನಾದ್ರೂ ಮಾಡೋ ಆಸೆ
ಕೊನೆಯದಾಗಿ ಹೇಳ್ತೀನಿ ನಿಂಗೆ ಒಂದು ಸಣ್ಣ ಕಥೆ
ನಾಳೆ ಇನ್ಸ್ಟದಲ್ಲಿ mention ಮಾಡಿದ್ಲು ಅಣ್ಣ ಅಂತೆ ....
— % &-
😊.. 😊 2nd winner of ಮಲೆನಾಡ ಕವಿ contestants 🤩 ❤️😍 .. ..... read more
ಕನ್ನಡದ ಹಣ್ಣು ಹಂಚಿ
ಬಂದರೂ, ಬಾರದಿದ್ದರೂ ಬೇರೆ ಭಾಷೆಯ ಮಳೆ
ಕನ್ನಡವ ಬೆಳೆಸುವುದು ನಿಲ್ಲಿಸದಿರು ಹಸುಳೆ
ಕನ್ನಡ ವಿರೋಧಿಯ ನಾಲಿಗೆ ಕರ್ಚಿಕಳೆ
ತಲುಪಿಸು ಕನ್ನಡವ ಉದಾತ್ತರೊಳ್ ನಾಳೆ
ಹಕ್ಕಿ ಅಲೆದಾಡಿ ಅನ್ನದ ಅಗುಳು ಹುಡುಕಿದಂತೆ
ಕನ್ನಡವ ನಾವೂ ಹುಡುಕುವ ದುರ್ಧೈವ ಬಾರದಿರಲಿ
ಹಕ್ಕಿ ಆಹಾರವ ಹುಡುಕುವಾಗ ತೋಟ ಸಿಕ್ಕಂತೆ
ಖಂಡ ಸುತ್ತಿದಾಗ ಕನ್ನಡದ ಹಣ್ಣು ಸಿಗಲಿ-
ಪೇಳವನಿಗೆದ್ದವರಾರು ಅವನಿಯೊಳ್ ಸೋತವರಾರು
ನಕ್ಕೆಳುವವರ ಸಂಘದೊಳ್ ಮೌನವೇಕೆ ಮೌನದ ಸಂಘದೊಳ್
ನಗುವೇಕೆ ಬಂದಂತಾಗು ಬಂದದ್ದು ಬರಲಿ ನೋನಿಂಗಿರಲಿ
ಜಾಗ ಬಿಡಿಸಲಾಗದ ಕಗ್ಗಂಟು - ಕುಮಾರ ಮಂಕುತಿಮ್ಮ-
ಹಸಿವು ಮಾತಾಡಿತು
ಹಸಿದ ದಿನದ ಹಿಂದೆ ಹುಸಿ ಜನರ ಮುಂದೆ
ಹಾಸಿದ ಹಾಸಿಗೆಯ ಕೆಳಗೆ ಸಾಸಿವೆ ಕಾಳ ಒಳಗೆ
ಹಸನು ಹೃದಯದಲ್ಲಿ ನೂರೆಂಟು ನೋವು ಕಾಡಿತು
ಹುಚ್ಚರ ಸಂತೆಯಲ್ಲಿ ಜಾಣ ಹಸಿವು ಮಾತಾಡಿತು
ಬಿಸಿಲು ನೆತ್ತಿಯ ತಟ್ಟಿ ನೆರಳು ನೆಲ ಮುಟ್ಟಿ
ನಿನ್ನೆಯೂ; ನಾಳೆಯ ನಿನ್ನೆಯಾಗಿ ದಿನ ಮಾಗಿ
ಕಾಗೆ ಬಣ್ಣದ ಹಂಸದ ಜನರ ಮಾತಿನಲ್ಲಿ
ಹರಿದ ಬಟ್ಟೆ, ಬಟ್ಟೆಯೂ ಹಸಿವ ಬಗ್ಗೆ ಮಾತಾಡಿತು
ದೇಹಕ್ಕೆ ಹಸಿವಾಗಿತ್ತು ನೆರಳಿಗೆ ಹೊಟ್ಟೆ ತುಂಬಿತ್ತು
ದುಬಾರಿ ಹಸಿವು ಪ್ರತಿಬಾರಿ ದೇಹಕ್ಕೆ ಖಾಸಗಿಯಾಗಿತ್ತು
ಹುಣ್ಣಿಮೆಯ ಬೆಳಕು ಹೊಲಿದರು ದಿನ ಸವಿದರು
ನಾಲಿಗೆಯಿಲ್ಲದ ಹಸಿವು ಮತ್ತೆ ಮತ್ತೆ ಮಾತಾಡಿತು!!
