ಕಣ್ಣ ಕ್ಯಾಮರದಲ್ಲಿ
ಸೆರೆಯಾದ ನಿನ್ನನ್ನು
ಎದೆಯಲಿಟ್ಟುಕೊಂಡು
ಬಹಳ ದಿನಗಳಾಯ್ತು;
ಕುತೂಹಲದ ಮೂಟೆಯಂತೆ
ಬೆನ್ನಿಗಂಟಿಕೊಂಡಿರು ಸದಾ!-
29 MAY AT 15:14
15 MAY AT 21:32
ಈ ಹೂವಿಗಿಲ್ಲ ಮನ ತಣಿಪ ವಾಸನೆ,
ಮನೋಹರ ಮಳೆ ಬಿಲ್ಲಿನ ಬಣ್ಣ.
ಆದರೂ ನಿನ್ನ ಪಾದದಡಿಗೋ,
ಮುಡಿಗೋ ಸೇರುವ ಹುಕಿ!-
24 DEC 2024 AT 11:27
ಖುಷಿಯಾಗಿದೆ ಏಕೋ ನಿನ್ನಿಂದಲೇ;
ಒಲವ ಕಂಗಳ ನಗುವಿಗೆ
ಮನ ಸೋತಮೇಲೆ
ಗಾವುದ ದೂರವೂ ಸನಿಹ,
ಸೇರುವುದು ನಿನ್ನ ಬಲು ಸುಲಭ!-
2 DEC 2024 AT 19:15
ಎದೆಯ ಕೂಗು -
ಬಿರಿವ ನೋವು;
ಮೌನ!
ಮರೆತಿದೆ ಮಾತು -
ಸುಡುತಿದೆ ಕಾವು;
ತಂಪನೆರೆದ ಬಿರುಗಾಳಿ!-
19 SEP 2024 AT 23:33
ಪ್ರೀತಿ ಎಂದರೆ ಏನೆಂದು
ಕೇಳಿದರು ಅವರು;
ಮನದಲ್ಲಿ ಮೂಡಿದ
'ನಿನ್ನ' ಬಿಂಬವನ್ನು
ಹೃದಯದಲ್ಲಿ ಬಚ್ಚಿಟ್ಟುಕೊಂಡೆ!-