ಕಾಡುವ ಕಂಗಳಲಿ, ಕಣ್ಣೀರ ಜಾರಿದೇ,
ಅರಿತು ಕೊಳ್ಳದ ಮನದ ವೇದನೆ ಕೇಳಿ.
ಜೀವನಕೆ "ಅವನು" ಆಗುವೆಯೋ , ಅಥವಾ "ದೂತ" ನಂತೆ ನಗಿಸಿ ಮಾಯವಾಗುವೆಯೋ,
ಮನದರಿಸಿ ಸಿಯ ಮಾತು ಕೇಳದೇ ರಾಮನಂತೆ ಮರಗುಬೇಡವೊ....-
ಎಷ್ಟು ಕೇಳುವಿರೋ ತಿಳಿಯದು,
ಎಷ್ಟರಲ್ಲಿ ಅನ್ನೊದು ತಿಳಿಯದೇ ಅಷ್ಟರಲ್ಲೇ ಸ್ಪಷ್ಟವಾಗ... read more
ಬಾಲ್ಯದಲ್ಲಿ ಮೌನವಾಗಿದ್ದ ಸುಂದರ ಭಾವನೆಗಳು
ಯಾಕೋ ಇಂದು ಸದ್ದಿಲ್ಲದೆ ಸುದ್ದಿ ಮಾಡುತ್ತಿವೆ,
ಸವಿನೆನಪಿಗಳ ಬುತ್ತಿಯಲ್ಲಿ ಆಡಗಿದ್ದ ಸುಮಧುರ
ಪ್ರೀತಿಯ ಭಾವನೆಗಳು ವ್ಯಕ್ತವಾಗುತ್ತಿವೆ,
ಹೇಳಿಕೊಳ್ಳದೇ ಮನದಲ್ಲಿಯೇ ಪ್ರೀತಿಸಿ
ಮೂಕ ವೇದನೆಯಲ್ಲಿಯೇ ನನ್ನ ನೆನದು
ಮರೆಯಾದ ಚಲುವೆಯೇ ಇದೆಲ್ಲಾ ಹಂಚಿಕೊಳ್ಳುವಾಗ
ಖುಷಿಯ ಜೊತೆ ಕಣ್ಣೀರು ಬೆರೆತು ಮರಳಿ
ಮೌನವಾಗುತ್ತಿದೇ ಈ ಮನ.-
ಮನದ ಮಾತುಗಳು ಮೌನವಾಗಿವೆ,
ಮನಕ್ಕೆ ಹತ್ತಿರವಿರುವ ಮನಗಳ ಮಾತು ಕೇಳಿ,
ಮಾತುಗಳು ಬದಲಾವಣೆಯೋ ಅಥವಾ
ಮನದ ಬದಲಾವಣೆಯೋ .?
ಹೇಳುವ ಸಮಯದ ಕಾರಣವೋ
ಕೇಳುವ ಹೃದಯದ ವ್ಯಥೆಯೋ.?
ನೋವಲ್ಲಿವು ನಲಿವ ಮರೆಯದೆ
ಎತ್ತ ನೋಡಿದರೂ ಉತ್ತರ ಸಿಗದೇ
ಮನದ ಮಾತುಗಳಿಗೆ ಮನವೇ ಬಂಧಿಯಾಗಿ
ಒಂಟಿಯಾಗಿ ಕುಳಿತಿದೆ ಕತ್ತಲ ಕೊಣೆಯಲ್ಲಿ
ಒಡನಾಟದ ಮನವ ಮರಳಿ ಪಡೆಯಲು....-
ಸಮಸ್ಯೆಗಳ ಸಾಗರದಲ್ಲಿ
ಮನಕೆ ಮುದ ನೀಡುವಂತೆ
ಕಷ್ಟಗಳ ಪರಿಹರಿಸುವ
ಮುಗ್ದ ಮನಸಿನ ಚೆಲುವೆ ,
ಮಲೆನಾಡಿನ ಮದುಮಗಳು ,
ನನ್ನ ಹೆಂಡಿತಿಯ ಮುದ್ದಿನ ತಂಗಿಯೇ
ನಿನ್ನ ನಗು ಆ ಜಲಪಾತದಂತೆ
ಉಕ್ಕಿ ಹರಿಯಲಿ ,
ನಿನ್ನ ಆ ಪುಟ್ಟ ಕುಟುಂಬ ಮಲೆನಾಡಿನ ತಂಗಾಳಿಯಂತೆ ನೆಮ್ಮದಿಯಾಗಿ ಇರಲಿ ಎಂದು ಆಶಿಸುತ್ತಾ
ನಿನಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು🥰❤-
ಕಾಣದ ನಿನ್ನ ರೂಪ.