ಬಿಸಿಲು ರೂಪದಲ್ಲಿ ಬೇನೆ; ಹಸಿವೂ ರೂಪದಲ್ಲಿ ನಾಳೆ
ಹಸಿವೆಂಬ ರೋಗ ಮುಪ್ಪಿನೋರೆಗು ಮಾತಾಡಿತು....-
ಅಂಬುಚರಂಗಂಬೋನಿ ಪವನಂಗೆವಟ ಮರ್ಕಟಂಗೆ
ಕಾಯ ತಾತ್ಪರ್ಯ ಅಂಬುಚರಂಗೆ ಅಂಬುಜ
ಮನುಜಂಗೆ ಬಂಗಾರಂ ಪವನಂಗೆ ಪರ್ವತ ಮರ್ಕಟನಿಂಗೆ ನಿರ್ಜೀವ ಸೀಮಿತವಲ್ಲೊ - ಕುಮಾರ ಮಂಕುತಿಮ್ಮ-
ಉತ್ತಮನಾಚರಿಸಿದೊಡೆ ಉತ್ತಮರೆನದಿರು ಉತ್ತುಂಗ
ಕೆರಿಸದಿರು ಉದಾತ್ತರೊಳ್ ಉತ್ತದೊಳ್ ವಾಸವಿವುದು
ಊರಗ, ಹುಳುವಲ್ಲ ಉಳಿ ತಿಳಿವ ನಾಲಿಗೆ
ವಿಷವಿವುದು ಹೂವಲ್ಲ- ಕುಮಾರ ಮಂಕುತಿಮ್ಮ-
ಕಂಡೆನು ಆ ತಿರುಕನ ಮಂಕುತಿಮ್ಮನ ಕುವರನ
ಕನ್ನಡಿಯ ಮುಂದೆ ಅರಿಯದ ಪದಗಳ ಹಿಂದೆ
ಬೇರಿಲ್ಲದೆ, ಬಿಸಿಲು ಬಿಳದೆ ಬೆಳೆಯುತ್ತಿರುವವನ
ಬಿಸಿ ಉಸಿರು ಬಸಿರಲ್ಲಿ ಬಂದವನ ಕಂಡೆನು ಕಣ್ ಮುಂದೆ-
ನಿನ್ನೆ,ಬಗ್ಗೆ ನಿಮ್ ಬಗ್ಗೆ ಕೆಳದಿರೀ
ನನ್ ಬಗ್ಗೆ ನಾಳೆ ಬಗ್ಗೆ ನನಗೇ ಗೊತ್ತಿಲ್ಲಾ-
ಕಳಿಸಿ ತಾರೆ ಮಿಂಚಂಚೆ ತಾರೆಗೆ ಅಂಚೆ
ಸೇರಲೆಂದು ತಾನು ತಾರೆಯ ಮೂಗಿನ ಅಂಚೆ
ಮೂಗುತಿಯ ಮುತ್ತು ಮಿನುಗೋಕೆ ಇಡೀ ಹೊತ್ತು
ಸೇರಿ ಧರಿತ್ರಿಯ ಅದು ಮಿನುಗುವುದು ನಿಲ್ಲಿಸೋಲ್ಲ ಯಾವತ್ತು
ಏರಿ ಬರುತ್ತಾನೋ ಬೆಟ್ಟವ ಸೂರಿಯ ನಾರಿಯ
ಹಣೆಯ ಬೊಟ್ಟಾಗಿ
ಸುತ್ತಿ ಬರುತಾನೋ ಚಂದಿರ ಚಲುವೆಂಬ ಕೇನೆಯಿಂದ
ಮಾಡಿದ ಸಿರಿಯ ಅಂದವಾಗಿ
ಕಳೆದೊದರು ಕಳೆದೋಗಬಹುದು ನಿಮ್ಮೆಲ್ಲ ನಾಳೆ ಪುನಃ ಪುನಃ
ನೆನೆಯುತ್ತಾ ಕೂತರೆ ಅವರ ಅಂದವನ್ನೆ
ಕಂಡಂಗ ಭೃಂಗ, ನೋಡಲು ಸಾರಂಗ ಕಾಳಜಿ ಜೇನಿನಂಗ
ಹಂಸದ ಬಣ್ಣವೋ,ಸೋಸಿದ ಗಂದವೋ,ಸೂಸುವ ಚಂದದಂಗ
ಸದ್ಭಾವ, ಸುಂದರತೆ, ಗುಣವಂತಿಕೆ, ನಿಮ್ಮದೇ ವಶ
ಸಾವದಾನದಿ ನಿಮ್ಮನ್ನ ಸೇರಲು ಕಾದಿರುವುದು ಜಸ-