Pushpa T D   (Pushpa T D)
11 Followers · 17 Following

Love to write 📝
Joined 13 January 2022


Love to write 📝
Joined 13 January 2022
15 DEC 2022 AT 22:46

ಕಾರಣವಿಲ್ಲದೆ ಕನಸಲ್ಲಿ ಬರುತ್ತಿರುವೆ,
ನೆನೆಯದೆ ನೆನಪಾಗುತ್ತಿರುವೆ,
ಮರೆಯಲಾಗದೆ ಚಡಪಡಿಸುತ್ತಿರುವೆ,
ಗೊತ್ತಿಲ್ಲದೇ ನಾ ಅರಿತಿರುವೆ ನಾ ನಿನ್ನವಳಾಗಿರುವೆ 🤩

-


27 NOV 2022 AT 9:11

ನಿನ್ನಾ ಜಗತ್ತು ನಿನ್ನಲ್ಲೇ, ನಿನ್ನಾ ಜೊತೆಯಲ್ಲೇ ಇರುವಾಗ
ನೀ ಏಕೆ ಬೇರೆಯವರಲ್ಲಿ ಅಥವಾ ಹೊರಜಗತ್ತಿನಲ್ಲಿ ಹುಡುಕ್ಕುತ್ತಿರುವೆ..??

ಎಚ್ಚರಿಕೆ..!!

ಬೇರೆಯವರಲ್ಲಿ ಅಥವಾ ಹೊರಜಗತ್ತಿನಲ್ಲಿ ಹುಡುಕುವುದಾದರೆ ನಿನ್ನನ್ನೇ ನೀ ಕಳೆದುಕೊಳ್ಳುವೆ..!!😊

-


26 NOV 2022 AT 18:26

ನೋಡಿದ್ದು ಒಮ್ಮೆ ಮಾತ್ರ ಆ ಮುಖವನ್ನ,
ಆದರೆ ಕಾಡಿದ್ದು ನೂರು ಸಲ..!!

ಮತ್ತೊಮ್ಮೆ ನೋಡಿದಾಗ ಮಾತಾಡಲೇಬೇಕು ಎಂಬುದು ನನ್ನಾ ಮನಸ್ಸಿನ ಹಂಬಲ..!!😃

-


23 NOV 2022 AT 22:45

ನನ್ನೊಡನೆ ಸಾಗುತ್ತಿತ್ತು ಆ ನಿಗೂಢ ನೆರಳು😈,
ಅಪ್ಪುಗೆಗೆ ಕೈ ಬೀಸಿ ಕರೆಯುತ್ತಿತ್ತು ನನ್ನಮ್ಮನ ಕರಳು.!!

ಅರೆಜ್ಞಾನಾಳಾಗಿದ್ದೆ,
ಕಣ್ಣು ಬಿಟ್ಟು ನೋಡಿದರೆ ನನ್ನಮ್ಮನ ಪಕ್ಕದಲ್ಲಿದ್ದೆ..!😁

-


22 NOV 2022 AT 18:07

ತಿಳಿದು ಬದುಕುವುದೇ ಜೀವನವೆಂದರೆ,
ಅನುಭವಕ್ಕೆಲ್ಲಿದೆ ಬೆಲೆ...??

ಅನುಭವವೇ ಜೀವನವಾದರೆ,
ಬದುಕೆಂಬುದೇ ಒಂದು ಕಲೆ 😊

-


1 NOV 2022 AT 9:29

ತೊದಲ ನುಡಿ ಕನ್ನಡ,
ಹೆಮ್ಮೆಯ ನುಡಿ ಕನ್ನಡ,
ಕೊನೆಯ ನುಡಿ ಕನ್ನಡ,
ಕನ್ನಡಿಗರ ಉಸಿರ ನುಡಿ ಕನ್ನಡ❤️

ಭುವನೇಶ್ವರಿ ಮಾತೇ ಹರಸುತ್ತಾಳೆ ಕನ್ನಡವೆಂದರೆ, ಕೆರಾಳುತ್ತಾಳೆ ಕನ್ನಡವನ್ನು ಅವಮಾನಿಸಿದರೆ,
ಉಸಿರಾಗಿಸು, ಹಸಿರಾಗಿಸು,
ಎಲ್ಲೆಲ್ಲೂ, ಎಂದೆಂದಿಗೂ ಬೆಳಗಿಸು,
ಈ ನಮ್ಮ ಹೆಮ್ಮೆಯ ಕನ್ನಡವನ್ನ ..!!❤️


-


21 AUG 2022 AT 22:34

ನೆನೆದೊಡನೆ ನೆನಪಾಗುವೆ,
ಕಣ್ಣೂಬಿಟ್ಟಾಗ ಅಚ್ಚರಿಯಾಗುವೆ,
ಇರುವೆಯಾ? ಇಲ್ಲದೇರುವೆಯಾ?
ಏನೆಂದು ಒಮ್ಮೆ ತಿಳಿಸುವೆಯಾ..??

