ಜೀವ ಪಣಕ್ಕಿಟ್ಟು ಸೇವೆಗಯ್ಯುವ ವೈದ್ಯ
ನಮ್ಮನ್ನು ಕಾಪಾಡುವ ಜೀವನಾರಾಧ್ಯ
ಇಂದು ನಿಮ್ಮ ಸೇವೆ ಅತ್ಯಗತ್ಯ
ನಮಿಸುವೆವು ನಿಮಗೆ ನಿತ್ಯ
ದಣಿವರಿಯದೆ ಹಗಲಿರುಳು ಶ್ರಮಿಸುತ್ತಿರುವ ವೈದ್ಯರು
ನೀವೇ ಜೀವ ಉಳಿಸುವ ಪ್ರತ್ಯಕ್ಷ ದೇವರು
ಅನಾರೋಗ್ಯದಿ ಓಡೋಡಿ ಬರುವರು ಜನ
ನೀಡುವಿರಿ ಪ್ರೀತಿಪೂರ್ವಕ ಉಪಚರಣ
ವಿಶ್ವ ಆರೋಗ್ಯದ ಸೇನಾನಿ
ನಿಮ್ಮ ತ್ಯಾಗ ಸತ್ಕರ್ಮಗಳಿಗೆ ಎಂದೆಂದೂ ಚಿರಋಣಿ
ರೋಗಮುಕ್ತ ಸಮಾಜದತ್ತ ಇಟ್ಟ ದಿಟ್ಟತನ
ಸ್ವಸ್ಥ ಬದುಕು ನಿರ್ಮಿಸಲೆಂದು ಹರಸುವೆವು; ನಿಮ್ಮ ಜಾಣತನ
ನಮ್ಮೆಲ್ಲರ ಅಚ್ಚುಮೆಚ್ಚಿನ ಕೊರೋನಾ ವಾರಿಯರ್ಸ್
ದೇವರಲ್ಲಿ ಪ್ರಾರ್ಥಿಸುವೆವು; ನಿಮ್ಮ ಬಾಳ ತುಂಬ ಕಲರ್ಸ್-
ಕೊರೊನ ವೈರಾಣುವಿನಿಂದ ನಲುಗುತಿಹ
ಜಗವನ್ನು ರಕ್ಷಿಸಲು ಸತತವಾಗಿ ಹೋರಾಡುತ್ತಾ
ತಮ್ಮ ಪ್ರೀತಿ ಪಾತ್ರರಿಂದ ದೂರವಿದ್ದು
ಹಗಲಿರುಳ ಪರಿವೆಯಿಲ್ಲದೆ ಹಸಿವನ್ನೂ ಲೆಕ್ಕಿಸದೆ
ವೈರಾಣುಗಳ ಹಾವಳಿಯಿಂದ ತಮ್ಮನ್ನು ರಕ್ಷಿಸಲು ಅವೆಷ್ಟೋ ಕವರ್,ಕೈಗವಚ, ಮಾಸ್ಕುಗಳನ್ನು ಧರಿಸಿದರೂ ಕೊನೆಗೆ ತಾವೇ ಕೊರೊನಾಗೆ ಬಲಿಯಾಗುತ್ತಿರುವ ವೈದ್ಯಲೋಕ...
ಆರೋಗ್ಯಯುತ ಸಮಾಜದ ನಿರ್ಮಾಣಕ್ಕೆ ಶ್ರಮಿಸುತಿಹ ಎಲ್ಲಾ ವೈದ್ಯರಿಗೂ ನಮನಗಳು-
ವಿಜ್ಞಾನ ಸೃಷ್ಟಿಯ ಸಂಧಿಸುವ ಬಿಂದು
ಶೋಧನೆಯಲಿ ಹೊಸ ವಿನ್ಯಾಸ ಪಡೆವ
ನಿಬ್ಬೆರಗಾಗುವ ಆವಿಷ್ಕಾರಗಳು !!!
ರಸ ಚಿಂತನೆಯಲಿ ಪರಿಕಲ್ಪನೆ
ಘನೀಕರಿಸುವ ಜ್ಞಾನ ತಂತ್ರ.....
ಕ್ಲಿಷ್ಟತೆಯ ಬಿಡಿಸುತ
ಕ್ರೀಯಾಶೀಲ ಅನ್ವೇಷಣೆಯಲಿ
ವಿನೂತನ ಸೂತ್ರಗಳು...
ನವ ತಾಂತ್ರಿಕ ರೂಪಗಳು...
ತಂತ್ರಜ್ಞಾನದ ನಿಲುವು, ತತ್ವ,
ಮಾನವತೆಯ ತಳಹದಿಯಲಿ
ಪ್ರಕೃತಿಯ ಜೊತೆ-ಜೊತೆಯಲಿ
ಸಹೃದಯತೆಯಲಿ ಸಾಗಿದರೆ,
ವಿಶ್ವದ ಸಹಜ ಪ್ರಗತಿಯಲಿ
ಬೆಸೆಯುವುದು ಶಾಂತಿ....
