ಶೂನ್ಯದಲ್ಲಿದ್ದಾಗ ಮನುಷ್ಯ
ನೆಮ್ಮದಿಯಿಂದ ಇರುತ್ತಾನೆ......
ಯಾವಾಗ ಪ್ರಥಮ, ದ್ವಿತೀಯ, ತೃತೀಯ
ಎಂದು ಸ್ಪರ್ಧೆಗಿಳಿಯುತ್ತಾನೂ ಆವಾಗ
ಮನಸ್ಸಿನ ನೆಮ್ಮದಿಯನ್ನು ಕಳೆದುಕೊಳ್ಳುತ್ತಾನೆ......
ಅದಕ್ಕೆ 'ಶೂನ್ಯ' ಕಂಡುಹಿಡಿದ
ಭಾರತ 'ನೆಮ್ಮದಿ'ಯ ತವರೂರು....
"೦" ವನ್ನು ಗಮನಿಸಿ...
ಅಖಂಡವಾಗಿದೆ.....
ಹಾಗಾಗಿ ಶೂನ್ಯವೆಂಬುದು ಪರಿಪೂರ್ಣ.....
-
ದುಷ್ಟರ ಸಂಹಾರಿಣಿ
ಶಿಷ್ಟರ ಸಂರಕ್ಷಿಣಿ
ಕಷ್ಟದಲಿ ಪೋಷಿಣಿ
ಸ್ಪಷ್ಟ ನೀ ಶಕ್ತಿರೂಪಿಣಿ-
ಎಷ್ಟೇ ಒಳ್ಳೆಯ ಕೆಲಸ ಮಾಡಿದರೂ
ನಿಂದಿಸುವರು ಇದ್ದೇ ಇರುತ್ತಾರೆ....
ನಿಂದನೆಯಿಂದಲೇ ಜಗತ್ತು ನಿಮ್ಮನ್ನು
ಒರೆಹಚ್ಚಿ ಸ್ಪಂದಿಸಿ ವಂದಿಸುವುದು.....
-
ಕಾಲನ ಹೊಡೆತಕ್ಕಿಂತ
ಕಾಲೆಳೆಯುವವರ ಹೊಡೆತ
ಬಲು ಜೋರೀಗ ......
ಚಿಂತಿಸದಿರಿ.....
ಕಾಲ ಕೆಳಗಿರುವವರೇ
ಕಾಲೆಳೆಯುವರು....
ರೆಕ್ಕೆ ಬಿಚ್ಚಿ ಮೇಲೇರಿ
ಕೊಡವಿ ಬಿಡಿ ಕಾಲು....
ತಮ್ಮ ಕಾಲ್ಮೇಲೆ ನಿಲ್ಲದಂತೆ
ನೆಲಕ್ಕುರುಳುವರು ಅವರು..-
ಹೇಳು ಗಣಪನೆ ನೀನೇಕೆ ಬೇಗ ಹೊರಟೆ
ಇಷ್ಟು ಬೇಗ ಸಾಕಾಯಿತೆ ನಮ್ಮ ಸಹವಾಸ...
ತೊರೆದು ಹೋಗದಿರು ನಮ್ಮನ್ನೆಲ್ಲ ಬಿಟ್ಟು
ನೀನಿರಲು ಮನೆಯಲಿ ಹಬ್ಬದ ಸಡಗರ...
ನೀನಿದ್ದರೆ ಬಗೆ ಬಗೆಯ ಸಿಹಿ ತಿನಿಸು
ಜೊತೆಗಿದ್ದು ಬಿಡು ಕೊಡುವೆ ಸಿಂಹ ಪಾಲು....
ಹೇಳಲು ಎಷ್ಟೊಂದು ಗುಟ್ಟುಗಳು ಉಳಿದಿವೆ
ನೀ ಹೋದರೆ ಯಾರಿಗೆ ಹೇಳಲಿ ಹೇಳಿಗ.....
-
ಪ್ರಕೃತಿಯನು ಕತ್ತರಿಸಿ
ಎತ್ತರಕ್ಕೇರುವೆನೆಂದು
ಬೀಗಬೇಡ...
ತತ್ತರಿಸಿ ನೆಲಕ್ಕುರುಳುವೆ
ಎಚ್ಚರ.....-
ಶ್ರಾವಣದ ವರ್ಷಧಾರೆಗೆ ಹರ್ಷಗೊಂಡು
ಬರೆಯಬೇಕೆಂದು ಕುಳಿತೆ ಮಳೆ ಕವನ....
ಜೋರಾದ ನಿನ್ನ ನೆನಪಿನ ಹಾವಳಿಗೆ
ಕೇಳಿಸಲೇ ಇಲ್ಲ ಮಳೆಹನಿಯ ಸದ್ದು...
ಮತ್ತದೇ ಎಂದೂ ದಡ ಸೇರದ
ನೆನಪಿನಾ ದೋಣಿಯಲಿ ಪಯಣ....
-