QUOTES ON #ರಾಮ

#ರಾಮ quotes

Trending | Latest

**ಹೈಕು**
ಕೌಸಲ್ಯೆ ಪುತ್ರ
ದಶರಥ ನಂದನ
ಕೋದಂಡಪಾಣಿ

ಸೀತಾ ವಲ್ಲಭ
ಕಮಲ ನಯನವ
ಹೊತ್ತಿರುವನು

ಲಂಕಾಧಿಪತಿ
ಸಂಹಾರಿ ಸುಗ್ರೀವನ
ಆಪ್ತಮಿತ್ರನು

ಪುರುಷೋತ್ತಮ
ರಾಮ ನಾಮವ ಸದಾ
ಭಜಿಸುತ್ತಿರಿ..!!

-



ದಶರಥ ನಂದನನಿಗೆ
ಜಾನಕಿ ವಲ್ಲಭನಿಗೆ
ಕಮಲದ ತರಹ ಕಣ್ಣನ್ನು
ಹೊಂದಿರುವ ರಾಜೀವಲೋಚನನಿಗೆ
ನನ್ನ ಪ್ರೀತಿಯ ಕೌಸಲ್ಯೆ ತನಯನಿಗೆ
ಈ ಒಂದು ಬರಹ ಅರ್ಪಣೆ 🙏🙏🙏

Read in caption 👇👇👇

-


5 SEP 2018 AT 7:47

ಕೊರಗದಿರು ಮನವೆ ಕಲ್ಲಾದೆ ಎಂದು
ಶಿಲ್ಪಿ ಒಬ್ಬ ಬಂದು ಮೂರ್ತಿ ಮಾಡುವ
ರಾಮನಂತವ ಒಬ್ಬ ಬಂದು ಜೀವ ನೀಡುವ

-



ಅವನನ್ನು ಶ್ರೀರಾಮನಂತೆ ಬೆಳೆಸಬೇಕೆಂಬ
ಕನಸನ್ನೋತ್ತ ಜೀವವೊಂದು
ದಿನಂಪ್ರತಿ ರಾಮಾಯಣದ ಕಥೆಗಳನ್ನು ಹೇಳುತ್ತಿದ್ದರೆ,,
ಅವಳರಿವಿಗೆ ಬಾರದಂತೆ ಅವನು ದಿನೇ ದಿನೇ
ರಾವಣನ ಕಟ್ಟಾ ಅರಾಧಕನಾಗುತ್ತಿದ್ದ!!
✍️ಶಿಲ್ಪಾ ಪಾಲ್ಕಿ💞

-


2 APR 2020 AT 11:43

ಜಗಕ್ಹೆದರಿ ತನ್ನ ಪ್ರೀತಿಯ ತ್ಯಾಗ ಮಾಡಿ
ಒಂಟಿಯಾಗಿಸಿದವನ ಮೆಚ್ಚೆನು,
ಒಂಟಿಯಾಗಿಸಿದರು ಯುಗಯುಗಾಂತರಕು
ಅವಳೆನ್ನ ಪ್ರೇಯಸಿ ಎಂದು
ಜಗಜಾಹಿರು ಮಾಡಿದವನ ಮೆಚ್ಚದಿರೆನು. 

-


19 NOV 2019 AT 18:39

ರಾಮನ ವ್ಯಕ್ತಿತ್ವ ಹೊಂದಬೇಕಾದರೆ,
ಮೊದಲು ಮನದೊಳಡಗಿದ
ರಾವಣನನ್ನು ಸಂಹರಿಸು...

-



ಮನಸು ನೋಡಿ ಮರುಳಾದವನು ರಾಮನಾದ.
ಅಂದ ನೋಡಿ ಮೋಹಗೊಂಡವನು ರಾವಣನಾದ,

-


5 AUG 2020 AT 8:44

“Saugandh Ram Ki Khaate Hain,
Hum Mandir Wahi Banayenge”
“Jaha Ram Ka Janma Hua Tha,
Hum Mandir Wahi Banayenge”
“Ram Lalla Hum Aayenge;
Mandir Wahi Banayenge”

"ಜಯತು ಜಯತು ಹಿಂದೂ ರಾಷ್ಟ್ರ"

-


5 AUG 2020 AT 14:05

.....

-


14 OCT 2020 AT 16:50

ತಾಳ್ಮೆಯೂ
ಸೋಲನೊಪ್ಪಿಕೊಂಡಿತ್ತಂತೆ!
ಶ್ರೀ ರಾಮನ ದರ್ಶನಕ್ಕಾಗಿ ಕಾಯ್ದ
ಶಬರಿಯ ಪರಮ ಭಕ್ತಿಯ ಮುಂದೆ..

-