ಇರುಳೆಂದರೆ ಪ್ರೀತಿ ಹೆಚ್ಚು,
ಚಂದಿರನಂತೂ ನನಗಚ್ಚುಮೆಚ್ಚು.
ಹುಣ್ಣಿಮೆಯ ಬೆಳಕಲಿ,
ತಂಗಾಳಿಯ ನವಿರು ಸ್ಪರ್ಶದಲಿ,
ಒಂಟಿತನವೂ ಬಲು ಹಿತವು.
ಅಮವಾಸ್ಯೆಯ ರಾತ್ರಿಯಲಿ,
ತಾರೆಗಳ ಹೊಳಪಿನಲೀ,
ಕಾಲಹರಣವೂ ಸಂತಸವೂ.
ಹಳೆಯ ನೆನಪನು ಮೆಲಕು ಹಾಕಲು,
ಹೊಸ ಬದುಕಿನ ಬಗೆಗೆ ಯೋಚಿಸಲು,
ಕಳೆದುಹೋದ ಪ್ರೀತಿ ನೆನೆಯಲು,
ಹೊಸಾರಂಭವ ನಿರೀಕ್ಷಿಸಲು,
ರಾತ್ರಿಗಿಂತಾ ಸಮಯ ಬೇಕೇ ಆಲೋಚಿಸಲು!
ಕಲ್ಪನೆಗಳ ಬಡಿದೆಬ್ಬಿಸಲು!-
14 AUG 2020 AT 23:40
26 OCT 2019 AT 5:20
ಕರಾಳ ರಾತ್ರಿಯ ಭಯದಿಂದ
ನಾನು ನಕ್ಷತ್ರಗಳನ್ನು ತುಂಬಾ
ಪ್ರೀತಿಯಿಂದ ಪ್ರೀತಿಸುತ್ತಿದ್ದೇನೆ..-
21 AUG 2021 AT 21:58
ಕನಸಿನಲ್ಲಿ ಬಂದು ಕಾಡುವ ನನ್ನ ರಾಧೆ
ನನ್ನ ಕಣ್ಣುಗಳಿಗೆ ಅದೆಷ್ಟು ವೇದನೆಯನ್ನು
ಕೊಡುತ್ತಿದ್ದಾಳೆ ಎಂದು.... !
ಅವಳು ಬಂದು ಕಾಡದ ರಾತ್ರಿಯೂ ಕತ್ತಲೆಯೇ ಅಲ್ಲ-
24 AUG 2019 AT 2:08
ಗಿಜಿಗುಟ್ಟುವ ನೆನಪುಗಳ
ನಡುವೆ ಒಬ್ಬಂಟಿಯಂತೆ ಕುಳಿತು
ಮಾತ ಮೈಲುದೂರಕೆ
ಅಟ್ಟಿ ಮೌನದ ಬೆನ್ನಿಗಾತು
ಇಲ್ಲಸಲ್ಲದವರ ಬಗ್ಗೆ ಯೋಚಿಸುತಾ
ಜೊತೆಗಿರುವವರ ಮರೆತು
ಇನ್ನೊಂದು ನಡುರಾತ್ರಿ ಹೇಳ
ಹೆಸರಿಲ್ಲದಂತೆ ಕಳೆದೇ ಹೋಯ್ತು-
13 DEC 2019 AT 22:56
ತಣ್ಣನೆ ರಾತ್ರಿ, ಹುಣ್ಣಿಮೆಯ ಬೆಳದಿಂಗಳು,
ತಂಗಾಳಿಯ ಜೋಗುಳಕೆ ನಾ ನಿದ್ರೆಗೆ ಜಾರಿರಲು,
ಹೊಸದಾಗಿ ಶುರುವಾಗಿದೆ ಸುಂದರ ಸ್ವಪ್ನಗಳು,
ರವಿಯೇ ನೀ ಬರದಿರು ಬೇಗನೆ, ಈ ಕನಸ ಕೆಡಿಸಲು.-
9 OCT 2021 AT 23:03
#ರುಬಾಯಿ
ಮಲಗು! ರಾತ್ರಿಯ ಶಾಂತಬಟ್ಟಲಿದು
ಬೆಳಗುವ ಚುಕ್ಕೆಗಳ ಮಡಿಲಿದು
ಬೆಳಕು ಹರಿದು ಹೊಸತು ಹೊಳೆದು
ನೆಮ್ಮದಿ ದಿನದ ಕಾತರಿಕೆಯಿದು
-