ಹಿಡಿ ಮಣ್ಣು ಜೀವ ಕಣ್ಣು
ಬಿತ್ತಿ ತೆಗೆಯುವನು ರೈತ ಹೊನ್ನು
ಬಡಿಸುವನು ಎಮಗೆ ಅಮೃತ
ಅನ್ನನೀಯುವ ಜೀವದಾತ
ಬೀಜ ಬಿತ್ತಿ ಜಲವ ಹರಿಸಿ
ಫಲವ ಬಯಸಿ
ಬೆವರು ಸುರಿಸಿ
ಜನತೆಯ ಕಾಯುವ ಜೀವ ಋಷಿ
ಕನಸು ಕಾಣದೆ ಹಗಲಿರುಳೆನ್ನದೆ ದುಡಿದು
ನೇಗಿಲು ಹಿಡಿದು ಗದ್ದೆ ಪೈರುಗಳ ಕಡಿದು
ನಾಡಿಗಾಗಿ ಶ್ರಮಿಸಿ ಕೃಷಿಯ ಅವಲಂಬಿಸಿ
ದೇಶ ಬೆಳಗಿಸುತ್ತಿರುವ ನೇಗಿಲಯೋಗಿಗೆ ಅನಂತ ನಮನ-
ಕುಂದಾನಗರಿಯ ವರ,
ಹುಟ್ಟಿ ಬೆಳೆದದ್ದು ಮಲ್ಲೂರ,
ಕಲಿಯುತ್ತಿರುವುದು ಬಿಜಾಪುರ,
ಚಿತ್ತ ತೋರುವ ಕನ್ನ... read more
ಓ ನನ್ನ ಪತಿದೇವ
ದೇಶ ಸೇವೆ ಗೈಯುತಿರುವ ಮುದ್ದು ಚೆಲುವ
ನಿನ್ನ ನೆನಪಲ್ಲೇ ಕಳೆಯುತಿರುವೆ ಕಾಲವ
ನೀನಿಲ್ಲದೆ ಅಪೂರ್ಣ ಈ ಜೀವ
ಏರುತ್ತಾ ಮುನ್ನಡೆದೆ ಮಂಜಿನ ಶಿಖರ
ಹಿಂದುರುಗಿ ನನ್ನೊಮ್ಮೆ ನೋಡು ಪ್ರಿಯಕರ
ನಂಬಿ ಕುಂತಿರುವೆ ನೀನೇ ನನ್ನ ದೇವರ
ಗೀಚುವೆ ಎದೆಯಲ್ಲಿ ಒಲವಿನ ಚಿತ್ತಾರ
ಮೊದಮೊದಲು ಬರುತ್ತಿದ್ದೆ ನನ್ನ ನೋಡಲೆಂದು
ಸುಮ್ಸುಮ್ನೆ ಮುನಿಸಿಕೊಳ್ಳುವೆ ನೀನಿಂದು
ಅಂದು ಎಂದು ನೀನೇ ನನ್ನವ ಎಂದೆಂದೂ
ಹೇಳೊಮ್ಮೆ; ನನ್ನ ಕನಸಲ್ಲೂ ಕಾಯುವೆ ಎಂದೂ!