-Prashanthi S
-
ಪ್ರಪಂಚದೆಲ್ಲೆಡೆ ಕೊಂಡಾಡುತ್ತಿದೆ ಇಂದು
ಮೇಜರ್ ಧ್ಯಾನ್ ಚಂದ್ ರ ಗುಣಗಾನ
ಸ್ವಾತಂತ್ರ್ಯಬರುವುದಕ್ಕಿಂತ ಮುಂಚೆಯೇ
ಭಾರತಕ್ಕೆ ಹ್ಯಾಟ್ರಿಕ್ ಗೋಲ್ಡ್ ಮೇಡಲ್ಗಳನ್ನು
ತಂದುಕೊಟ್ಟ ದೇಶದ ಹೆಮ್ಮೆಯ ಪುತ್ರ ,
ಜರ್ಮನಿಯ ಸರ್ವಾಧಿಕಾರಿಯನ್ನು
ಬೆರಗುಗೊಳಿಸಿದ ಮಾಂತ್ರಿಕ
ಭಾರತೀಯ ಹಾಕಿ ಕ್ರೀಡೆಯನ್ನು ಉತ್ತುಂಗಕ್ಕೆ
ಏರಿಸಿದ ಮಹನ್ ಚೇತನ ಧ್ಯಾನ್ ಚಂದ್.
💐"ಹಾಕಿ ಗಾರುಡಿಗ
ಧ್ಯಾನ್ ಚಂದ್ ರ ಜನ್ಮದಿನ,
ರಾಷ್ಟ್ರೀಯ ಕ್ರೀಡಾದಿನದ ಶುಭಾಶಯಗಳು"💐
_ ಸುರೇಶ.ಆರ್.-
ಭಾರತೀಯರಲಿ
ವಿಜ್ಞಾನವ
ಬೆಳಗಿಸಿದ
ಬೆಳಕು
ಸರ್ ಸಿ.ವಿ. ರಾಮನ್...
(Read Caption) 👇
-
ಪ್ರತಿಯೊಂದು ಹೆಣ್ಣುಮಕ್ಕಳು ಮನೆಗೆ ಮಾಣಿಕ್ಯದಂತೆ,
ಆ ಹೆಣ್ಣು ಮಕ್ಕಳನ್ನ ಪಡೆದ ತಂದೆ ತಾಯಿಗಳೇ ಧನ್ಯರಂತೆ..!!❤-
ದಿನದ ಬಹುಪಾಲು ಸಮಯವ
ರೋಗಿಗಳ ಶುಶ್ರೂಷೆಗಾಗಿ
ಮೀಸಲಿಟ್ಟು, ಗುಣವ ಮಾಡುವ ಕೈಗಳು!
ಊಟ, ನಿದ್ದೆಯ ಸಮಯವನ್ನು
ತ್ಯಾಗಗೈದು ನಂಬಿ ಬಂದ ರೋಗಿ ಬದುಕಿಗೆ
ಆಸರೆಯಾದ ಹೃದಯವು!
ಶುಭ್ರ ವಸ್ತ್ರವ ಧರಿಸಿ
"ಸ್ಟೆತೊಸ್ಕೋಪ್" ಆಭರಣವ ತೊಟ್ಟು
ನೋವುಗಳಿಗೆ ಸ್ಪಂದಿಸುತ್ತಲೇ ಸಂತೃಪ್ತಿ ಕಾಣುವ
ಮನವು!
"ಎಲ್ಲಾ ರೋಗವೂ ಗುಣವಾಗುವುದು"ಎಂಬ
ಭರವಸೆಯ ಮಾತುಗಳಲ್ಲಿ
ಚೈತನ್ಯ ತುಂಬುವ ತನುವು!
ಹಣಕ್ಕಿಂತ ಮಿಗಿಲಾದುದು ಚಿಕಿತ್ಸೆ ಎಂಬ
ಬೆಲೆಕಟ್ಟಲಾಗದ ನಿಲುವು!
ಜನರ ಸ್ವಾಸ್ಥ್ಯಕ್ಕಾಗಿ ತಮ್ಮ ನಿಸ್ಪೃಹ ಸೇವೆಗೆ
ಹೃದಯಾಂತರಾಳದ ನಮನಗಳು 🙏-
ಇಂದು ನಿಜವಾಗಿ "ಮಹಿಳಾ ದಿನ"
ಮಾರ್ಚ 8 - ಅಂತರಾಷ್ಟ್ರೀಯ ಮಹಿಳಾ ದಿನ
ಮಾರ್ಚ 20 - "ರಾಷ್ಟ್ರೀಯ ಮಹಿಳಾ ದಿನ"ವಾಗಿ ಆಚರಿಸೋಣಾ ಯಾಕೆಂದರೆ ಮಹಿಳೆಯರಿಗೆ ಮೊದಲ ಬಾರಿಗೆ "ನಿರ್ಭಯ" ಮೂಡಿಸಿದ ದಿನ.
ಈ ಸುದ್ದಿಯನ್ನು ಮಾಧ್ಯಮಗಳು ಇನ್ನಷ್ಟು ಬಿತ್ತರಿಸಿದ್ದರೆ ಅತ್ಯಾಚಾರಿಗಳಿಗೆ ನಡುಕ ಹುಟ್ಟುತ್ತಿತ್ತು.
😔ವಿಪರ್ಯಾಸ ಕರಾಳ ಕೊರೊನಾ ವೈರಸ್ ಈ ಸುದ್ದಿಯನ್ನು ನುಂಗಿಹಾಕಿತು😔
ಅತ್ಯಾಚಾರಿಗಳಿಗೆ ಕುಣಿಕೆ ಹಾಕುವುದನ್ನು ನೇರಪ್ರಸಾರ ಮಾಡಬೇಕಿತ್ತು. ಹಾಗೆಯೇ ಈ ಸುದ್ದಿಯನ್ನು ಮೇಲಿಂದಮೇಲೆಪ್ರಸಾರಮಾಡಿದ್ದರೆ
ಅಂತಹ ಮನಸ್ಥಿತಿಯ ಕ್ರಿಮಿಗಳು
ಇಂತಹ ಹೇಯ ಕೃತ್ಯ ಮಾಡಲು ಹಿಂಜರಿಯುತ್ತಿದ್ದವೆನೊ...-