-


16 MAR 2022 AT 23:26

ತಂದೆಗೆ ತಕ್ಕ ಮಗನಾಗಿ,ನಮ್ಮೆಲ್ಲರ ನೆಚ್ಚಿನ ನಟನಾಗಿ,
ಕೋಟ್ಯಂತರ ಜನರ ಬದುಕಿನಲ್ಲಿ ಬೆಳಕಾಗಿ,
ಸಮಾಜಕ್ಕೆ ಸ್ಫೂರ್ತಿಯಾಗಿ, ಆದರ್ಶವಾಗಿ,
ಸಂದೇಶವನ್ನು ಕೊಟ್ಟು ಹೋಗಿರುವಿರಿ,
ಇದಕ್ಕೆ ನಾವೆಲ್ಲರೂ ಚಿರಋಣಿಯಾಗುವಿರಿ..!!

ಅಪ್ಪ ಕಲಿಸಿದ್ದು ಅಭಿಮಾನಿಗಳೇ ದೇವರೆಂದು..
ಅಭಿಮಾನಿಗಳು ಹೇಳಿದ್ದು ಮಗನೆ ದೇವರೆಂದು..!!

ಇದನ್ನು ಕಂಡ ನಾವುಗಳೇ ಪುನೀತ,
ನಿಮ್ಮನ್ನು ನೋಡಿ ಬೆಳೆದ ನಾವು ಆಗುವೆವು ಪುನೀತ..!!

We always love & respect you Appu sir❤️🌟

-


8 MAR 2022 AT 15:25

ಹೆಣ್ಣು ಎಂದರೆ ಸರ್ವ ಶಕ್ತಿ ಮೂಲ ಮತ್ತು ಸರ್ವ ಶ್ರೇಷ್ಠ.

ಹೆಣ್ಣಿನ ಜನನ ಶುಭ ಸಂಕೇತದ ಮಿಲನ
ಹೆಣ್ಣಿನ ಇತಿಹಾಸ ಮೂಲ ಜನನಿಗಳ ವ್ಯಾಖ್ಯಾನ

ಹೆಣ್ಣಿಲ್ಲದ ಜೀವನ ಕಣ್ಣಿಲ್ಲದ ಕುರುಡನಂತೆ,
ಹೆಣ್ಣಿಗೆ ಬೆಲೆ ಕೊಡದ ಜೀವ ಕಾಲಿನ ಕಸದಂತೆ

ಹೆಣ್ಣು, ಹೊನ್ನು, ಮಣ್ಣು ತಾನಗಿಯೇ ಒಲೆಯಬೇಕು
ಆದರೆ ಹೀಗಿನ ಕಾಲದಲ್ಲಿ ಹೆಣ್ಣಿಗೆ ಬೆಲೆ ಕೊಡುವವರ ಬದಲಾಗಿ ಹೆಣ್ಣಿಗೆ ಬೆಲೆ ಕಟ್ಟುವವರೇ ಜಾಸ್ತಿ..

ದೇಶದ ಭಾರತಮಾತೆಯಾಗಿ, ತಾಯಾಗಿ,ತಂಗಿಯಾಗಿ, ಗೆಳತಿಯಾಗಿ, ಮಡದಿಯಾಗಿ ಜೀವಿಸುವ ಎಲ್ಲಾ ಹೆಣ್ಣು ಮನುಕುಲದ ಜೀವಕ್ಕೆ "ಮಹಿಳೆಯರ ದಿನಾಚರಣೆಯ" ಶುಭಾಶಯಗಳು 💐

-


24 FEB 2022 AT 12:40

ನೆಮ್ಮದಿಯೇ ದೊಡ್ಡ ಆಸ್ತಿ,
ಸಂಪಾದಿಸಿಬಿಡು ಬೆಟ್ಟದಷ್ಟು ಪ್ರೀತಿಯನ್ನು, ಗೌರವವನ್ನು
ಕೊಂಚ ಕೋಪವು ಜ್ಞಾನವನ್ನು ಹಾಳುಮಾಡುವ ಶಕ್ತಿ ಹೊಂದಿದರೆ,
ತಾಳ್ಮೆಎಂಬ ಶಕ್ತಿಯು ತನ್ನ ತನವನ್ನು ಉಳಿಸಿಬಿಡುತ್ತದೆ

-


Fetching Pushpa T D Quotes