ಈ ಜೀವ ಕಾಯುತಿಹುದು ಅನುಕ್ಷಣ
ಪ್ರೀತಿಯ ಬಯಸುತ ಹಗಲಿರುಳು ನಿನ್ನದೇ ಧ್ಯಾನ
ನಿನ್ನ ನೆನೆಯುತ ಬರೆದಿರುವೆ ಈ ಸಿಹಿಗವನ
ಇಷ್ಟವಾದಲ್ಲಿ ಮರೆಯದಿರು ಆ ಮೊದಲ ಚುಂಬನ-
ಆ ಗುಲಾಬಿ ನಿನ್ನ ಮುಡಿಯಲಿ
ನಿನ್ನ ಹೃದಯ ನನ್ನ ಗೂಡಿನಲಿ
ಧಾವಿಸಿ ಬಾ ಮದುವೆ ಗಾಡಿಯಲಿ
ಸಪ್ತಪದಿ ಹಾಕೋಣ ಚಪ್ಪರದಲಿ
ನಲಿಯೋಣ ನೇಸರದ ಅಮಲಿನಲಿ
ಕಟ್ಟೋಣ ಪ್ರೇಮಗೋಪುರ ಜಗದಲಿ
-
ಪಟ ಪಟ ಹಾರುತಿರುವ ಚಿಟ್ಟೆ
ಮೈದುಂಬಿದೆ ಬಣ್ಣಬಣ್ಣದ ಪಟ್ಟೆ
ಸವಿಯಲು ಬಾ ಹನಿಯ ಮೂಟೆ
ಕಾಯುತಿದೆ ನಿನಗಾಗಿ ಈ ಹೂಕಟ್ಟೆ-
#ಮಾಯಾಜಿಂಕೆ
ವನವಾಸದ ಕೊನೆಗಳಿಗೆಯಲಿ
ಸಮಯ ಬಿತ್ತುತಿರುವರು ವನ್ಯ ಕುಟೀರದಲಿ
ಸ್ವರ್ಣಮೃಗವ ಕಂಡು ಮನವು ಚಕಿತ
ಪ್ರಾಣಿಪಕ್ಷಿಗಳೊಂದಿಗಿನ ಅವಳ ನಂಟು ಅತ್ಯದ್ಭುತ
ಗಾಯಹೊತ್ತ ಜಿಂಕೆಯ ಚೇತರಿಸಲು
ಸೀತೆಯು ಉತ್ಸುಕ
ಆಸೆಯ ದಾಹ ತೀರಿಸಲು
ಹೊರಟನು ರಾಮ ಮಾಯಾಜಿಂಕೆಯ ಹುಡುಕುತ
ಸ್ವರ್ಣಮೃಗ ರೂಪತಾಳಿದ ಮಾರೀಚ ರಕ್ಕಸ
ಅಪಹರಿಸಲು ರಾವಣ ಮಾಡಿದ ದುಸ್ಸಾಹಸ
ವಿಚಿತ್ರ ಧ್ವನಿಯೊಂದು ನಡುಕ ಹುಟ್ಟಿಸುತ
ಆಜ್ಞೆಯ ಮೀರಿ ಅಣ್ಣನ ಹಿಂಬಾಲಿಸಿದ ಸುಮಿತ್ರಾಸುತ
'ಭೀಕ್ಷಾಂದೇಹಿ' ಎನ್ನುತ ಬ್ರಾಹ್ಮಣನ ಆಗಮನ
ಅವತರಿಸಿದನು ಮಾಯಾರೂಪಿ ಕುತಂತ್ರಿ ರಾವಣ
ಜಾಲದಲಿ ಬಿದ್ದು ದಾಟಿಹಳು ಲಕ್ಷಣ ರೇಖೆ
ಸೀತಾಪಹರಣ ತೆರೆಯಿತು ತ್ರೇತಾಯುಗದಲ್ಲಿ ಹೊಸದೊಂದು ಶಾಖೆ
ಜಟಾಯುವಿನಿಂದ ತಿಳಿಯಿತು ರಾವಣನ ಗುಟ್ಟು
ಮಾಯಾಜಾಲ ತಿಳಿದು ನೆತ್ತಿಗೇರಿತು ಸಿಟ್ಟು