ಮನದಲ್ಲಿ ಮೂಡಿತು ನಿನ್ನದೇ ಪ್ರತಿರೂಪ.
ಭಾವನೆಗಳೇ ನಿನಗೆ ಅರ್ಪಿಸುವ ಪುಷ್ಪಾಲಾಪ.
ದಿನವೆಲ್ಲ ಈ ಜೀವಕ್ಕೆ ನಿನ್ನದೇ ಅಲಾಪ. ಬಳಿಬಂದು ಕೋರಿಕೆಯ ತೀರಿಸುವೆಯಾ ಓ ನನ್ನ ದಿವ್ಯದೀಪಾ...-
ವಿಫಲತೆಯು ಭಯದಿ ಮೊದಲಾಗಿ
ಆವಕಾಶದ ಸೋಲಿನಲಿ ಗೆಲುವನ್ನು
ಕಾಣುವ ಅಶಾವಾದಿಯಾಗಿ ನಿಲ್ಲುವುದು...-
ತಿಳಿದು / ತಿಳಿಯದೇ ಮಾಡಿದ ತಪ್ಪಿಗೆ
ತಿಳಿದವರಿಂದ ತಿಳಿವಳಿಕೆ ಮಾತು ಇರಲಿ
ತಿರಸ್ಕಾರದ ಮನೋಭಾವನೆ ಬೇಡ...-
ಒಮ್ಮೆ ನನ್ನ ಭಾವನೆಗಳನ್ನು ಅರ್ಥ ಮಾಡಿಕೋ,
ನಿನ್ನ ಮೇಲಿನ ಪ್ರೀತಿ ಎಷ್ಟೊಂದು ತಿಳಿಯುವುದು.
ಒಮ್ಮೆ ನನ್ನ ಪ್ರೀತಿಸಿ ನೋಡು,
ನಿನಗಾಗಿ ಈ ಜೀವ ಬದುಕಿದೆಂದು ತಿಳಿಯುವುದು.
ಒಮ್ಮೆ ನನ್ನ ಹೃದಯವ ಸಂದರ್ಶಿಸು,
ಆ ಹೃದಯದ ಬಡಿತ ನೀನೆಂದು ತಿಳಿಯುವುದು.
ನಿನ್ನ ಆಗಮನದ ಸುದ್ದಿಯ ಜೊತೆ
ಕೊನೆಯುಸಿರ ಬಿಗಿಹಿಡಿದು ಕಾಯುತ್ತಿರುವೆ,
ಒಮ್ಮೆ ಸ್ಪರ್ಶಿಸು ಆ ನಿನ್ನ ಪಾದವ
ಈ ಮರುಭೂಮಿಯ ಹೃದಯಕ್ಕೆ...-
ಕಾಡಿದ ಕಂಗಳು ಕಾಣಾದಾಗಿವೆ
ರೆಪ್ಪೆ ಮುಚ್ಚದೆ ಎತ್ತ ನೋಡಿದರೂ ಸುಳಿವು ಸಿಗದೇ ಮರಗುವಂತಾಗಿದೆ,
ಒಂದೇ ನಿಮಿಷದಲಿ ಮನ ದೋಚಿದ
ಮಾಯ ಕಂಗಳು ಎತ್ತ ಮಾಯಾವಾದವೋ...??-