ಕೆಲವೊಮ್ಮೆ ಕೆಲವರ ಮಾತಿಗಾಗಿ
ಮನ ಹಂಬಲಿಸಿ ಕಾಯುತ್ತಿರುತ್ತದೆ
ಆದರೆ,ಅವರು ಅದನ್ನ ಅರಿತೂ ಅರಿಯದಂತೆ
ಮುಂದೆ ಸಾಗುವಾಗ ಆಗುವ ನೋವು
ಆ ಕಾಯುವ ಮನಸಿಗಷ್ಟೇ ಅರಿವಾಗುವುದು-
ಕೈಯಿ ಕೈಯಿ ಇಡ್ಕೊಂಡ್ರೆ
ಮಾತ್ರ ಹತ್ರ ಅಂತ ಅಲ್ಲ
ಭುಜಕ್ಕೆ ಭುಜ ತಾಗಿಸೊ
ಕನಸು ನೀ ಬಿಡಲಿಲ್ಲ
ರಸ್ತೆಲಿ ತಬ್ಬಿಕೊಂಡು ಓಡಾಡೋ
ಸಂಸ್ಕೃತಿ ಕೂಡ ನಮ್ಮದಲ್ಲ
ಮನದಲ್ಲೇ ನಾ
ಆರಾಧಿಸೋದು ಬಿಡಲ್ಲ
ಸಿಂಧೂರಕ್ಕೆ ಅಧಿಪತಿ
ಆದ್ಮೇಲೆ ಇದೆಲ್ಲ
ಅಲ್ವಾ ನಲ್ಲ...-
ನಾನಿನ್ನ ಯಾಕೆ ಇಷ್ಟು ಹಚ್ಚಿಕೊಂಡಿದ್ದೇನೆ ಅಂತ ನನಗೆ ಗೊತ್ತಿಲ್ಲ ಆದರೆ ನನ್ನ ಪ್ರಾಣ ಇರುವವರೆಗೂ ನಿನ್ನ ಮೇಲಿನ ಪ್ರೀತಿಯಂತು ಕಮ್ಮಿ ಆಗಲ್ಲ
-
'ಯಾಕೆ' ಎಂದು ಕೇಳುವ ಹಕ್ಕು
ಯಾಕೋ ನಾ ಕಳೆದುಕೊಂಡಂತಿದೆ;
ಆದರೂ,
ಯಾಕೋ ಮನಸ್ಸಿಗೆ ಕೇಳಬೇಕೆನಿಸಿ,
ನಿನಗೆ 'ಯಾಕೆ' ಅಂತ ಕೇಳಿದಾಗ,
ನೀ ನೀಡಿದ ಉತ್ತರ
ಯಾಕೋ ಈ ನನ್ನ ಮನಸ್ಸಿಗೆ
ತಿಳಿಯದೆ ಹೋಯಿತು ಹುಡುಗ.-
ಬಿಟ್ಟು ಹೋದಳೆಂದು ಅಳುತ್ತಾ ಕೂರುವ ಬದಲು
ನಿನ್ನ ಆಗಮನಕೆ ಅಳುವ ಕಂಬನಿಯಲ್ಲೆ ನೋವ ಮರೆತು ಮಂದಹಾಸ ಬೀರುವ ನಿನ್ನ ತಾಯಿ ನೆನೆದು
ನಿನ್ನ ಬದುಕು ಸಾರ್ಥಕ ಮಾಡಿಕೋ..🙏🙏-
ಜೊತೆಯಲ್ಲಿ ನಡೆಯುವಾಗ
ಕೈ ಹಿಡ್ಕೊಂಡ್ ಓಡಾಡಲ್ಲ
ಭುಜ ಭುಜನು ತಾಗ್ಸಲ್ಲ
ಹೆಗಲ ಮೇಲೆ ಕೈ ಹಾಕಕ್ಕು ಬಿಡಲ್ಲ
ನಡು ರೋಡಲ್ಲಿ ತಬ್ಬಿಕೊಳ್ಳಲ್ಲ
ಯಾರು ಇಲ್ಲದಾಗ ಮುತ್ತು ಕೊಡಲ್ಲ
ನೀ ಯಾಕೀತರ...????-
ಹಾಗೇ ಅಲ್ಲ
ಬೆಂಕಿ ಉರಿದಂಗ
ಜೀವನಪರಿಯಂತ
ಒಬ್ಬರ ಮೇಲೊಬ್ಬರು
ಉರಿತಾನೆ ಇರಲಿ ಅಂತ
ಇರಬಹುದು...-