ಶೂರ್ಪನಖಿಯ ಸೇಡಿಗೆ ಸೆರೆಯಾದಳು ಸೀತೆ
ಅಗಲಿಕೆಯ ನೋವಲ್ಲಿ ರಾಮಲಕ್ಷ್ಮಣರ ಚಿಂತೆ-
ಅಜ್ಞಾನವೆಂಬ ಕತ್ತಲೆಯ ಉರುಳಿಸಿ
ಜ್ಞಾನವೆಂಬ ಬೆಳಕನ್ನು ಚೆಲ್ಲಿ
ದೀಪದಿಂದ ದೀಪಗಳ ಹಚ್ಚುವ ಹಬ್ಬ
ಭಾರತೀಯರಿಗೆ ಭಾಗ್ಯ ತರುವ
ಮನೆ ಮನಗಳ ಪ್ರೀತಿಯಿಂದ ಬೆಳಗಿಸುವ
ಜ್ಞಾನ ಪ್ರಕಾಶತೆ ತುಂಬುವ ದೀಪಗಳ ಹಬ್ಬ
ದೀಪಾವಳಿಗಿದೆ ಐತಿಹಾಸಿಕ ನಂಟು
ಆಚರಿಸಲು ಕಾರಣಗಳು ಎಂಟು
ಎಲ್ಲರಲಿ ಹಬ್ಬುವದು ಖುಷಿಯ ಗಂಟು
ಆಕರ್ಷಕ ರಂಗೋಲಿ ಹೊಯ್ದು
ತೆರ ತೆರನಾದ ಸಿಹಿ ಸವಿದು
ನಲಿಯುವರು ರಂಗುರಂಗಿನ ಬಟ್ಟೆ ತೊಟ್ಟು
ಬಣ್ಣಬಣ್ಣದ ದೀಪಗಳ ಆಕೃತಿ
ಕೀಟಗಳ ಸೆಳೆಯುವ ಕೃತಿ
ದೀಪ ಹಚ್ಚಿ ರಂಜಿಸುವ ಸಂಸ್ಕೃತಿ
ದೀಪದಂತೆ ಜೀವನ ಮಿಂಚಲಿ
ಬಾಳ ತುಂಬ ಸಂತಸ ತುಂಬಿರಲಿ
ಸಮಸ್ತ ಪ್ರೀತಿ ಪಾತ್ರರಿಗೆ ಒಳ್ಳೆಯದನ್ನು ಆಶಿಸುತ
ಎಲ್ಲರಿಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು-
ಮೊದಲ ಭೇಟಿ
ನೀ ಕೊಟ್ಟ ಚೀಟಿ
ಸವರುತ ತುಟಿ
ಕೊಟ್ಟೆ ಉತ್ತರ
ಕಣ್ಣು ಚೂಟಿ ಚೂಟಿ
ಆಗಾಗ ಸೇರಿಸುತ್ತಿತ್ತು ಸುಟಿ
ಕೈ ಬೀಸಿ ಕರೆತಿಹುದು
ಹೃದಯ ಮೀಟಿ ಮೀಟಿ
ನಮಗಿಲ್ಲ ಯಾರು ಸರಿ ಸಾಟಿ
ಕೆತ್ತಲಾ ನಿನ್ಹೆಸರ ಕುಟ್ಟಿ ಕುಟ್ಟಿ
ಬಾ ಒಮ್ಮೆ ಊರ ದಾಟಿ
ಮನಕೆ ಸಂತಸ ಕೋಟಿ
ಕಾಯುವೆ ಪ್ರತಿ ಘಟಿ
ಎಲ್ಲ ಕಳೆದು ಕುಂತಂತಾಗಿಹುದು
ಜೀವನ ಬರೀ ಪಿಟಿಪಿಟಿ-
ಆಗಸದ ಮಿನು-ಮಿನುಗುವ ನಕ್ಷತ್ರ
ನೋಡ್ತಾಯಿದ್ದರೆ ನೀನೇ ಬಂದಂತಾಗುವುದು ಹತ್ತಿರ
ಮನದಲ್ಲಿ ನಿನ್ನದೇ ಚಿತ್ತಾರ
ಓಡಿ ಬರುವೆ ಸರಸರ
ಮುಡಿಸುವೆ ಮಲ್ಲಿಗೆಯ ಹಾರ
ಉಣಬಡಿಸು ಬಾ ಪ್ರೀತಿಯ ಸಾರ!-
ಯಾವುದೋ ಗುಂಗಲ್ಲಿ ಅಲೆದಾಡುತ್ತಾ ಹೊರಟಿದ್ದೆ
ಸಾಗಸಾಗುತ ನಿಂತಿದ್ದೆ ನಾ ಊರ ಅಗಸಿಯಲ್ಲಿ
ಡಮ್ ಡಮ್ ಅಂತ ಗುಡುಗು-ಸಿಡಿಲು
ಡವಡವ ಅನ್ನುತಿಹುದು ಎದೆಯ ಗೂಡು
ಬಂದೇ ಬಿಡ್ತು ರಪರಪ ಮಳೆಯು
ಚಕ್ಕನೆ ಹೋಗಿ ಅಂಚಿನಲ್ಲಿ ನಿಲ್ಲುತಿರಲು
ತಟತಟ ಸೋರುತ್ತಿರುವ ಮಳೆಹನಿಗಳು
ಸುಮ್ಸುಮ್ನೆ ಮೈಯೊಳಗೆ ಇಳಿಯುತ್ತಿರುವ ನೀರಿನ ಗುಡ್ಡೆಗಳು
ಅರ್ಧಮರ್ಧ ತೊಯ್ದ ಬಟ್ಟೆಯಲಿ ಹೊಯ್ದಾಡುತಿರಲು
ಜುಮು ಜುಮು ಚಳಿಯಲ್ಲಿ ಕೈಕಾಲು ನಡುಗುತಿರಲು
ಬಡಬಡ ಮನೆಗೆ ಓಡಬೇಕೆನ್ನುತ್ತಲೆ
ಇಟ್ಟ ಕಾಲು ಬಾರದೆ ಸುಯ್ಯನೆ ಜಾರಿ
ಸೇರಿದೆ ದೊಡ್ಡ ಗುಂಡಿಯನು...
ಪಟ್ಟನೆ ಬಂದು ಯಾರಾದರೂ ಎಬ್ಬಿಸುವಿರಾ?
-
ಹಕ್ಕಿಗೆ ಗೂಡೆ ಚೆಂದ
ಶಿಲ್ಪಿಗೆ ಕೆತ್ತನೆಯೇ ಚೆಂದ
ಕವಿತೆ ಗೀಚಿದರನೆ ಕವಿಗೆ ಚೆನ್ನ
ಕಾಣದ ಕನಸೊಂದರ ಬೆನ್ನತ್ತಿದೆ
ನಿರಂತರ ಮನದಿ ಕನ್ನಡ ಮೊಳಗುತ್ತಿದೆ
ಸೊನ್ನೆಯಿಂದ ಶತಕದತ್ತ ಕವನಗಳು ಓಡುತ್ತಿವೆ
ಅರಳಿತು ಅನಿರೀಕ್ಷಿತ ಕಲೆ
ಹರಿಯಿತು ಕನ್ನಡ ಪ್ರೇಮ ಹೊಳೆ
ಬೆಳೆಸಿತು ಈ ಕೊರೋನಾ ರಜೆ
ಕವನಕ್ಕೆ ಗೆಳೆಯನ ಪ್ರೇರಣೆ
ಗೀಚಿದ ಮೊದಲ ಕ್ಷಣ ಎಂದೆಂದೂ ಸ್ಮರಣೆ
ಭಾವನಾಶಕ್ತಿಯೇ ನನ್ನ ಬರವಣಿಗೆಗೆ ಮೂಲ ಮಣೆ
ಸಿಕ್ಕಿತು ಎಲ್ಲರ ಬೆಂಬಲ
ಬರಿತಾನೆ ಇರ್ಬೇಕು ಎನ್ನುವ ಹಂಬಲ
ಹುರಿದುಂಬಿಸಿದ ಪ್ರತಿಯೊಬ್ಬರಿಗೂ ನನ್ನ ನಮನ-